ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಅತ್ಯಗತ್ಯ: ವೆಂಕಟೇಶ್ ದೊಡ್ಡೇರಿ

KannadaprabhaNewsNetwork |  
Published : Jan 31, 2025, 12:48 AM IST
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಸರ್ಕಾರ ತಡ ಮಾಡದೆ ಆದೇಶ ಮಾಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. | Kannada Prabha

ಸಾರಾಂಶ

ರಾಜ್ಯದ 31 ಜಿಲ್ಲೆಗಳಲ್ಲಿನ 13 ಜಿಲ್ಲೆಗಳಲ್ಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿಗಳ ಬಗ್ಗೆ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ನ್ಯಾ.ನಾಗಮೋಹನ ದಾಸ್ ಆಯೋಗ ರಚನೆ ಮಾಡಲಾಗಿದೆ. ನಾವು ನಮ್ಮ ಪಾಲಿನ ಹಕ್ಕು ನಾವು ಕೇಳುತ್ತಿದ್ದೇವೆ .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಒಳ ಮೀಸಲಾತಿ ಜಾರಿ ಮುಂದೂಡಲು ಸರ್ಕಾರ ಯಾವುದೇ ತಂತ್ರಗಾರಿಕೆ ಮಾಡದೆ ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಮಾದಿಗ ಸಮುದಾಯದ ಮುಖಂಡ ಎಚ್.ವೆಂಕಟೇಶ್ ದೊಡ್ಡೇರಿ ಆಗ್ರಹಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾದಿಗ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವರದಿಯನ್ನು ಬಿಡುಗಡೆ ಮಾಡಲು ಆಗದಿದ್ದಲ್ಲಿ ತುರ್ತು ಮಧ್ಯಂತರ ವರದಿಯನ್ನಾದರೂ ಜಾರಿ ಮಾಡಬೇಕು. ತಮಿಳುನಾಡು ಮಾದರಿಯಲ್ಲಿ ಶೈಕ್ಷಣಿಕರವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಶೇ. 6ರಷ್ಟು ಮೀಸಲಾತಿ ನೀಡಬೇಕು. ಒಳ ಮೀಸಲಾತಿ ಜಾರಿಯಾದರೆ, ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಜಾತಿಗಳಿಗೂ ನ್ಯಾಯ ಸಿಗುತ್ತದೆ. ಈ ಬಗ್ಗೆ ತಕರಾರು ಇದ್ದಲ್ಲಿ, 2004ರಲ್ಲಿ ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಆರುಂಧತಿಯಾರ್ ಸಮುದಾಯಕ್ಕೆ ನೀಡಿದ ಶೇಕಡಾ 3ರಷ್ಟು ಮೀಸಲಾತಿ ಮಾದರಿಯ ದತ್ತಾಂಶಗಳನ್ನು ಪರಾಮರ್ಶಿಸಬಹುದು ಎಂದರು.

ಮಾದಿಗ ಸಮುದಾಯಕ್ಕೆ 6ರಷ್ಟು ಮೀಸಲಾತಿ ಕೊಡುವಂತೆ ಪಕ್ಷಾತೀತ ಹೋರಾಟ ಅಗತ್ಯ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡದೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದರು.

ಮುಖಂಡ ರಾಮಕೃಷ್ಣಪ್ಪ ದೊಡ್ಡತುಮಕೂರು ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿನ 13 ಜಿಲ್ಲೆಗಳಲ್ಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿಗಳ ಬಗ್ಗೆ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ನ್ಯಾ.ನಾಗಮೋಹನ ದಾಸ್ ಆಯೋಗ ರಚನೆ ಮಾಡಲಾಗಿದೆ. ನಾವು ನಮ್ಮ ಪಾಲಿನ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ವೆಂಕಟೇಶ್ ದೊಡ್ಡತುಮಕೂರು, ಹನುಮಂತಯ್ಯ ಹಳೇಕೋಟೆ, ತಳವಾರ ನಾಗರಾಜು, ಹರ್ಷ ಹಾದ್ರಿಪುರ, ವಕೀಲರಾದ ಕಾಂತರಾಜು, ತೂಬಗೆರೆ ವೆಂಕಟೇಶ್, ಮಂಜುನಾಥ್, ಆರ್.ವಿ.ಶಿವಕುಮಾರ್, ನಾರಸಿಂಹನಹಳ್ಳಿ ಗಂಗರಾಜು,ಕುಂಬಾರಪೇಟೆ ನಾರಾಯಣಪ್ಪ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿ ಜೋಡಣೆ ವಿರುದ್ಧ ಹೋರಾಟಕ್ಕೆ ಕೈಜೋಡಿಸಲು ಕರೆ
ಮರ್ಯಾದಾ ಹತ್ಯೆ: ದಲಿತ ಸಂಘಟನೆಗಳ ಪ್ರತಿಭಟನೆ