ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 39ನೇ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಭಾನುವಾರ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯವರು ಶ್ರೀ ಕೃಷ್ಣ, ಮಹಾಭಾರತ, ಭಗವದ್ಗೀತೆಯ ತತ್ವಾದರ್ಶಗಳನ್ನು ಹೊಸತಲೆಮಾರಿನವರಿಗೆ ಪರಿಚಯಿಸುವ, ನಮ್ಮ ಸಂಸ್ಕೃತಿ, ಪರಂಪರೆಯ ಮಹತ್ವ ಸಾರುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಇದರ ಜೊತೆಗೆ, ಕಣ್ಮರೆಯಾಗುತ್ತಿರುವ ನಮ್ಮ ಸಾಂಪ್ರದಾಯಕ ಕ್ರೀಡೆಗಳು, ಗೀತಗಾಯನ, ಕಂಠಪಾಠ, ಪ್ರಬಂಧ ರಚನೆ, ನೆನಪಿನ ಶಕ್ತಿ ಹೆಚ್ಚಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳು ಹಾಗೂ ಹಿರಿಯರು ಸಂಭ್ರಮಿಸುವ ವೇದಿಕೆ ಕಲ್ಪಿಸಿದ್ದಾರೆ. ಮಕ್ಕಳಲ್ಲಿ ಧೈರ್ಯ, ಸಾಹಸ, ಧಾರ್ಮಿಕ ಭಾವನೆ ಮೂಡಿಸುವ, ಸಂಸ್ಕಾರ ಬೆಳೆಸುವ ಕಾರ್ಯಕ್ರಮಗಳ ಮೂಲಕ ಆಚರಣಾ ಸಮಿತಿ ಎಲ್ಲರನ್ನೂ ಒಟ್ಟಗೂಡಿಸಿ, ಮಕ್ಕಳಲ್ಲಿ ಸ್ನೇಹ, ಸಹಬಾಳ್ವೆಯ ಗುಣ ಬೆಳೆಸುವ ಕಾರ್ಯಕ್ರಮ ಮಾಡುತ್ತಿದೆ ಎಂದು ಹೇಳಿದರು.
ಈ ವೇಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷೆ ರೇಖಾ ಮಹೇಶ್, ಗೌರವಾಧ್ಯಕ್ಷ ಸಂದೀಪ್‌ಗೌಡ, ಉಪಾಧ್ಯಕ್ಷ ಗ.ಸಿ.ಶ್ರೀನಿವಾಸ್, ಡಾ.ಜಿ.ಎಸ್.ಕೆಂಪಯ್ಯ, ಜಯಶಂಕರಮೂರ್ತಿ, ರೇಖಾ ಶಿವಕುಮಾರ್, ವಸಂತ ರಂಭಾಪುರಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಶಂಕರ್ ಉಪ್ಪಾರಹಳ್ಳಿ, ಅನಿತ ರಮೇಶ್, ಕಾರ್ಯದರ್ಶಿ ಜ್ಯೋತಿ ಚಂದನ್, ಖಜಾಂಚಿ ಕೆ.ಪರಶುರಾಮಯ್ಯ, ಪದಾಧಿಕಾರಿಗಳಾದ ಕಲ್ಪನಾ ಪ್ರಸಾದ್, ಪಲ್ಲವಿ ಅಶ್ವಿನ್, ರೂಪ ಶಿವಮಾಧು, ಪುಟ್ಟರುದ್ರಯ್ಯ, ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.