ಕನ್ನಡಪ್ರಭ ವಾರ್ತೆ ಮೈಸೂರು
ಇದೇ ಸಂದರ್ಭದಲ್ಲಿ ಕಲಾಪೋಷಕರಾದ ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್ ಹಾಗೂ ಶಸ್ತ್ರಚಿಕಿತ್ಸಕ ಡಾ.ಸಿ.ಜಿ. ನರಸಿಂಹನ್ ಅವರಿಗೆ ಕಲೆಮನೆ ಕಲಾಶ್ರೀ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿತು.
ಕರ್ನಾಟಕ ಕಲಾಶ್ರೀ ವಿದ್ವಾನ್ ವಿ. ನಂಜುಂಡಸ್ವಾಮಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಿವೃತ್ತ ತಹಸೀಲ್ದಾರ್ ಡಾ.ವಿ. ರಂಗನಾಥ್ ಮುಖ್ಯ ಅತಿಥಿಗಳಾಗಿದ್ದರು. ಜಮುನಾ ರಾಣಿ ವಿ. ಮಿರ್ಲೆ, ರಂಗನಾಥ್ ಮೈಸೂರು, ಶಾಂತಿ, ಪ್ರೊ.ಎಚ್.ಎಸ್. ಉಮಾದೇವಿ, ಶಾಂತಿ, ನಂದಿನಿ, ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಸಂಸ್ಥಾಪಕ ಡಾ.ಕೆ. ಕುಮಾರ್, ಅಧ್ಯಕ್ಷೆ ಡಾ.ಜಿ. ಮಾಲತಿ, ಖಜಾಂಚಿ ಕೆ.ಎಂ. ಲೇಖಾ, ಜಂಟಿ ಕಾರ್ಯದರ್ಶಿ ಕೆ.ಎಂ. ನಿಧಿ ಇದ್ದರು.ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಭರತನಾಟ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಕೇಂದ್ರದ ಅತ್ಯುತ್ತಮ ವಿದ್ಯಾರ್ಥಿನಿಯರಿಗೆ ಕನ್ನಡಪರ ಹೋರಾಟಗಾರ ಕೊ.ಸು. ನರಸಿಂಹಮೂರ್ತಿ ಅವರು ಸ್ಥಾಪಿಸಿರುವ ನಗದು ಬಹುಮಾನಗಳನ್ನು ನೀಡಲಾಯಿತು. ನಂತರ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಆಕರ್ಷಕವಾಗಿ ಭರತನಾಟ್ಯ ಪ್ರದರ್ಶಿಸಿ, ಸಭಿಕರನ್ನು ರಂಜಿಸಿದರು.