ಬೀರೂರು. ಅಂತಾರಾಜ್ಯ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಬೀರೂರು ಠಾಣೆ ಪೊಲೀಸರು ಬಂಧಿತರಿಂದ ₹ 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ, ಬೀರೂರು.
ಅಂತಾರಾಜ್ಯ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಬೀರೂರು ಠಾಣೆ ಪೊಲೀಸರು ಬಂಧಿತರಿಂದ ₹ 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಕರೋಲಿ ಜಿಲ್ಲೆಯ ಕಲ್ಯಾಣ್ ಪುರ್, ಸಾಯಟ ಗ್ರಾಮದ ನಿತೇಶ್(21) ಮತ್ತು ಬಾಬುಲಾಲ್(20) ಬಂಧಿತ ಆರೋಪಿಗಳು ಕಳೆದ ಫೆ. 13ರಂದು ಬೀರೂರು ಠಾಣಾ ವ್ಯಾಪ್ತಿಯ ದೋಗೇಹಳ್ಳಿಯಲ್ಲಿ ಅಪರಿಚಿತರಿಬ್ಬರು ಮಹಿಳೆ ಇದ್ದ ಅಂಗಡಿ ಹತ್ತಿರ ಬೈಕ್ ನಲ್ಲಿ ಬಂದು ಸಿಗರೇಟ್ ಖರೀದಿಸಿ ನಂತರ ಪೆನ್ ಕೊಡುವಂತೆ ಕೇಳಿದ್ದಾರೆ. ಪೆನ್ ಕೊಡಲು ಹಿಂದೆ ತಿರುಗಿದಾಗ ಹಿಂದಿನಿಂದ ಅವರ ಕೊರಳ ಮಾಂಗಲ್ಯ ಕಿತ್ತುಕೊಂಡು ಹೋಗಿದ್ದರು. ಆರೋಪಿಗಳನ್ನು ಪತ್ತೆಹಚ್ಚಲು ಜಿಲ್ಲಾ ಎಸ್ಪಿ ಚಿತೇಂದ್ರ ಕುಮಾರ್ ದಯಾಮ ತಂಡ ರಚಿಸಿದ್ದರು. ಶನಿವಾರ ಬಂಧಿತ ಆರೋಪಿಗಳಿಂದ ಒಟ್ಟು ಮೌಲ್ಯ ₹6 ಲಕ್ಷ ಮೌಲ್ಯದ 44.740 ಗ್ರಾಂ ತೂಕದ ಚಿನ್ನಾಭರಣಗಳ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿ ಪತ್ತೆ ಮತ್ತು ತನಿಖಾ ತಂಡದಲ್ಲಿ ಸಿಪಿಐ ರಫೀಕ್ ಎಸ್ಐ ತಿಪ್ಪೇಶ್ ಡಿ.ವಿ, ಗಣಪತಿ ಆರ್. ಶೇರುಗಾರ, ಪತ್ತೆ ತಂಡದ ಸಿಬ್ಬಂದಿ ಹೇಮಂತ್ ಕುಮಾರ್ ಡಿ.ವಿ, ಕೃಷ್ಣಮೂರ್ತಿ ಬಿ.ಪಿ, ರಾಜಪ್ಪ ಬಿ.ಎಚ್, ಪಾಂಡುರಂಗಪ್ಪ ಆರ್, ಚಂದ್ರಶೇಖರ್, ತನಿಖಾ ತಂಡದಲ್ಲಿ ಮಂಜಾನಾಯ್ಕ, ಶಿವಕುಮಾರ್, ಚಾಲಕ ಚಂದ್ರನಾಯ್ಕ, ತಾಂತ್ರಿಕ ವಿಭಾಗದ ಅಂಜುಮ್ ನಯಾಜ್ಅ, ಬ್ದುಲ್ ರಬ್ಬಾನಿ ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು ಜಿಲ್ಲಾ ಎಸ್ಪಿ ಪ್ರಶಂಸಿದ್ದಾರೆ. ಮಹಿಳೆಯ ಚಿನ್ನದ ಸರಗಳವು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಕತ್ತಿನಲ್ಲಿದ್ದ 45 ಗ್ರಾಂ ತೂಕದ 5.50ಲಕ್ಷ ಮೌಲ್ಯದ ತಾಳಿಸರ ವನ್ನುಕದ್ದೊಯ್ದಿರುವ ಮತ್ತೊಂದು ಘಟನೆ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಇಒ ಕಚೇರಿ ಕಾರ್ಯನಿರ್ವಹಿಸುತ್ತಿರುವ ಅರುಣಾ ಸರ ಕಳೆದುಕೊಂಡವರು. ಪಟ್ಟಣದ ರೈಲ್ವೆ ಸ್ಟೇಷನ್ ಸಮೀಪದ ಶ್ರೀ ಬಸವೇಶ್ವರ ಸ್ವಾಮಿಲ್ ಮುಂಭಾಗದ ರಸ್ತೆಯಲ್ಲಿ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ತಮ್ಮ ಕಚೇರಿ ತೆರಳುವಾಗ ಇಬ್ಬರು ಬೈಕಿನಲ್ಲಿ ಬಂದು ಅರುಣಾ ಕುತ್ತಿಗೆಗೆ ಕೈಹಾಕಿ ಕೊರಳಿನಲ್ಲಿದ್ದ 45 ಗ್ರಾಂ ತೂಕದ ಎರಡು ಎಳೆಯ ಬಂಗಾರದ ತಾಳಿ ಸರವನ್ನು ಕಿತ್ತುಕೊಂಡು ವೇಗವಾಗಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.14 ಬೀರೂರು 2 ಬೀರೂರು ಪೊಲೀಸರು ರಾಜಸ್ಥಾನ ಮೂಲದ ಸರಗಳ್ಳರನ್ನು ಬಂಧಿಸಿ ಅವರಿಂದ ಚಿನ್ನಾಭರಣ ಮತ್ತು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಸಿಪಿಐ ರಫೀಕ್ ಪಿಎಸ್ಐ ಡಿ.ವಿ.ತಿಪ್ಪೇಶ್ ಅಪರಾದ ವಿಭಾಗದ ಪಿಸೈ ಗಣಪತಿ ಆರ್ ಶೇರುಗಾರ, ಮತ್ತು ಪತ್ತೆ ತಂಡದ ಸಿಬ್ಬಂದಿಗಳಾದ ಹೇಮಂತ್ ಕುಮಾರ್ ಡಿ.ವಿ, ಕೃಷ್ಣಮೂರ್ತಿ ಬಿ.ಪಿ, ರಾಜಪ್ಪ ಬಿ.ಹೆಚ್, ಪಾಂಡುರಂಗಪ್ಪ ಆರ್, ಚಂದ್ರಶೇಖರ್ ಮತ್ತಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.