ಕೃಷಿ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚಲಿ: ಅಮೃತ ದೇಸಾಯಿ

KannadaprabhaNewsNetwork |  
Published : Dec 25, 2025, 02:15 AM IST
24ಡಿಡಬ್ಲೂಡಿ14ನರೇಂದ್ರ ಗ್ರಾಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಮಾಜಿ ಶಾಸಕ ಅಮೃತ ದೇಸಾಯಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ರೈತರಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾದ ಪರಿಣಾಮ ಕೃಷಿ ವಲಯ ಕ್ಷೀಣಿಸುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಕೃಷಿಗೆ ಅಡಚಣೆ ಆಗಬಾರದು ಎಂದ ಅವರು, ಪ್ರತಿ ವರ್ಷ ನರೇಂದ್ರ ದಲ್ಲಿ ರೈತ ದಿನಾಚರಣೆ ಮೂಲಕ ಕೃಷಿಕರನ್ನು ಸ್ಮರಿಸುತ್ತಿರುವುದು ಮಾದರಿಯಾಗಿದೆ.

ಧಾರವಾಡ:

ದೇಶದ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರ. ಆದರೆ, ರೈತರಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.

ತಾಲೂಕಿನ ನರೇಂದ್ರ ಗ್ರಾಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಗೆ‌ ಚಾಲನೆ ನೀಡಿದ ಅವರು, ರೈತರಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾದ ಪರಿಣಾಮ ಕೃಷಿ ವಲಯ ಕ್ಷೀಣಿಸುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಕೃಷಿಗೆ ಅಡಚಣೆ ಆಗಬಾರದು ಎಂದ ಅವರು, ಪ್ರತಿ ವರ್ಷ ನರೇಂದ್ರ ದಲ್ಲಿ ರೈತ ದಿನಾಚರಣೆ ಮೂಲಕ ಕೃಷಿಕರನ್ನು ಸ್ಮರಿಸುತ್ತಿರುವುದು ಮಾದರಿಯಾಗಿದೆ ಎಂದರು.

ಹಿರಿಯ‌ ನ್ಯಾಯವಾದಿ ಪಿ.ಎಚ್. ನೀರಲಕೇರಿ‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ‌ಲಭಿಸಿದ ಈ ವರೆಗೂ ರೈತರು ಹೊಸ ಹೊಸ‌ ಸವಾಲು ಎದುರಿಸುತ್ತಿದ್ದಾರೆ. ಸಮಸ್ಯೆಗಳು ನಿರಂತರವಾಗಿದ್ದರೂ ಯಾವುದೇ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ನೋವಿನ ಸಂಗತಿ. ಇಂತಹ ಸಂದಿಗ್ಧತೆಯಲ್ಲಿಯೂ ರೈತರು‌ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಸಮಾಧಾನಕರ‌ ಸಂಗತಿ ಎಂದು ಹೇಳಿದರು.

ಸ್ಥಳೀಯ ಮಳೆಪ್ಪಜ್ಜನ ಮಠದ ಸಂಗಮೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ನಾಗಪ್ಪ ಹಟ್ಟಿಹೊಳಿ, ಚನ್ನವೀರಗೌಡ ಪಾಟೀಲ, ಶಂಕರ ಕೋಮಾರ ದೇಸಾಯಿ, ಸಂಗಪ್ಪ ಆಯಟ್ಟಿ, ಮಂಜುನಾಥ ತಿರ್ಲಾಪೂರ, ವೀರಭದ್ರಪ್ಪ ಗಾಣಿಗೇರ, ಆತ್ಮಾನಂದ ಹುಂಬೇರಿ ಇದ್ದರು. ಈಶ್ವರ ಗಾಣಿಗೇರ ಅಧ್ಯಕ್ಷತೆ ವಹಿಸಿ ರೈತರನ್ನು ಸನ್ಮಾನಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಅವರಿಂದ ನಡೆದ ಹಾಸ್ಯ ಕಾರ್ಯಕ್ರಮ ಜನರನ್ನು ರಂಜಿಸಿತು. ರೈತ ದಿನಾಚರಣೆ ನಿಮಿತ್ತ ಬೆಳಗ್ಗೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಉದ್ಘಾಟಿಸಿದರು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ