ಕನ್ನಡಪ್ರಭ ವಾರ್ತೆ ಕೋಲಾರಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಳಮೀಸಲಾತಿ ಸಮೀಕ್ಷೆಗೆ ನಿವೃತ್ತ ನ್ಯಾಯಾದೀಶರಾದ ನಾಗಮೋಹನ್ ದಾಸ್‌ರನ್ನು ನೇಮಕ ಮಾಡಿದೆ, ಮೇ.೫ ರಿಂದ ಮೇ.೧೭ರವರೆಗೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಲಿದೆ ಮೇ.೧೯ ರಿಂದ ೨೧ರವರೆಗೆ ವಿಶೇಷವಾದ ಶಿಬಿರಗಳನ್ನು ಆಯೋಜಿಸಿದೆ. ಮೇ.೧೯ ರಿಂದ ೨೩ ವರೆಗೆ ಆನ್‌ಲೈನ್‌ನಲ್ಲೂ ಸಹ ನೊಂದಾಯಿಸಿಕೊಳ್ಳುವ ಅವಕಾಶ ಕಲ್ಪಿಸಿದೆ ಎಮದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ವರ್ಗದಲ್ಲಿ ೧೦೧ ಉಪಜಾತಿಗಳಿದ್ದು ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿದೆ, ಈ ಸಂಬಂಧವಾಗಿ ನಾವುಗಳ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು ಪ್ರವಾಸ ಕೈಗೊಂಡು ಸಮುದಾಯದವರಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರಕ್ಕೆ ನಿಖರವಾದ ದತ್ತಾಂಶ ನೀಡಿ ಸಾಮಾಜಿಕ ನ್ಯಾಯ ಪಡೆಯುವ ಪ್ರಯತ್ನವಾಗಿ ಸಮಿತಿಗಳನ್ನು ರಚಿಸಿಕೊಂಡು ಪ್ರವಾಸದ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು. ನಾವೆಲ್ಲಾ ಬಲಗೈ ಗುಂಪಿಗೆ ಸೇರಿದವರಾಗಿದ್ದೇವೆ, ರಾಜ್ಯದ ೮ ಜಿಲ್ಲೆಗಳಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಬಲಗೈನವರಾದರರೂ ಆದಿ ಕರ್ನಾಟಕ ಎಂದು ನಮೂದಿಸಲಾಗಿದೆ. ಸಚಿವ ಕೆ.ಎಚ್.ಮುನಿಯಪ್ಪ, ಕೆ.ಪಿ.ಸಿ.ಸಿ ಮುಖಂಡ ಗೌತಮ್ ಸಹ ಆದಿ ಕರ್ನಾಟಕದವರು, ಆದರೆ ತುಮಕೂರಿನ ಡಾ.ಜಿ.ಪರಮೇಶ್ ಆದಿ ದ್ರಾವಿಡ ಎಂದು ನೋಂದಾಯಿಸಿದ್ದಾರೆ ಹೀಗಾಗಿ ಉಪಜಾತಿಗಳ ಸ್ಪಷ್ಟನೆ ಇಲ್ಲವಾಗಿದೆ, ಆದರೆ ಬೋವಿ, ಕೊರಚ, ಲಂಬಾಣಿ ಮುಂತಾದ ಉಪಜಾತಿಗಳ ಬಗ್ಗೆ ಸಮಸ್ಯೆ ಇಲ್ಲ ಎಂದರು.ಮಾದಿಗ, ಆದಿಕರ್ನಾಟಕ ಎಂದು ಇದ್ದರೆ ಅವರು ಬಲಗೈ ಗುಂಪಿಗೆ ಸೇರಿದವರು ಅದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಗೈನವರು ಆಗಿದ್ದರೂ ಸಹ ಆದಿದ್ರಾವಿಡ ಎಂದು ದಾಖಲಿಸಿದ್ದರೆ, ರೇಣುಕ ಯಲ್ಲಮ್ಮ ಸೇರಿದಂತೆ ಬಹುತೇಕ ಬಲಗೈ ಸಮುದಾಯಕ್ಕೆ ಸೇರಿದ್ದಾರೆ, ಕೆ.ಜಿ.ಎಫ್‌ನಲ್ಲಿ ಆದಿ ದ್ರಾವಿಡ ಹಿಂದು ಎಂದು ಬರೆಸುತ್ತಾರೆ, ಆದರೆ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಇವುಗಳು ಜಾತಿಗಳ ಹೆಸರಲ್ಲ, ಮಾದಿಗ, ಹೊಲಯ ಎಂಬ ಬಗ್ಗೆ ಕೆಲವರಿಗೆ ಮುಜುಗರದಿಂದಾಗಿ ಒಳಮೀಸಲಾತಿಯ ಉಪಜಾತಿಗಳಿಂದ ಪರಿಶಿಷ್ಟ ವರ್ಗದವರಲ್ಲಿ ನಿರ್ದಿಷ್ಟವಾದ ದತ್ತಾಂಶ ಮಾಹಿತಿ ವರದಿಯ ಬಗ್ಗೆ ಗೊಂದಲ ಇರುವುದರಿಂದ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಈ ಹಿಂದೆ ಜಾತಿ ಗಣತಿಯಲ್ಲಿ ಆದಿ ಕರ್ನಾಟಕ ಎಂದು ಬರೆಸಿದ್ದರೆ ಉಪಜಾತಿ ಹೊಲಯ, ಮಾದಿಗ, ಛಲವಾದಿ ಎಂದು ಬರೆಸಲು ಮುಜುಗರ ಆದವರು ತಮ್ಮ ಉಪಜಾತಿಯ ಜೊತೆಗೆ ಆದಿ ಕರ್ನಾಟಕ ಎಂದು ಬರೆಸಬೇಕು, ಸಮೀಕ್ಷೆಗೆ ಬಂದಾಗ ಸಮರ್ಪಕವಾಗಿ ಮೂಲಜಾತಿಯ ಜೊತೆಗೆ ಉಪಜಾತಿಯ ಹೆಸರಿನ ಮಾಹಿತಿ ನೀಡದಿದ್ದರೆ ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗಳಿಗೂ ಸರ್ಕಾರದಿಂದ ಸಿಗಬೇಕಾದ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ, ಉದಾಹರಣೆಗೆ ಚಿಕ್ಕತಾಳಿ, ದೊಡ್ಡತಾಳಿ, ಛಲವಾದಿ, ಬಲಗೈ, ಎಡಗೈ ಎಂದು ಬರೆಸಿರುವವರು ಹೊಲಯ ಆದಿಕರ್ನಾಟಕ ಎಂದು ಬರೆಸಬೇಕು ಎಂದರು.ಚಿತ್ರದುರ್ಗ, ರಾಯಚೂರು ಮುಂತಾದ ಕಡೆಗಳಲ್ಲಿ ಎಡಗೈ ಸಮುದಾಯದವರು ಹೆಚ್ಚಾಗಿದ್ದಾರೆ, ಬಳ್ಳಾರಿ ಜಿಲ್ಲೆಯಲ್ಲಿ ೬ ವಿಧಾನ ಸಭಾ ಕ್ಷೇತ್ರವು ಮೀಸಲಾತಿ ಹೊಂದಿದೆ, ನಮ್ಮಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಎಡಗೈನವರಾಗಿದ್ದು ಅವರ ಸಂಖ್ಯೆ ಕಡಿಮೆ ಇದ್ದರೂ ಕೋಲಾರ ಲೋಕಸಭಾ ಕ್ಷೇತ್ರದಿಂದ ೭ ಭಾರಿ ಆಯ್ಕೆಯಾಗಿದ್ದರು, ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದಲ್ಲಿ ರೂಪ ಶಶಿಧರ್ ೨ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಉದಾಹರಿಸಿ ಕಾಯ್ದೆ ೩೪೧ ವಿಧಿಯಡೆ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಆಧಾರದಲ್ಲಿ ಜಾತಿ ಗಣತಿ ಆಗಬೇಕಾಗಿದ್ದು ಸಮುದಾಯದವರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ಆದಿ ಕರ್ನಾಟಕ ಬಲಗೈ ಆದರೆ ಆದಿ ದ್ರಾವಿಡ ಎಡಗೈ ಎಂದು ಗುರುತಿಸಿ ಕೊಂಡಿದ್ದಾರೆ, ಆಂಧ್ರ ಪ್ರದೇಶದಲ್ಲಿ ಓ.ಬಿ.ಸಿ ಗುಂಪಿಗೆ ಸೇರಿದವರೆಲ್ಲಾ ಕರ್ನಾಟಕದಲ್ಲಿ ಪರಿಶಿಷ್ಟಜಾತಿಯವರೆಂದ ಪ್ರಮಾಣ ಪತ್ರ ಪಡೆದಿದ್ದಾರೆ, ರಾಜಕೀಯದ ದುರುದ್ದೇಶಕ್ಕಾಗಿ ಚಿಕ್ಕತಾಳಿ ದೊಡ್ಡತಾಳಿ, ಎಡ,ಬಲ ಎಂದು ಗುರುತಿಸಿ ಕೊಂಡಿರುವುದು ನನಗೆ ಗೊಂದಲ ಉಂಟಾಗಿತ್ತು, ಒಕ್ಕಲಿಗ ಸಮುದಾಯದಲ್ಲಿ ಮುರುಸು ಮತ್ತು ರೆಡ್ಡಿ ಇರುವಂತೆ ನಮ್ಮಲ್ಲೂ ಈ ಗೊಂದಲ ಇರುವುದನ್ನು ಸ್ಪಷ್ಟಪಡಿಸಲು ಸರ್ಕಾರ ಮಾಡಿಕೊಟ್ಟಿರುವ ಅವಕಾಶ ಸದ್ಬಳಿಸಿಕೊಳ್ಳಬೇಕು ಎಂದು ಹೇಳಿದರು.ಈ ಹಿಂದೆ ವೃತ್ತಿಗಳನ್ನು ಆಧರಿಸಿ ಜಾತಿಗಳನ್ನು ಹೆಸರಿಸಲಾಗಿದೆ, ಇದರಲ್ಲಿ ಬಹುತೇಕ ಮಂದಿ ತಮ್ಮ ಜಾತಿ ಮುಜುಗರದಿಂದಾಗಿ ಸ್ಪಷ್ಟತೆ ಸಿಗದಂತಾಗಿದೆ, ಕೆಲವೊಂದು ಜಿಲ್ಲೆಗಳಲ್ಲಿ ಉಪಜಾತಿಗಳನ್ನು ಬೇರೆಯ ಗುಂಪಿಗೆ ಸೇರ್ಪಡೆಯಾಗಿರುವುದು ಸಮೀಕ್ಷೆಗೆ ಸಮಸ್ಯೆ ಉಂಟಾಗಿದೆ ಎಂದರು.ಜಾಗೃತಿ ಸಮಿಯ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ, ಬಂಗಾರಪೇಟೆಯ ವೆಂಕಟರಾಮಜೀ, ಅ.ನಾ.ಹರೀಶ್, ಲಕ್ಷ್ಮೀನಾರಾಯಣ, ವೆಂಕಟರಾಮ್, ಉಪೇಂದ್ರ, ಹೂವಳ್ಳಿ ಪ್ರಕಾಶ್, ಗಾಂಧಿನಗರ ವೆಂಕಟೇಶ್, ಹನುಮಂತಪ್ಪ, ರಾಮಸಂದ್ರ ಪ್ರತಾಪ್, ರಮೇಶ್, ಗೋವಿಂದರಾಜು, ರವಿಕುಮಾರ್, ರಾಜಪ್ಪ ಇದ್ದರು.