ಆಟಿ ಆಚರಣೆಯಿಂದ ತಿಂಗಳ ಮಹತ್ವ ಪರಿಚಯ: ಶ್ರೀನಿವಾಸ ರಾವ್‌

KannadaprabhaNewsNetwork |  
Published : Jul 28, 2026, 03:00 AM IST
ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ತುಳು ಭಾಷೆ ಅತಿ ಮಧುರವಾದ ಭಾಷೆ. ಕೇಳಲು ಮತ್ತು ಮಾತನಾಡಲು ಚಂದ. ತುಳು ಭಾಷೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಹಾಗೂ ಈ ಆಚರಣೆಯ ಮೂಲಕ ಆಟಿ ತಿಂಗಳ ಮಹತ್ವ ಹಾಗೂ ಆಟಿ ತಿಂಗಳ ವಿಶೇಷ ತಿನಿಸುಗಳ ಮಹತ್ವವನ್ನು ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್ ಹೇಳಿದರು.

ಮಂಗಳೂರು: ತುಳು ಭಾಷೆ ಅತಿ ಮಧುರವಾದ ಭಾಷೆ. ಕೇಳಲು ಮತ್ತು ಮಾತನಾಡಲು ಚಂದ. ತುಳು ಭಾಷೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಹಾಗೂ ಈ ಆಚರಣೆಯ ಮೂಲಕ ಆಟಿ ತಿಂಗಳ ಮಹತ್ವ ಹಾಗೂ ಆಟಿ ತಿಂಗಳ ವಿಶೇಷ ತಿನಿಸುಗಳ ಮಹತ್ವವನ್ನು ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್ ಹೇಳಿದರು.ಅವರು ಶನಿವಾರ ತುಳುನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಶ್ರೀನಿವಾಸ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್‌ನಲ್ಲಿ ‘ಆಟಿಡೊಂಜಿ ದಿನ- ತುಳುನಾಡಿ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದ 12 ವರ್ಷಗಳಿಂದ ಶ್ರೀನಿವಾಸ ವಿಶ್ವವಿದ್ಯಾಲಯ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹುಲಿವೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದೆ ಎಂದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಆಟಿಡೊಂಜಿ ದಿನ ಕಾರ್ಯಕ್ರಮ ಹಿಂದಿನ ಕಾಲದ ಜೀವನ ಪದ್ಧತಿ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಉತ್ತಮ ಕಾರ್ಯವಾಗಿದೆ ಎಂದರು.ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯರಾದ ವಿಜಯಲಕ್ಷ್ಮೀ ಆರ್.ರಾವ್, ಪ್ರೊ.ಎ.ಮಿತ್ರಾ ಎಸ್.ರಾವ್, ಮೇಘನಾ ಎಸ್.ರಾವ್, ಸಮ್ನಾ ಎಸ್.ರಾವ್, ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ.ಅಜಯ್ ಕುಮಾರ್, ಇನ್‌ಸ್ಟಿಟ್ಯೂಟ್ ಆಫ್

ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಡೀನ್ ಡಾ.ವೆಂಕಟೇಶ್ ಅಮೀನ್, ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಡೀನ್ ಡಾ.ತ್ರಿಶಾಲಾ ನೊರೊನ್ಹಾ, ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಟೂರಿಸಂನ ಡೀನ್‌ ಪ್ರೊ. ಬಿ. ಪ್ರಶಾಂತ್ ಪ್ರಭು, ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್‌ನ ಡೀನ್ ಡಾ.ಪದ್ಮನಾಭ ಸಿ.ಎಚ್., ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಥೆರಪಿಯ ಡೀನ್ ಡಾ.ಪ್ರಾಂಜಲಿ ಮಹಾತ್ರೆ ಮತ್ತಿತರರು ಇದ್ದರು.

ಪ್ರೊ.ಶಿಲ್ಪಾ ಪ್ರಾಸ್ತಾವಿಸಿದರು. ಪ್ರೊ.ಸುಷ್ಮಿತಾ ಎಸ್.ಕೋಟ್ಯಾನ್ ಸ್ವಾಗತಿಸಿದರು. ಡಾ.ಶಕೀಲಾ ವಂದಿಸಿದರು. ಪ್ರೊ.ಪ್ರಜ್ಞಾ ಓಡಿಲ್ನಾಳ ಹಾಗೂ ಪ್ರೊ.ರೇವತಿ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಪಾರಂಪರಿಕ ಆಹಾರ, ಆಟಿ ತಿಂಗಳ ವಿಶೇಷ ತಿನಿಸುಗಳು, ಪ್ರಾಚೀನ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಜನಪದ ಪರಂಪರೆಯನ್ನು ಪರಿಚಯಿಸುವ ವಿಶೇಷ ಮಳಿಗೆಗಳನ್ನು ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ಬಲೆಗೆ ಬಿದ್ದ ಉಪಖಜಾನೆ ಅಧಿಕಾರಿಗಳು
ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ