ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ವರ್ಷಗಳ ಅವಧಿಯಲ್ಲಿ ಬಹಳಷ್ಟು ಶ್ರಮ ಪಟ್ಟ ಸಮ್ಮೇಳನ ಯಶಸ್ವಿಗೆ ದುಡಿದ್ದೀರಿ. ನಿಮ್ಮೆಲ್ಲರ ಸಹಕಾರದಿಂದ ಸಮ್ಮೇಳನ ವ್ಯವಸ್ಥಿತವಾಗಿ ವೈಭವವಾಗಿ ನಡೆಯಲು ಸಾಧ್ಯವಾಯಿತು. ಇದೊಂದು ಐತಿಹಾಸಿಕ ಹಾಗೂ ಇತಿಹಾಸ ಪುಟದಲ್ಲಿ ದಾಖಲು ಮಾಡುವ ಸಮ್ಮೇಳನವಾಗಿದೆ. ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ವಿದೇಶಿ ಬೌದ್ಧ ಬಿಕ್ಕುಗಳು, ಅಂಬೇಡ್ಕರ್ ಮೊಮ್ಮಗ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ, ಮುನಿಯಪ್ಪ ಸೇರಿ ಜಿಲ್ಲೆಯ ಶಾಸಕರು, ಹೊರ ಜಿಲ್ಲೆಯ ಶಾಸಕರು ಭಾಗಹಿಸುವ ಮೂಲಕ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ಎರಡು ದಿನಗಳ ಕಾಲ ನಡೆದ ಸಮ್ಮೇಳನದ ಯಶಸ್ವಿಗೆ ೧೩ ಉಪ ಸಮಿತಿಗಳನ್ನುರಚನೆ ಮಾಡಿದ್ದು, ಈ ಸಮಿತಿಗಳಲ್ಲಿ ತಮಗೆ ವಹಿಸಿ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಆಯಾ ಸಮಿತಿಗಳ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು.ಸಮ್ಮೇಳನದ ಬಗ್ಗೆ ಪ್ರಚಾರ ಮಾಡಲು ಬುದ್ದ ಹಾಗು ಅಂಬೇಡ್ಕರ್ ಪ್ರತಿಮೆಗಳುಳ್ಳ ಮೂರು ಪ್ರಚಾರ ರಥಗಳನ್ನು ಸಿದ್ದಪಡಿಸಿ, ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯ ಹಳ್ಳಿಗಳು, ಹಾಗೂ ಮೈಸೂರು, ಮಂಡ್ಯ ಜಿಲ್ಲೆಯು ಸಹ ಪ್ರಚಾರ ರಥವನ್ನು ಕಳುಹಿಸಿ ಕೊಡಲಾಯಿತು. ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗೂ ಧಮ್ಮ ಪಯಣ, ಧಮ್ಮ ದಾನ ಹಾಗೂ ದಮ್ಮ ಧಿಕ್ಷೆ ಕಾರ್ಯಕ್ರಮಗಳೊಂದಿಗೆ ಬೌದ್ದ ಉಪಸಕರು ಹಾಗೂ ಬುದ್ದ, ಅಂಬೇಡ್ಕರ್ ಅನುಯಾಯಿಗಳನ್ನು ಆಹ್ವಾನಿಸಲಾಯಿತು. ಇದರಿಂದ ಎರಡು ದಿನಗಳು ಕಾಲ ೨ ಲಕ್ಷಕ್ಕು ಹೆಚ್ಚು ಮಂದಿ ಸಮ್ಮೇಳನ ಭಾಗವಹಿಸಿದ್ದರು ಎಂದು ಕೃಷ್ಣಮೂರ್ತಿ ತಿಳಿಸಿದರು.