ಕನ್ನಡಪ್ರಭ ವಾರ್ತೆ, ಕಡೂರು
ತಾಲೂಕಿನ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕಂಬಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಆರಂಭಗೊಂಡ ಧಾರ್ಮಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮದಲ್ಲಿ ಒಗ್ಗಟ್ಟು ಮೂಡಿದರೆ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪಿ.ಕೋಡಿಹಳ್ಳಿ ಗ್ರಾಮ ಧಾರ್ಮಿಕ ಮಹೋತ್ಸವಗಳಲ್ಲಿ ತಮ್ಮದೇ ಗ್ರಾಮದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿರುವ ಕಲೆಗೆ ಪ್ರೋತ್ಸಾಹಿಸುವ ಮಕ್ಕಳ ಕಾರ್ಯಕ್ರಮ ಆಯೋಜಿಸಿರುವುದು ಇತರರಿಗೆ ಸ್ಪೂರ್ತಿದಾಯಕ ಎಂದರು.
ಇಂತಹ ವೇದಿಕೆಗಳು ಗ್ರಾಮದಲ್ಲಿ ಹೆಚ್ಚು ಹೆಚ್ಚು ನಡೆದಾಗ ಮಕ್ಕಳಲ್ಲಿರುವ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿದತಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ದೇವಸ್ಥಾನದ ಧಾರ್ಮಿಕ ಉತ್ಸವಗಳು ನೆರವೇರಿದವು. ತಾಪಂ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಯರದಕೆರೆ ಎಂ. ರಾಜಪ್ಪ, ಕಂಸಾಗರ ರೇವಣ್ಣ, ಶಾಂತಪ್ಪ, ಗ್ರಾಮದ ಗೌಡರಾದ ಓಂಕಾರಪ್ಪ, ಮಹಾ ದೇವಪ್ಪ, ಸಿದ್ದಪ್ಪ, ಕುಮಾರ್, ಗ್ರಾಪಂ ಸದಸ್ಯರಾದ ಪುಷ್ಪಲತಾ, ಮಂಜುನಾಥ್, ಈಶ್ವರಪ್ಪ, ಮಲ್ಲೇಶಪ್ಪ, ಜಯಣ್ಣ ಮತ್ತಿತರಿದ್ದರು.
5ಕೆಕೆಡಿಯು1.
ಕಡೂರಿನ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಬಿಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಾರಂಭದಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಕೆ.ಎಂ. ಮಹೇಶ್ವರಪ್ಪ, ರಾಜಪ್ಪ, ರೇವಣ್ಣ, ಓಂಕಾರಪ್ಪ, ಮಹಾದೇವಪ್ಪ, ಸಿದ್ದಪ್ಪ, ಪುಷ್ಪಲತಾ ಮತ್ತಿತರಿದ್ದರು.