ಬ್ಯಾಡಗಿ: ಅಗತ್ಯವಿರುವ ಹಣವನ್ನು ಬಿಡಗಡೆಗೊಳಿಸಲು ಸಿದ್ಧನಿದ್ದೇನೆ, ತಡೆಗೋಡೆ (ಒಡ್ಡು) ಬಿರುಕು ಬಟ್ಟು ರೈತರ ಆತಂಕಕ್ಕೆ ಕಾರಣವಾಗಿರುವ ನಂದಿಹಳ್ಳಿ ಕೆರೆ ಪುನಶ್ಚೇತನ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯವಿಲ್ಲ: ಸಣ್ಣ ನೀರಾವರಿ ನಿಗಮದ ತಾಂತ್ರಿಕ ಅಧಿಕಾರಿ ಮಣಿಕಂಠ ಅವರು, ಸದರಿ ಒಡ್ಡು ಈ ಹಿಂದೆಯೂ ಬಿರುಕು ಬಿಟ್ಟಿತ್ತು ಇದೊಂದು ಭೂಮಿಯಲ್ಲಿನ ನೈಜಗುಣವಾಗಿದ್ದು ಕರೆಯಲ್ಲಿನ ನೀರು ಎಲ್ಲಿಯೂ ಲೀಕ ಆಗಿರುವುದಿಲ್ಲ. ಬಿರುಕು ಬಿಟ್ಟಿರುವ ಸ್ಥಳಗಳನ್ನು ಮಣ್ಣಿನಿಂದ ತುಂಬಿಸಿ ಸರಿಪಡಿಸುವ ಭರವಸೆ ನೀಡಿದರು.
ಕೆರೆಕೋಡಿ ಸರಿಪಡಿಸಿ: ಗ್ರಾಪಂ ಸದಸ್ಯ ಬಸವರಾಜ ಬನ್ನಿಹಟ್ಟಿ ಮಾತನಾಡಿ, ಕೆರೆಕೋಡಿ ಲೀಕ್ ಆಗುತ್ತಿದ್ದು ಅನಗತ್ಯವಾಗಿ ನೀರು ಹರಿದು ಹೋಗುತ್ತಿದೆ. ಇದರಿಂದ ಕೆರೆಯಲ್ಲಿನ ನೀರು ಬಹುಬೇಗನೆ ಖಾಲಿಯಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಚನ್ನಬಸಪ್ಪ ಹುಲ್ಲತ್ತಿ, ನಿಂಗಪ್ಪ ಹೆಗ್ಗಣ್ಣನವರ, ಯುವರಾಜ ದೊಡ್ಮನಿ ಸೇರಿದಂತೆ ಇನ್ನಿತರರಿದ್ದರು.