ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಫಲಿತಾಂಶ

KannadaprabhaNewsNetwork |  
Published : Nov 01, 2025, 03:00 AM IST
32 | Kannada Prabha

ಸಾರಾಂಶ

ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ 4ನೇ ದಿನವಾದ ಶುಕ್ರವಾರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು.

ಮಂಗಳೂರು: ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ 4ನೇ ದಿನವಾದ ಶುಕ್ರವಾರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು.

ಮೊದಲನೇ ಅಂಗಣದಲ್ಲಿ ನಡೆದ ಮೊದಲ ಪಂದ್ಯ ಮಿಕ್ಸೆಡ್ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ತನಾವಿನ್ ಮಾದೀ ಮತ್ತು ನಪಾಪಕೋನ್ ತುಂಗಕಸ್ತಾನ್ ಅವರ ಜೋಡಿಯು ಎದುರಾಳಿ ಭಾರತದ ಆರ್ಯನ್ ಸಫಿಯಾ ಮತ್ತು ಜಿಯಾ ರಾವತ್ ಅವರ ಜೋಡಿಯನ್ನು 21-13, 21-29 ಆಟಗಳಿಂದ ಪರಾಭವಗೊಳಿಸಿ ಸೆಮಿಫೈನಲ್‌ ಗೆ ಅರ್ಹತೆ ಪಡೆಯಿತು. 2ನೇ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಪೊಂಗಸ್‌ಕೋನ್ ತೊಂಗಖಾಮ್ ಮತ್ತು ನನಪಾಸ್ ಸುಕ್ಲಾದ್ ಅವರ ಜೋಡಿಯು ಭಾರತದ ಅಗ್ರ ಶ್ರೇಯಾಂಕಿತ ಅಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ ಅವರ ಜೋಡಿಯನ್ನು 16-21, 21-6, 23-22 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೇರಿತು.ಎರಡನೇ ಅಂಗಣದಲ್ಲಿ ನಡೆದ ಮೊದಲ ಮಿಕ್ಸಡ್‌ ಡಬಲ್ಸ್‌ನಲ್ಲಿ ಭಾರತದ ಆಯುಷ್ ಮಖಿಜಾ ಮತ್ತು ಲಿಖಿತಾ ಶ್ರೀವಾಸ್ತವ ಅವರ ಜೋಡಿಯು ಸ್ವದೇಶದ ಸಂಜಯ್ ಶ್ರೀವತ್ಸ ಧನರಾಜ್ ಮತ್ತು ಅನಘಾ ಅರವಿಂದ ಪೈ ಜೋಡಿಯನ್ನು 22-20, 21-23, 21-15 ಆಟಗಳಿಂದ ಸೋಲಿಸಿ ಸೆಮಿ ಫೈನಲ್‌ ಹಂತಕ್ಕೇರಿತು. 2ನೇ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಭಾರತದ ಧ್ರುವ ರಾವತ್ ಮತ್ತು ಮನೀಶಾ ಕೆ ಅವರ ಜೋಡಿಯು ಸ್ವದೇಶದ ಭವ್ಯಾ ಛಾಬ್ರ ಮತ್ತು ವಿಶಾಖಾ ಟೊಪ್ಪೊ ಜೋಡಿಯನ್ನು 21-19, 21-5 ಆಟಗಳಿಂದ ಸೋಲಿಸಿ ಸೆಮಿ ಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.ಮಹಿಳೆಯರ ಡಬಲ್ಸ್‌ನಲ್ಲಿ 3ನೆ ಶ್ರೇಯಾಂಕಿತ ಅಶ್ವಿನಿ ಭಟ್ ಕೆ ಮತ್ತು ಶಿಖಾ ಗೌತಮ್ ಜೋಡಿಯು ರಶ್ಮಿ ಗಣೇಶ್ ಮತ್ತು ಸನಿಯಾ ಸಿಕಂದರ್ ಜೋಡಿಯನ್ನು 21-17, 21-18 ಆಟಗಳಿಂದ ಸೋಲಿಸಿ ಉಪಾಂತ್ಯಕ್ಕೆ ಅರ್ಹತೆ ಪಡೆಯಿತು. ಪುರುಷರ ಸಿಂಗಲ್ಸ್‌ನಲ್ಲಿ ಟಾಪ್ ಸೀಡ್ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಅವರು ಎದುರಾಳಿ ಸನೀತ್ ದಯಾನಂದ್ ಅವರನ್ನು 16-21, 21-15, 21-12 ಆಟಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಏರಿದರು. ಹಾಗೆಯೇ ಭಾರತದ ಆರ್ಯಮಾನ್ ಟಂಡನ್ ಅವರನ್ನು ಎ.ಆರ್ ರೋಹನ್ ಕುಮಾರ್ ಆನಂದಾಸ್ ರಾಜ್‌ಕುಮಾರ್ ಅವರು 21-13, 18-21, 21-23 ಆಟಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದರು.ಹಾಗೆಯೇ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರೌನಕ್ ಚೌಹಾಣ್ ಅವರು ಅಂಶ್ ವಿಶಾಲ್ ಗುಪ್ತಾ ಅವರನ್ನು 21-13, 21-14 ಆಟಗಳಿಂದ ಪರಾಭವಗೊಳಿಸಿ ಸೆಮಿ ಫೈನಲ್‌ ಏರಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ 14 ವರ್ಷದ ತನ್ವಿ ಪತ್ರಿ ಅಮರಿಕದ ಅಗ್ರ ಶ್ರೇಯಾಂಕಿತ ಇಶಿಕಾ ಜೈಸ್ವಾಲ್ ಅವರನ್ನು 21-19, 21-18 ಆಟಗಳಿಂದ ಸೋಲಿಸಿರುವುದು ದಾಖಲೆಯಾಯಿತು.

ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಫರಾನ್ಯು ಖೊಸಮಾಂಗ್ ಮತ್ತು ತನದನ್ ಪಂಪನಿಚ್ ಅವರ ಜೋಡಿಯು ರಷ್ಯಾದ ರೋಡಿಯನ್ ಅಲಿಮೊವ್ ಮತ್ತು ಮಕ್ಸಿಂ ಒಗ್ಲಬಿನ್ ಜೋಡಿಯನ್ನು 21-9, 21-18 ಆಟಗಳಿಂದ ಸೋಲಿಸಿತು. ಥಾಯ್ಲೆಂಡಿನ ಚಲೋಂಪೆನ್ ಚರೊಯೆನ್‌ಕಿಟಮೊರ್ನ್ ಮತ್ತು ವೊರಪೊಲ್ ಥೊಂಗ್ಸಾ ಜೋಡಿಯು ಭಾರತದ ಅಕ್ಷನ್ ಶೆಟ್ಟಿ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್ ಅವರ ಜೋಡಿಯನ್ನು 21-12, 21-12 ಆಟಗಳಿಂದ ಸೋಲಿಸಿತು.ಮಹಿಳೆಯರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಥಾಯ್ಲೆಂಡಿನ ಹತಾಯ್‌ತಿಪ್ ಮಿಜಾದ್ ಮತ್ತು ನಪಪೊಕನ್ ತುಂಗಕಸ್ತಾನ್ ಜೋಡಿಯು 21-14, 21-8 ಆಟಗಳಿಂದ ಭಾರತದ ಸಾಕ್ಷಿ ಗಹ್ಲಾವಟ್ ಮತ್ತು ತನೀಶಾ ಸಿಗ್ ಜೋಡಿಯನ್ನು ಸೋಲಿಸಿ ಉಪಾಂತ್ಯ ಪ್ರವೇಶಿಸಿತು. ಶ್ರೀನಿಧಿ ನಾರಾಯಣ್ ಮತ್ತು ರಿಶಿಕಾ ಉದಯಸೂರ್ಯನ್ ಜೋಡಿಯು ಆರತಿ ಸರಾ ಸುನಿಲ್ ಮತ್ತು ವರ್ಷಿಣಿ ವಿಶ್ವನಾಥ್ ಜೋಡಿಯನ್ನು 21-18, 21-19 ಆಟಗಳಿಂದ ಸೋಲಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ