)
- ಮಾದಿಗರ ಕೂಗನ್ನು ಹತ್ತಿಕ್ಕುವ ದುಸ್ಸಾಹಸ ಬೇಡ: ಪ್ರತಿಭಟನೆಯಲ್ಲಿ ನಿಂಗರಾಜ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗೆ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಯಥಾವತ್ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತಪರ ಸಂಘಟನೆಗಳು, ವಿವಿಧ ಪಕ್ಷಗಳ ಮಾದಿಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.ನಗರದ ಹಳೇ ಪ್ರವಾಸಿ ಮಂದಿರದಿಂದ ಶ್ರೀ ಜಯದೇವ ವೃತ್ತದವರೆಗೆ ಬಿಜೆಪಿ ಮಾಯಕೊಂಡ ಕ್ಷೇತ್ರದ ಮುಖಂಡ, ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ ಇತರರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ, ಪರಿಶಿಷ್ಟ ಜಾತಿ ಜನರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಸಿಎಂ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ಡಾ.ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅಣತಿಯಂತೆ ಮೀಸಲಾತಿ ಜಾರಿಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಗಾಗಿ ನೇಮಿಸಿದ್ದ ನಾಗಮೋಹನ ದಾಸ್ ಆಯೋಗವು ಶೇ.56 ಮೀಸಲಾತಿಯಲ್ಲಿ ಮಾದಿಗರಿಗೆ ಶೇ.6, ಹೊಲಯ ಸಂಬಂಧಿತ ಸಮುದಾಯಕ್ಕೆ ಶೇ.6, ಭೋವಿ- ಲಂಬಾಣಿ- ಕೊರಚ- ಕೊರಮ ಇತ್ಯಾದಿ ಜಾತಿಗಳಿಗೆ ಶೇ.5 ಮೀಸಲಾತಿ ನೀಡಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಒಳ ಮೀಸಲಾತಿ ಕಾಯ್ದೆಯಾಗಿ ರೂಪುಗೊಂಡಿದೆ. ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು, ಒಳಮೀಸಲಾತಿ ಕಾಯ್ದೆ ಗಾಳಿಗೆ ತೂರಿದೆ. ಒಳಮೀಸಲಾತಿ ಸಿಗೋವರೆಗೂ ನಾವು ಸುಮ್ಮನಿರೊಲ್ಲ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಶೇ.6:6:5 ಅನುಪಾತದಂತೆ ಸಂಪೂರ್ಣ ಜಾರಿಗೆ ಬಜೆಟ್‌ನಲ್ಲಿ ಸಚಿವರು, ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. 56 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೇ, ಕೇವಲ ಶೇ.50ರ ಮೀಸಲಾತಿ ಆಧಾರಿತವಾಗಿ ಹಳೇ ರೋಸ್ಟರ್ ಪದ್ಧತಿಯಲ್ಲಿ ತುಂಬಲು ಹೊರಟಿದ್ದು ಸರಿಯಲ್ಲ ಎಂದ ಅವರು, ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಿಸುವ ಎಚ್ಚರಿಕೆ ನೀಡಿದರು.
- - -
* ಬೇಡಿಕೆಗಳೇನೇನು? - ಕಾನೂನುಬದ್ಧ ಒಳ ಮೀಸಲಾತಿ ಕಾಯ್ದೆಯಡಿ ಬರುವ ಪ್ರವರ್ಗ ಈ 6ರ ಅನುಪಾತದಲ್ಲಿ 56 ಸಾವಿರ ಹುದ್ದೆ ತುಂಬಬೇಕು.
- ಶಿಕ್ಷಣದಲ್ಲಿ ಕೆ.ಜಿ.ಯಿಂದ ಪಿಎಚ್.ಡಿವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮಕ್ಕಳು, ಯುವಜನರಿಗೆ 6:6:5ರ ಅನುಪಾತದಲ್ಲಿ ಒಳಮೀಸಲಾತಿ ಸೌಲಭ್ಯ ಸಿಗಬೇಕು.
- - -
- ಆಲೂರು ನಿಂಗರಾಜ, ಹಿರಿಯ ಮುಖಂಡ, ಮಾದಿಗ ಸಮಾಜ.
- - -28ಕೆಡಿವಿಜಿ3, 4:
ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ದಾವಣಗೆರೆ ಜಯದೇವ ವೃತ್ತದಲ್ಲಿ ಮಾದಿಗ ಸಮುದಾಯ ದಿಢೀರನೇ ರಸ್ತೆ ತಡೆ ನಡೆಸಿತು.