21, 22 ರಂದು ಅಂತಾರಾಷ್ಟ್ರೀಯ ಸಮ್ಮೇಳನ

KannadaprabhaNewsNetwork |  
Published : Mar 20, 2025, 01:20 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರಯ್ಯ | Kannada Prabha

ಸಾರಾಂಶ

21 ಮತ್ತು 22 ರಂದು ಸ್ಮಾರ್ಟ್‌ ಸಿಸ್ಟ್ಂ ಫಾರ್‌ ಅಪ್ಲಿಕೇಶನ್‌ ಇನ್‌ ಎಲೆಕ್ಟ್ರಿಕಲ್‌ ಸೈನ್ಸ್ -2025 ಎಂಬ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್.ಐ.ಟಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ ಮತ್ತು ಎಸ್ಐಟಿ ಪ್ರಾಂಶುಪಾಲ ಪ್ರೊ. ಎಸ್.ವಿ. ದಿನೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಅಸೋಸಿಯೇಷನ್ ಆಫ್ ಎಲೆಕ್ಟ್ರಿಕಲ್ ಸೈನ್ಸಸ್, ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಇನ್ ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ವತಿಯಿಂದ ಇದೇ ತಿಂಗಳ 21 ಮತ್ತು 22 ರಂದು ಸ್ಮಾರ್ಟ್‌ ಸಿಸ್ಟ್ಂ ಫಾರ್‌ ಅಪ್ಲಿಕೇಶನ್‌ ಇನ್‌ ಎಲೆಕ್ಟ್ರಿಕಲ್‌ ಸೈನ್ಸ್ -2025 ಎಂಬ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್.ಐ.ಟಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ ಮತ್ತು ಎಸ್ಐಟಿ ಪ್ರಾಂಶುಪಾಲ ಪ್ರೊ. ಎಸ್.ವಿ. ದಿನೇಶ್ ತಿಳಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದ್ಯುತ್ ವಿಜ್ಞಾನಕ್ಕೆ ಆಹ್ವಾನಿಸುವ ಸ್ಮಾರ್ಟ್ ಸಿಸ್ಟಂಗಳ ಕ್ಷೇತ್ರದಲ್ಲಿನ ಪ್ರಗತಿಗಳು, ಸವಾಲುಗಳು ಮತ್ತು ಆವಿಷ್ಕಾರಗಳನ್ನು ಚರ್ಚಿಸಲು ಭಾರತ ಮತ್ತು ವಿದೇಶಗಳ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ತಜ್ಞರನ್ನು ಒಗ್ಗೂಡಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದಿದ್ದಾರೆ.ಸಮ್ಮೇಳನವು ಜ್ಞಾನ ವಿನಿಮಯ, ಸಂಕೀರ್ಣ ವ್ಯವಸ್ಥೆ ಹಾಗೂ ಶೈಕ್ಷಣಿಕ ಮತ್ತು ಉದ್ಯಮದಲ್ಲಿನ ವೃತ್ತಿಪರರ ನಡುವೆ ಸಹಯೋಗದ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.ಭಾರತ ಮತ್ತು ವಿದೇಶಗಳಿಂದ 1266 ಸಂಶೋಧನಾ ಲೇಖನಗಳು ಬಂದಿದ್ದು ಈ ಪ್ರತಿಯೊಂದು ಲೇಖನಗಳನ್ನು ಮೂರು ಸ್ವತಂತ್ರ ವಿಮರ್ಶಕರು ಪರಿಶೀಲಿಸಿದ್ದಾರೆ. ಮತ್ತು ಎರಡು ದಿನಗಳ ಸಮ್ಮೇಳನದಲ್ಲಿ ಪ್ರಸ್ತುತಿಗಾಗಿ 175 ಗುಣಮಟ್ಟದ ಲೇಖನಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.21 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿರುವ ಸಮ್ಮೇಳನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಆರಂಭವಾಗಲಿದೆ. ಬೆಂಗಳೂರಿನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಓ.ಡಿ. ನಾಯ್ಡು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಡಾ. ಮಧುಸೂದನ್ ಸಿ.ಎಸ್ ಅವರು ಹವ್ಯಾಸಿ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟಿಸಿ ತಾಂತ್ರಿಕ ಭಾಷಣ ಮಾಡಲಿದ್ದಾರೆ. ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಎಸ್.ಐ.ಟಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ವಹಿಸಲಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ