ಒಳ ಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆಗೆ ಚಾಲನೆ

KannadaprabhaNewsNetwork | Published : May 8, 2025 12:32 AM

ಸಾರಾಂಶ

ಸಮೀಕ್ಷೆ ಕಾರ್ಯಕ್ರಮಕ್ಕೆ ತಹಶೀಲ್ದಾರ ಶೈಲೇಶ ಪರಮಾನಂದ ಚಾಲನೆ ನೀಡಿ ಸಮಗ್ರ ಸಮೀಕ್ಷೆಗೆ ಗಣತಿದಾರರೊಂದಿ ಸಾರ್ವಜನಿಕರು ಸಹಕರಿಸುವಂತೆ ಕರೆನೀಡಿದರು.

ದಾಂಡೇಲಿ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಜಾತಿ ದತ್ತಾಂಶವನ್ನು ಸಂಗ್ರಹಿಸಲು ಗಣತೆದಾರರು ಮನೆ ಮನೆಗೆ ಗಣತಿಗಾಗಿ ಭೇಟಿ ಕೊಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಸಮೀಕ್ಷೆ ಕಾರ್ಯಕ್ರಮಕ್ಕೆ ತಹಶೀಲ್ದಾರ ಶೈಲೇಶ ಪರಮಾನಂದ ಚಾಲನೆ ನೀಡಿ ಸಮಗ್ರ ಸಮೀಕ್ಷೆಗೆ ಗಣತಿದಾರರೊಂದಿ ಸಾರ್ವಜನಿಕರು ಸಹಕರಿಸುವಂತೆ ಕರೆನೀಡಿದರು.

ಕಂದಾಯ ನಿರೀಕ್ಷಕ ಗೋಪಿ ಚವ್ಹಾಣ, ಶಿರಸ್ತೇದಾರ ಸುರೇಶ ಅಡವಿ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ ಗಣತಿದಾರರು ಮತ್ತು ಗಣತಿದಾರರ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಕೈಕೊಟ್ಟ ಮೊಬೈಲ್‌ ಆ್ಯಪ್:

ಕೆಲವು ಗಣತಿದಾರರು ಬೆಳಗಿನಜಾವ ಸುಮಾರು ೬:೩೦ಕ್ಕೆ ಗಣತಿ ಮಾಡಲು ಹೋದಾಗ ಜಾತಿ ಮಾಹಿತಿ ಭರ್ತಿ ಮಾಡಬೇಕಿದ್ದ ಸರ್ಕಾರಿ ಆ್ಯಪ್ ತೆರೆದುಕೊಳ್ಳದೇ ಗಣತಿದಾರರ ಉತ್ಸಾಹಕ್ಕೆ ತಡೆಯುಂಟು ಮಾಡಿತು. ಗಣತಿದಾರರು ಮನೆಗೆ ಬಂದಿರುವ ಘಟನೆ ನಡೆದಿದೆ. ನಂತರ ಕಾರ್ಯಾಲಯ ಸಂಪರ್ಕಿಸಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕಾಯಿತು. ಸುಮಾರು ೧೨ ಗಂಟೆಯ ನಂತರ ತೆರೆದುಕೊಂಡ ಆ್ಯಪ್‌ಗಳಲ್ಲಿ ಮೊದಲ ದಿನ ಕಷ್ಟಪಟ್ಟು ಗಣತಿದಾರರು ಆ್ಯಪ್ ನಿರ್ವಹಿಸಿ ಮಾಹಿತಿಯನ್ನು ತುಂಬುವಲ್ಲಿ ಯಶಸ್ವಿಯಾದರು. ಕಲ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಗಣತಿ ಕಾರ್ಯಕ್ಕೆ ತಡೆಯುಂಟಾಗಿದ ಎಂದು ಹೆಸರು ಹೆಳಲು ಇಚ್ಚಿಸದ ಗಣತಿದಾರರು ತಿಳಿಸಿದ್ದಾರೆ.

ಈ ಆ್ಯಪ್ ಇಲ್ಲದೇ ಸಮೀಕ್ಷೆಯ ದತ್ತಾಂಶವನ್ನು ಸಂಗ್ರಹಿಸುವುದು ಅಸಾಧ್ಯ. ಜಾತಿ ದತ್ತಾಂಶವನ್ನು ಸಂಗ್ರಹಿಸಿದ ನಂತರ ಕೊನೆಗೆ ಕುಟುಂಬಸ್ಥರ ಫೋಟೋವನ್ನು ಅಪ್ಲೋಡ್ ಮಾಡುವ ವ್ಯವಸ್ಥೆ ಇರುವುದರಿಂದ ಕೆಲವು ಗಣತಿದಾರರಿಗೆ ಗೊಂದಲ ಉಂಟಾಗಿದೆ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಗಣತಿ ಕಾರ್ಯ ನಡೆಸಬೇಕಲ್ಲ ಎನ್ನುವುದು ಅಭಿಪ್ರಾಯ.

ಮೊದಲ ದಿನ ನಿರಾಶೆ:

ಗಣತಿ ಮಾಡಲು ಕೊಟ್ಟಿರುವ ಸಮಯ ಮೇ ೫ರಿಂದ ೧೭ರವರೆಗೆ ಮಾತ್ರ ಇರುವದರಿಂದ ಕನಿಷ್ಠ ಒಬ್ಬ ಗಣತಿದಾರರಿಗೆ ೭೦೦ ರಿಂದ ೧೨೦೦ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಅಗತ್ಯ ಇರುವುದರಿಂದ ಆದಷ್ಟು ಬಿಸಿಲಿನ ಬೇಗೆ ಹೆಚ್ಚಾಗುವ ಮುನ್ನವೇ ಗಣತಿ ಕಾರ್ಯ ಮುಗಿಸಲು ಬೆಳಗಿನಜಾವವೇ ಸುಮಾರು ೧೦ ಗಂಟೆ ಒಳಗೆ ಸಾಧ್ಯವಾದಷ್ಟು ಮನೆಗಳ ಗಣತಿ ಕಾರ್ಯ ಮಾಡಬೇಕು. ಆದರೆ ನೆಟ್‌ವರ್ಕ್ ಸಮಸ್ಯೆ ಹಾಗೂ ಆ್ಯಪ್ ಕೈಕೊಡುತ್ತಿರುವುದರಿಂದ ಗಣತಿ ವೇಗಕ್ಕೆ ತಡೆ ಬೀಳುತ್ತಿರುವುದು ಗಣತಿದಾರರಿಗೆ ಕಷ್ಟವಾಗುತ್ತಿದೆ.

Share this article