ಸಮಾಜದಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಕುಟುಂಬದಲ್ಲಿ ಲಿಂಗ ಆಧಾರಿತ ತಾರತಮ್ಯವನ್ನು ತೊಡೆದು ಹಾಕಿ, ನ್ಯಾಯಯುತ ಮತ್ತು ಸಮಾನ ಅವಕಾಶಗಳಿರುವ ವಾತಾವರಣವನ್ನು ಸೃಷ್ಟಿಸಲು ‘ಲಿಂಗ ಸಂವೇಧನೆ’ ಇಂತಹ ಕಾರ್ಯಗಾರಗಳು ಸಹಾಯ ಮಾಡುತ್ತದೆ.
ಹಲಗೂರು:
ಮಹಿಳೆಯರು ಎಲ್ಲಾ ಕ್ಚೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿ ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸಮ ಗೌರವದಿಂದ ಕಾಣಬೇಕಾದುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಸಮಾಜ ಶಾಸ್ತ್ರ ಉಪನ್ಯಾಸಕಿ ಸುಧಾ ಬಿದರಿ ತಿಳಿಸಿದರು.
ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ‘ಲಿಂಗ ಸಂವೇದನೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಮಾತನಾಡಿ, ಸಮಾಜದಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಕುಟುಂಬದಲ್ಲಿ ಲಿಂಗ ಆಧಾರಿತ ತಾರತಮ್ಯವನ್ನು ತೊಡೆದು ಹಾಕಿ, ನ್ಯಾಯಯುತ ಮತ್ತು ಸಮಾನ ಅವಕಾಶಗಳಿರುವ ವಾತಾವರಣವನ್ನು ಸೃಷ್ಟಿಸಲು ‘ಲಿಂಗ ಸಂವೇಧನೆ’ ಇಂತಹ ಕಾರ್ಯಗಾರಗಳು ಸಹಾಯ ಮಾಡುತ್ತದೆ ಎಂದರು.
ಅಜೀಂ ಪ್ರೇಮ್ ಜೀ ಫೌಂಡೇಶನ್ ಪ್ರತಿಷ್ಠಾನ ಸಂಪನ್ಮೂಲ ವ್ಯಕ್ತಿಗಳಾದ ಹೇಮಂತ್ ಕುಮಾರ್, ಶಿವಶಂಕರ್, ಪ್ರಿಯಾಂಕಾ ಅವರು ವಿದ್ಯಾರ್ಥಿಗಳಿಗೆ ಸಮಾನತೆ ಸಂಬಂಧಿಸಿದ ವಿವಿಧ ಬಗೆಯ ಚಟುವಟಿಕೆಗಳ ಸ್ಪರ್ಧೆಗಳು ನಡೆಸುವ ಮೂಲಕ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಿದರು.
ಈ ವೇಳೆ ಪ್ರೊ.ಗುರುಪ್ರಸಾದ್, ಪ್ರೊ.ಟಿ.ಶ್ರೀನಿವಾಸ್, ಪ್ರೊ.ಬಿ.ಸಿ.ರವಿ, ಉಪನ್ಯಾಸಕರಾದ ಎಂ.ಎಚ್.ಮೂರ್ತಿ, ಡಿ.ಎಲ್.ಮಧುಕುಮಾರ್, ಎನ್.ಪ್ರಶಾಂತ್, ಗಿರೀಶ್, ಚೇತನ ಶ್ರೀ, ಪ್ರವೀಣ್ ಕುಮಾರ್, ಶಾಲಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಪಾಂಡವಪುರ: ಮೇಲುಕೋಟೆ ಕನೋಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು. ಇದೇ ವೇಳೆ ಮೇಲುಕೋಟೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್, ಸರ್ವೋದಯ ಕರ್ನಾಟಕದ ಅಧ್ಯಕ್ಷ ಕೆ.ಎಸ್.ದಯಾನಂದ್, ಉದ್ಯಮಿ ಚಂದ್ರಶೇಖರ್(ಸುಂದ್ರಣ್ಣ), ವಕೀಲ ಸತೀಶ್, ಪುಟ್ಟಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.