ಜಾಲತಾಣಗಳು ಮಾನಸಿಕ ಸ್ವಾಸ್ಥ್ಯ ಕೆಡಸುತ್ತಿವೆ: ನ್ಯಾಯಾಧೀಶ ಈಶ್ವರ್‌

KannadaprabhaNewsNetwork |  
Published : Jul 22, 2024, 01:18 AM IST
21ಜಿಪಿಟಿ4ಗುಂಡ್ಲುಪೇಟೆ ತಾಲೂಕಿನ ಸಂಪಿಗೆಪುರ ಗ್ರಾಮದ ಎಸ್.ಬಿ.ಗುರುಲಿಂಗಪ್ಪ ಹಾಗು ಪಾರ್ವತಮ್ಮ ಟ್ರಸ್ಟ್ ಆಯೋಜಿಸಿದ್ದ ಎಸ್ಎಸ್ಎಲ್ ಸಿ ಹಾಗು ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಸವರತ್ನ ಪ್ರಶಸ್ತಿ ವಿತರಿಸಿದರು. | Kannada Prabha

ಸಾರಾಂಶ

ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ ಕೆಡಸುತ್ತಿವೆ ಎಂದು ನ್ಯಾಯಾಧೀಶ ಈಶ್ವರ್‌ ಹೇಳಿದರು. ಗುಂಡ್ಲುಪೇಟೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧನೆಗೈದ ಸಾಧಕರಿಗೆ ಬಸವರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಜಿ.ನಾರಾಯಣಸ್ವಾಮಿ, ಪ್ರಮೋದ್ ಆರಾಧ್ಯರಿಗೆ ‘ಬಸವ ರತ್ನ’ ಪ್ರದಾನ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ ಕೆಡಸುತ್ತಿವೆ ಎಂದು ನ್ಯಾಯಾಧೀಶ ಈಶ್ವರ್‌ ಹೇಳಿದರು.

ತಾಲೂಕಿನ ಸಂಪಿಗೆಪುರ ಗ್ರಾಮದ ಎಸ್.ಬಿ.ಗುರುಲಿಂಗಪ್ಪ ಹಾಗು ಪಾರ್ವತಮ್ಮ ಟ್ರಸ್ಟ್ ಆಯೋಜಿಸಿದ್ದ ಎಸ್ಎಸ್ಎಲ್ ಸಿ ಹಾಗು ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧನೆಗೈದ ಸಾಧಕರಿಗೆ ಬಸವರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.ಅಧಿ ವಯಸ್ಸಿನಲ್ಲಿ ಮಕ್ಕಳಿಗೆ ಇತರೆ ವಿಷಯಗಳ ಕಡೆಗೆ ಆಸಕ್ತಿ ಹೆಚ್ಚಾಗಿ,ಓದಿನ ಕಡೆಗೆ ಒಲವು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ ಎಂದರು.

ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನಹರಿಸಿ ಶ್ರದ್ಧೆಯಿಂದ ಓದುವ ಮೂಲಕ ಉತ್ತಮ ಸಾಧನೆಗೈಯಲು ಸಾಧ್ಯ.ಗ್ರಾಮೀಣ ವಿದ್ಯಾರ್ಥಿಗಳು ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಎಂದರು.

ವಿಶೇಷ ಉಪನ್ಯಾಸ ನೀಡಿದ ತಾಂಡವಪುರದ ಎಂಐಟಿ ಕಾಲೇಜಿನ ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅಂಕ ಗಳಿಸಬೇಕು ಎಂದು ಒತ್ತಡ ಹೇರಬಾರದು.ಕಲಿಕೆಯು ಸಂತಸದಿಂದ ಮನಪೂರ್ವಕವಾಗಿ ಉಂಟಾಗಬೇಕೆ ಹೊರತು ಮಕ್ಕಳಿಗೆ ಹೊರೆಯಾಗಬಾರದು ಎಂದರು.

ನಿವೃತ್ತ ಐಆರ್‌ಎಸ್‌ ಅಧಿಕಾರಿ ಜಿ.ನಾರಾಯಣಸ್ವಾಮಿ, ಐಸಿಎಎಸ್‌ನ ಪ್ರಮೋದ್ ಆರಾಧ್ಯರ ಸಾಧನೆ ಗುರುತಿಸಿ ಗ್ರಾಮದ ಪರವಾಗಿ ''''''''ಬಸವ ರತ್ನ'''''''' ಪ್ರಶಸ್ತಿಯನ್ನು ಶ್ರೀಗಳು ನೀಡಿ ಗೌರವಿಸಿದರು.

ಕಬ್ಬಹಳ್ಳಿ ಮಠಾಧೀಶ ಗುರುಸಿದ್ದಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಸಂಸ್ಕಾರ ಕಲಿಸಬೇಕು.ಗ್ರಾಮಗಳಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಿ ಜನರ ಜೀವನಮಟ್ಟ ಸುಧಾರಿಸಬೇಕು ಜೊತೆಗೆ ಗಿಡ ಬೆಳೆಸುವ ಮೂಲಕ ಪರಿಸರ ಉಳಿಸಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಶೈಲಕುಮಾರ್(ಶೈಲೇಶ್)‌,ಸಾಹಿತಿ ಮತ್ತು ಸಂಶೋಧಕ ಡಾ.ಪಳನಿ ಸ್ವಾಮಿ ಮೂಡುಗೂರು,ಪಶು ವೈದ್ಯಾಧಿಕಾರಿ ಡಾ.ಎಚ್.ಗುರುಮೂರ್ತಿ,ಬೇಗೂರು ಐಟಿಐನ ತರಬೇತಿ ಅಧಿಕಾರಿ ಎಚ್.ಎಸ್. ಪ್ರಸಾದ್,ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ.ಎಂ,ಉಪಾಧ್ಯಕ್ಷ ಶಿವ ವೀರಭದ್ರಪ್ಪ,ಉಪನ್ಯಾಸಕ ಪ್ರಭುಸ್ವಾಮಿ ಡಿ.ಎಂ, ಪ್ರಭುಸ್ವಾಮಿ ಕೊಡಗಾಪುರ,ಶಿಕ್ಷಕ ಮಹದೇವಪ್ಪ, ಪ್ರಗತಿಪರ ಕೃಷಿಕ ಜಿ.ಜಿ.ಮಲ್ಲಿಕಾರ್ಜುನಪ್ಪ, ಉಪನ್ಯಾಸಕ ಎಸ್.ಮಹದೇವ ಪ್ರಭು ಸೇರಿದಂತೆ ಟ್ರಸ್ಟಿಗಳಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ