ಇಂಟರ್‌ ಮೀಡಿಯಾ ಬ್ಯಾಡ್ಮಿಂಟನ್‌ ಪಂದ್ಯಾವಳಿ

KannadaprabhaNewsNetwork |  
Published : Jul 28, 2024, 02:05 AM IST
ಬೇಲೂರು ಫೋಟೋವಿಷ್ಣು ಶೆಟಲ್   ಬ್ಯಾಟ್ ಮೆಟೆನ್ ಅಕಾಡಮಿ ವತಿಯಿಂದ ಇಂಟರ್ ಮೀಡಿಯಾ ಟೂರ್ನಮೆಂಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಬೇಲೂರು ಪಟ್ಟಣದ ವಿಷ್ಣು ಅಕಾಡೆಮಿ ಸಂಸ್ಥಾಪಕರಾದ ರಾಘವೇಂದ್ರ ಹಾಗೂ ಅವರ ಪುತ್ರ ವಾದಿರಾಜ್ ಪ್ರತಿವರ್ಷದಂತೆ ಪುರುಷರ ವಿಭಾಗದ ಡಬಲ್ಸ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯಲ್ಲಿ ಸುಮಾರು ೧೮ ತಂಡಗಳು ಭಾಗವಹಿದ್ದವು. ಕಾರ್ಯಕ್ರಮವನ್ನು ಕರವೆ ಅಧ್ಯಕ್ಷ ವಿ ಎಸ್ ಭೋಜೇಗೌಡ ಸಂಸ್ಥೆಯ ವ್ಯವಸ್ಥಾಪಕ ವಾದಿರಾಜ್ ಉದ್ಘಾಟಿಸಿದರು.

ಬೇಲೂರು: ವಿಷ್ಣು ಶೆಟಲ್ ಬ್ಯಾಡ್ಮಿಂಟನ್‌ ಅಕಾಡೆಮಿ ವತಿಯಿಂದ ಇಂಟರ್ ಮೀಡಿಯಾ ಪಂದ್ಯಾವಳಿ ಆಯೋಜಿಸಲಾಗಿತ್ತು.

ಪಟ್ಟಣದ ವಿಷ್ಣು ಅಕಾಡೆಮಿ ಸಂಸ್ಥಾಪಕರಾದ ರಾಘವೇಂದ್ರ ಹಾಗೂ ಅವರ ಪುತ್ರ ವಾದಿರಾಜ್ ಪ್ರತಿವರ್ಷದಂತೆ ಪುರುಷರ ವಿಭಾಗದ ಡಬಲ್ಸ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯಲ್ಲಿ ಸುಮಾರು ೧೮ ತಂಡಗಳು ಭಾಗವಹಿದ್ದವು. ಕಾರ್ಯಕ್ರಮವನ್ನು ಕರವೆ ಅಧ್ಯಕ್ಷ ವಿ ಎಸ್ ಭೋಜೇಗೌಡ ಸಂಸ್ಥೆಯ ವ್ಯವಸ್ಥಾಪಕ ವಾದಿರಾಜ್ ಉದ್ಘಾಟಿಸಿದರು.

ನಂತರ ಮಾತನಾಡಿದ ಕರವೇ ಅಧ್ಯಕ್ಷ ವಿ ಎಸ್ ಭೋಜೇಗೌಡ, ಬೇಲೂರು ಪಟ್ಟಣದಲ್ಲಿ ಒಳಾಂಗಣ ಬ್ಯಾಡ್ಮಿಂಟನ್‌ ಕ್ರೀಡಾಂಗಣ ಸ್ಥಾಪಿಸಿ ತಾಲೂಕಿನ ಪ್ರತಿಯೊಬ್ಬ ಕ್ರೀಡಾಪಟುವನ್ನು ಪ್ರೋತ್ಸಾಹಿಸುವ ಮೂಲಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಂತಹ ಹಲವರು ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅದರಂತೆ ಅವರ ಕುಟುಂಬದವರು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವುದು ಅಭಿನಂದನೆ ಸಲ್ಲಿಸುತ್ತೇವೆ ಎಂದರು.ಇದೇ ವೇಳೆ ಕ್ರೀಡಾಕೂಟದಲ್ಲಿ ರೋಟರಿ ಅಧ್ಯಕ್ಷ ಶಂಭುಗೌಡ ಹಾಗೂ ರೊಹಿತ್ ಪ್ರಥಮ ಸ್ಥಾನ , ದ್ವಿತೀಯ ಬಹುಮಾನವನ್ನು ಭೊಜೇಗೌಡ ಹಾಗೂ ವಿಜಿಕುಮಾರ್ ಪಡೆದರೆ, ತೃತೀಯ ಬಹುಮಾನವನ್ನು ಹಳೇಬೀಡಿನ ವಿರುಪಾಕ್ಷ ತಂಡ ಪಡೆದುಕೊಂಡರು. ಇವರಿಗೆ ಬೇಲೂರು ಕಬ್ಬಡಿ ಸ್ಪೋರ್ಟ್ಸ್ ಅಧ್ಯಕ್ಷ ಸಿ ಎಚ್ ಮಹೇಶ್ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಕೀಲರಾದ ದೇವರಾಜ್, ವಾದಿರಾಜ್, ರಾಘವೇಂದ್ರ, ಸುನೀಲ್, ನವೀನ್, ಭರತ್, ಪಾಂಡು ಹಾಗೂ ಮಾರುತಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ