ಹಾರಾಡಿ ರಸ್ತೆ ಕಾಂಕ್ರಿಟ್ ಕಾಮಗಾರಿ ಮುಗಿಸಲು ತಿಂಗಳ ಗಡುವು

KannadaprabhaNewsNetwork |  
Published : Jul 25, 2026, 03:00 AM IST
ಫೋಟೋ: 23ಪಿಟಿಆರ್‌-ಬಿಜೆಪಿಕಾಮಗಾರಿಯ ಬಗ್ಗೆ ಬಿಜೆಪಿ ಮುಖಂಡರು ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ನವೀನ ಎಲ್‌ಇಡಿ ಬೆಳಕು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅತ್ಯಾಧುನಿಕ ಲೆಕ್ಸಾ ಇನೋವೇಶನ್ ಮತ್ತು ಸಂಶೋಧನಾ ಕೇಂದ್ರಕ್ಕೆ (ಎಲ್‌ಐಆರ್‌ಸಿ) ಭಾರತ ಸರ್ಕಾರದ ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ (ಎನ್‌ಎಬಿಎಲ್) ವತಿಯಿಂದ ಐಎಸ್‌ಒ/ಐಇಸಿ 17025:2017 ಮಾನದಂಡದಡಿ ಅಧಿಕೃತ ಮಾನ್ಯತೆ ಲಭಿಸಿದೆ.ಈ ಮಾನ್ಯತೆಯು ಅನುಮೋದಿತ ವ್ಯಾಪ್ತಿಯೊಳಗೆ ಬೆಳಕು ಸಾಧನಗಳ ಪರೀಕ್ಷೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ನಡೆಸುವ ತಾಂತ್ರಿಕ ಪರಿಣತಿ, ನಿಖರತೆ, ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷಾ ಫಲಿತಾಂಶಗಳ ವಿಶ್ವಾಸಾರ್ಹತೆಯನ್ನು ಎಲ್‌ಐಆರ್‌ಸಿ ಹೊಂದಿದೆ ಎಂಬುದಕ್ಕೆ ಅಧಿಕೃತ ಮನ್ನಣೆಯಾಗಿದೆ.

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಹಾರಾಡಿ- ಬೊಳುವಾರು ಕಾಂಕ್ರೀಟ್ ಕಾಮಗಾರಿ ಅವ್ಯವಸ್ಥೆಗೆ ಸಂಬಂಧಿಸಿ ಪುತ್ತೂರು ಬಿಜೆಪಿ ನಿಯೋಗ ಸ್ಥಳ ಪರಿಶೀಲನೆ ನಡೆಸಿತು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಮುಂದೆ ಪ್ರತಿಭಟನೆ ಎದುರಿಸಲು ಸಿದ್ಧರಾಗಿ ಎಂದು ಅಧಿಕಾರಿಗಳಿಗೆ ಬಿಜೆಪಿ ನಿಯೋಗ ಎಚ್ಚರಿಸಿತು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಲೋಕೋಪಯೋಗಿ ಇಲಾಖೆಯ ಎಇಇ ರಾಜೇಶ್ ರೈ ಅವರೊಂದಿಗೆ ಮಾತುಕತೆ ನಡೆಸಿ, ಕಾಮಗಾರಿಯ ಗೊಂದಲದಿಂದಲೇ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬಸ್ಸು, ಜನಸಂಚಾರ ಇಲ್ಲದೆ ಆಟೋ ರಿಕ್ಷಾ ಚಾಲಕರಿಗೆ ಪಾರ್ಕ್-ಬಾಡಿಗೆ ಇಲ್ಲದಂತಾಗಿದ್ದು, ವರ್ತಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ ಎಂದರು.

ಹಾರಾಡಿ ರೈಲ್ವೇ ಮೇಲ್ಸೆತುವೆಯ ಬಳಿ ಕಾಮಗಾರಿಗಾಗಿ ಒಂದು ತಿಂಗಳಿಂದ ರಸ್ತೆ ಬಂದ್ ಮಾಡಲಾಗಿದ್ದು, ಆಗಲೇ ಚರಂಡಿ-ಮೋರಿ ಕಾಮಗಾರಿ ಮಾಡುವ ಬದಲು ಈಗ ಸಂಚಾರ ಮರು ಆರಂಭದ ಬಳಿಕ ಮಾಡುತ್ತಿರುವುದರಿಂದ ವಾಹನದವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೂರದವರಿಗೆ ಟೆಂಡರ್ ನೀಡಲಾಗಿದ್ದು, ಅವರು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದರು.

ಬಳಿಕ ಪತ್ರಕರ್ತರ ಜತೆ ಮಾತನಾಡಿದ ಸಂಜೀವ ಮಠಂದೂರು ಅವರು, ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬೊಳುವಾರು ಭಾಗದ ೧.೮೦ ಕಿ.ಮೀ. ಕಾಂಕ್ರೀಟ್ ಕಾಮಗಾರಿ ಡಿಸೆಂಬರ್ ಗೆ ಮುಗಿಯಬೇಕಿದ್ದು, ಆದರೆ ಅವಧಿ ಮುಗಿದು ೮ ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ ಎಂದರು. ಕಾಮಗಾರಿಯಿಂದಾಗಿ ಸುಮಾರು ೧೫ ಮನೆಗಳಿಗೆ ನೀರಿನ ಸಂಪರ್ಕ ಕಳೆದ ಒಂದು ತಿಂಗಳಿಂದ ಕಡಿತವಾಗಿದೆ, ಕಾಂಕ್ರೀಟ್ ರಸ್ತೆಯ ಬದಿಗೆ ಮಣ್ಣು ಹಾಕಲಾಗಿಲ್ಲ. ಇದರಿಂದಾಗಿ ಅಪಾಯದ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯರು ತಿಳಿಸಿದರು. ಮಾಜಿ ಶಾಸಕ ಮಠಂದೂರು ಪೌರಾಯುಕ್ತರಿಗೆ ಕರೆ ಮಾಡಿ ಕುಡಿಯುವ ನೀರಿನ ಸಂಪರ್ಕ ತಕ್ಷಣ ದುರಸ್ತಿ ಮಾಡುವಂತೆ ಒತ್ತಾಯಿಸಿದರು. ಆಗಮಿಸಿದ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ಶೆಟ್ಟಿಯವರನ್ನು ಕಾಮಗಾರಿ ನಿಧಾನಗತಿ ಬಗ್ಗೆ ಪ್ರಶ್ನಿಸಿ ತ್ವರಿತಗೊಳಿಸುವಂತೆ ತಿಳಿಸಿದರು.

ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ನಗರಸಭಾ ಮಾಜಿ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ, ಜೀವಂಧರ್ ಜೈನ್, ಪಕ್ಷದ ಪ್ರಮುಖರಾದ ವಿದ್ಯಾ ಗೌರಿ, ಪ್ರಸನ್ನ ದರ್ಬೆ, ಸತೀಶ್ ನಾಯ್ಕ್ ದರ್ಬೆ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಪುರುಷೋತ್ತಮ ಮುಂಗ್ಲಿಮನೆ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಸುನೀಲ್ ದಡ್ಡು, ನಿತೇಶ್ ಕಲ್ಲೇಗ, ಯಶೋಧಾ, ವಿರೂಪಾಕ್ಷ ಮಚ್ಚಿಮಲೆ, ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ರಾಜೇಶ್ ಪರ್ಪುಂಜ, ವಿಶ್ವನಾಥ ಗೌಡ ಬನ್ನೂರು, ಲಕ್ಷ್ಮಣ್ ಕೋಡಿಂಬಾಡಿ, ಮುರಳೀಕೃಷ್ಣ ಹಸಂತಡ್ಕ, ಲೋಕೇಶ್ ಚಾಕೋಟೆ, ಗೌರಿ ಬನ್ನೂರು, ಇಂದಿರಾ ಆಚಾರ್ಯ, ಸುಜಾತ ಕೃಷ್ಣ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ಯಾಂಡಲ್ ಮಾರ್ಚ್
ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ: ಸುನೀಲಗೌಡ ಪಾಟೀಲ