ಅಂತರ್‌ ಗ್ರಾಮ ಹಾಕಿ ಪಂದ್ಯಾವಳಿ: ಇಂದು ಸೆಮಿಫೈನಲ್‌

KannadaprabhaNewsNetwork |  
Published : Nov 01, 2024, 12:06 AM IST
ಪಂದ್ಯಾವಳಿ | Kannada Prabha

ಸಾರಾಂಶ

ಅಂತರಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಬೇತು, ಯವಕಪಾಡಿ, ಬಲ್ಲಮಾವಟಿ, ಮರಂದೋಡ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದವು.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ್‌ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಬೇತು, ಯವಕಪಾಡಿ, ಬಲ್ಲಮಾವಟಿ (ವೈಟ್ ) ಮತ್ತು ಮರಂದೋಡ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ದಿನದ ಮೊದಲ ಪಂದ್ಯದಲ್ಲಿ ಮರಂದೋಡ ತಂಡ, ಕುಂಜಿಲ ತಂಡದ ವಿರುದ್ಧ 12-3 ಅಂತರದಿಂದ ಜಯಗಳಿಸಿತು. ಎರಡನೇ ಪಂದ್ಯ ಬೇತು ಮತ್ತು ಪುಲಿಕೋಟು ತಂಡಗಳ ನಡುವೆ ನಡೆಯಿತು. ಈ ಪಂದ್ಯವನ್ನು ಕರವಂಡ ಸಂತೋಷ್, ಎಡಕೇರಿ ನಾಣಯ್ಯ, ನುಚ್ಚಿಮಣಿಯಂಡ ಗಣೇಶ್ ಉದ್ಘಾಟಿಸಿದರು. ಈ ಪಂದ್ಯದಲ್ಲಿ ಬೇತು ತಂಡ 3-0 ಅಂತರದಿಂದ ಪುಲಿಕೋಟು ತಂಡದ ವಿರುದ್ಧ ಜಯಗಳಿಸಿತು. ರೋಚಕ ಪಂದ್ಯ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಬೇತು ತಂಡದ ಆಟಗಾರರಾದ ತಮ್ಮಯ್ಯ, ಅಯ್ಯಪ್ಪ, ಗ್ಯಾನ್ ತಲಾ ಒಂದು ಗೋಲು ಗಳಿಸಿದರು.

ಬಲ್ಲಮಾವಟಿ (ವೈಟ್) ಮತ್ತು ನಾಲಾಡಿ ತಂಡಗಳ ನಡುವೆ ಮೂರನೇ ಪಂದ್ಯ ನಡೆಯಿತು. ಪಂದ್ಯವನ್ನು ದಾನಿಗಳಾದ ಮಾಳೆಯಂಡ ವಿಜು ಅಚ್ಚಪ್ಪ, ಬೊಟ್ಟೋಳಂಡ ಹಂಸ ಮುತ್ತಪ್ಪ ಮತ್ತು ಚಂದುರ ನಿರಂಜನ್ ಉದ್ಘಾಟಿಸಿದರು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ನಾಲಡಿ ತಂಡ ನಾಲ್ಕು ಗೋಲುಗಳಿಸಿತು. ಬಲ್ಲಮಾವಟಿ ತಂಡ 5 ಗೋಲು ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.

ನಾಲ್ಕನೇ ಪಂದ್ಯ ಪೇರೂರು ಬಿ ಮತ್ತು ಯವಕಪಾಡಿ ತಂಡಗಳ ನಡುವೆ ನಡೆಯಿತು. ಈ ಪಂದ್ಯಾಟವನ್ನು ಬೊಳಿಯಾಡಿರ ಸಂತು ಸುಬ್ರಮಣಿ, ಅಪ್ಪಚೆಟ್ಟೋಳಂಡ ದೇವಯ್ಯ, ಕುಂಡ್ಯೋಳಂಡ ಶಬನ್ ಉದ್ಘಾಟಿಸಿದರು. ಯವಕಪಾಡಿ ತಂಡವು ಪೇರೂರು ಬಿ ತಂಡದ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿತು. ಅಂಜಪರವಂಡ ಹೇಮಂತ್ ಎರಡು ಗೋಲು ಗಳಿಸಿದರು. ಕರೋಟಿರ ಬೋಪಣ್ಣ ಒಂದು ಗೋಲು ಗಳಿಸಿದರು. ಅಂಜಪರವಂಡ ಹೇಮಂತ್ ಎರಡು ಗೋಲು ಗಳಿಸಿದರು. ಕರೋಟಿರ ಬೋಪಣ್ಣ ಮತ್ತು ಆಕಾಶ್ ತಲಾ ಒಂದು ಗೋಲು ಗಳಿಸಿದರು.

ಮಳೆಯಿಂದಾಗಿ ಸ್ಪರ್ಧೆ ಶುಕ್ರವಾರಕ್ಕೆ:

ಮಧ್ಯಾಹ್ನ ಸುರಿದ ಮಳೆಯಿಂದಾಗಿ ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳು ಮುಂದೂಡಲ್ಪಟ್ಟವು. ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ ಹಾಗೂ ಕಕ್ಕಬ್ಬೆ ಪ್ರೌಢಶಾಲೆಗಳ ನಡುವೆ ಆಯೋಜಿಸಲಾಗಿದ್ದ ಹಾಕಿ ಪಂದ್ಯಾಟವನ್ನು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆಯೋಜಿಸಲು ಹಾಕಿ ಸಮಿತಿ ನಿರ್ಧರಿಸಿತು.

ಕಾರ್ಯಕ್ರಮದಲ್ಲಿ ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವ ಚಿಣ್ಣಪ್ಪ, ದಾನಿ ಬೊಟ್ಟೋಳಂಡ ಹಂಸ ಮುತ್ತಪ್ಪ, ಕ್ರೀಡಾ ಉತ್ಸವದ ಪ್ರಾಯೋಜಕರು, ಕ್ರೀಡಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇಂದಿನ ಸೆಮಿಫೈನಲ್ ಪಂದ್ಯಗಳು

11 ಗಂಟೆಗೆ ಬಲ್ಲಮಾವಟಿ (ವೈಟ್ )- ಮರಂದೋಡ

12 ಗಂಟೆಗೆ ಯವಕಪಾಡಿ- ಬೇತು

ಮಹಿಳೆಯರ ಹಗ್ಗಜಗ್ಗಾಟ:

2 ಗಂಟೆಗೆ ನೆಲಜಿ ಎ-( ನಾಪೋಕ್ಲು-ನಾಲಡಿ ನಡುವಿನ ವಿಜೇತ ತಂಡ)

2.30ಕ್ಕೆ ಪೇರೂರು-(ಕೊಳಕೇರಿ-ಬಲ್ಲಮಾವಟಿ ವಿಜೇತ ತಂಡ)

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ