ಕೃತಕ ಬುದ್ಧಿಮತ್ತೆ ಶಿಕ್ಷಣದಲ್ಲಿ ಆಸಕ್ತಿ ಶ್ಲಾಘನೀಯ: ಡಾ.ರಮೇಶ್

KannadaprabhaNewsNetwork |  
Published : Nov 17, 2025, 01:02 AM IST
14 HRR. 06 & Aಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ, ಕಾಲೇಜಿನ ಪ್ರೇರಣಾ ಕೋಶ ಹಾಗೂ ಉದ್ಯೋಗಕೋಶ  ಸಂಯುಕ್ತಾಶ್ರಯದಲ್ಲಿ  ಕೃತಕ ಬುದ್ಧಿಮತ್ತೆಯ ಪರಿಕರಗಳು ಕಾರ್ಯಗಾರ ನಡೆಯಿತು | Kannada Prabha

ಸಾರಾಂಶ

ಪದವಿ ಮಟ್ಟದಲ್ಲೇ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ, ಇನ್ನಿತರ ವಿದ್ಯಾರ್ಥಿ ಸ್ನೇಹಿತರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿರುವುದು ನಿಜಕ್ಕೂ ಶ್ಲಾಘಿಸುವ ವಿಷಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಪದವಿ ಮಟ್ಟದಲ್ಲೇ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ, ಇನ್ನಿತರ ವಿದ್ಯಾರ್ಥಿ ಸ್ನೇಹಿತರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿರುವುದು ನಿಜಕ್ಕೂ ಶ್ಲಾಘಿಸುವ ವಿಷಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಹರ್ಷ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ, ಕಾಲೇಜಿನ ಪ್ರೇರಣಾ ಕೋಶ ಹಾಗೂ ಉದ್ಯೋಗಕೋಶ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೃತಕ ಬುದ್ಧಿಮತ್ತೆಯ ಪರಿಕರಗಳು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಧಾರವಾಡದ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಒಂದು ವಾರ ನಡೆದ ಎಐ ಕುರಿತು ತರಬೇತಿ ಪಡೆದು ತಮ್ಮ ಸಹಪಾಠಿ ಸ್ನೇಹತರಿಗೂ ಕಲಿಸುವ ದೃಷ್ಠಿಯಿಂದ ಆಯೋಜಿಸುವ ಕಾರ್ಯಗಾರದ ಉಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.

ಪ್ರೇರಣಾ ಕೋಶದ ಸಂಚಾಲಕ ಶರಣು ಬಸವರಾಜ ಪಾಟೀಲ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆಯು ಪ್ರಸ್ತುತ ಕಾಲಘಟ್ಟದಲ್ಲಿ ಬಹುಮುಖ್ಯ ತಂತ್ರಜ್ಞಾನವಾಗಿದ್ದು, ಇದರ ಕಲಿಕೆ ಅವಶ್ಯವಾಗಿದೆ. ಕೃತಕ ಬುದ್ಧಿಮತ್ತೆಯ ತಂತ್ರಗಾರಿಕೆ ಕಲಿಯದೇ ಇದ್ದಲ್ಲಿ ಜಾಗತೀಕ ಸ್ಪರ್ಧೇಯಲ್ಲಿ ಹಿಂದೆ ಉಳಿಯ ಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಾದ ಹರೀಶ್ ಎಚ್. ಅರಾಣಿ ಮತ್ತು ವೀರೇಶ್ ಬಿ. ಕಾರ್ಯಾಗಾರ ನಡೆಸಿಕೊಟ್ಟರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಉದ್ಯೋಗಕೋಶದ ಸಂಚಾಲ ಡಾ.ಬಾಬು ಕೆ.ಎ, ಐಕ್ಯೂಎಸಿ ಸಹ ಸಂಯೋಜಕ ಅಬ್ದುಲ್ ಬಷೀರ್, ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಹರ್.ಕೆ.ಎಸ್ ಉಪಸ್ಥಿತರಿದ್ದರು.

- - -

-14HRR.06 & A:

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ, ಕಾಲೇಜಿನ ಪ್ರೇರಣಾ ಕೋಶ ಹಾಗೂ ಉದ್ಯೋಗಕೋಶ ಆಶ್ರಯದಲ್ಲಿ ಕೃತಕ ಬುದ್ಧಿಮತ್ತೆಯ ಪರಿಕರಗಳು ಕಾರ್ಯಾಗಾರ ನಡೆಯಿತು.

PREV

Recommended Stories

ಸಹಕಾರಿ ರಂಗದ ಸಾಧನೆಗೆ ಸಂಘಟಿತ ಪ್ರಯತ್ನ ಅಗತ್ಯ: ಜಾಸ್ಮಿನ್ ಕಿಲ್ಲೆದಾರ
ಮೋದಿ ಅಭಿವೃದ್ಧಿಗೆ ಜನ ಬೆಂಬಲ: ಸುನಿಲ್‌ ಕುಮಾರ್‌