ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರತಿಮೆಗೆ ಗೌರವ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಕಡೂರುರಾಷ್ಟ್ರದ ಪ್ರಜೆಗಳಿಗೆ ಸಂವಿಧಾನದಡಿ ನೀಡಿರುವ ಹಕ್ಕುಗಳನ್ನು ಪಡೆಯಲು ತೋರುವಷ್ಟೇ ಆಸಕ್ತಿಯನ್ನು ಕರ್ತವ್ಯಗಳ ನಿರ್ವಹಣೆಗೂ ಇರಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಭಾನುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದರು. ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯ. ಸೌಹಾರ್ಧ ತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷವಾಗಿ ರಾಜ್ಯಾದ್ಯಂತ ಮಾನವ ಸರಪಳಿಯೊಂದಿಗೆ ವಿನೂತನ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಒಗ್ಗಟ್ಟಿನ ಸಂದೇಶ ಸಾರಲು ಸಂವಿಧಾನಕ್ಕೆ ಗೌರವ ಸಲ್ಲಿಸುವ ಮುಖ್ಯ ಆಶಯಕ್ಕೆ ನಾವೆಲ್ಲರೂ ಸಾಕ್ಷೀಕರಿಸಿದ್ದೇವೆ ಎಂದರು.ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ರೂಪಿಸಿರುವ ಸಂವಿಧಾನವನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಅದರ ಪ್ರಮುಖ ಅಂಶಗಳ ಮಾಹಿತಿ ಪಡೆದು ಆಚರಣೆಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾನುವಾರ ನಿಗದಿತ ಏಕ ಕಾಲದಲ್ಲಿ ಮಾನವ ಸರಪಳಿ ನಿರ್ಮಾಣವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ವಿಶೇಷ ಮಾನವ ಸರಪಳಿ ನಿರ್ಮಾಣಕ್ಕೆ ವಿವಿಧ ಸಂಘ ಸಂಸ್ಥೆಗಳು ಸಾಥ್ ನೀಡುವ ಮೂಲಕ ಯಶಸ್ವಿಗೊಳಿಸಿದವು. ಪಟ್ಟಣದ ಬಿ.ಎಚ್. ರಸ್ತೆ, ಯು.ಬಿ. ರಸ್ತೆ ಹಾಗೂ ಕನಕ ವೃತ್ತಗಳ ಭಾಗದಲ್ಲಿ ಶಾಲಾ ಮಕ್ಕಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್ ಸಂವಿಧಾನ ಪ್ರತಿಜ್ಞಾವಿಧಿ ಭೋಧಿಸಿದರು. ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ , ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿ ರಮೇಶ್, ಮರುಗುದ್ದಿಮನು, ಸೈಯ್ಯದ್ ಯಾಸೀನ್, ಮಂಡಿ ಇಕ್ಬಾಲ್, ಲತಾರಾಜು, ಹಾಲಮ್ಮಸಿದ್ರಾಮಪ್ಪ, ಜ್ಯೋತಿ ಆನಂದ್, ಸುಧಾ ಉಮೇಶ್, ಡಿಎಸ್‍ಎಸ್ ಮುಖಂಡರಾದ ಕೃಷ್ಣಪ್ಪ, ಶೂದ್ರ ಶ್ರೀನಿವಾಸ್, ಟಿ.ಮಂಜಪ್ಪ, ಲಕ್ಷ್ಮಣ್, ಶ್ರೀಕಾಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ, ಆಸಂದಿ ಕಲ್ಲೇಶ್, ವಿ.ಎ. ಮಂಜುನಾಥ್, ಸಿ.ಪ್ರಕಾಶ್, ಕೆ.ವಿ.ಮಂಜುನಾಥ್ , ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಇದ್ದರು.15ಕೆಕೆಡಿಯು1.ಕಡೂರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಂವಿಧಾನ ಪ್ರತಿಜ್ಞೆ ಭೋಧಿಸಿದರು. ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಪ್ರವೀಣ್, ಮಂಜುಳಾ ಚಂದ್ರು, ನಟರಾಜ್, ಕೆ.ಎಸ್.ಮಂಜುನಾಥ್, ಮನು, ಈರಳ್ಳಿ ರಮೇಶ್ ಮತ್ತಿತರಿದ್ದರು.