ಬಳ್ಳಾರಿ: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ ಐಎನ್‌ಟಿಯುಸಿ ಸಂಘಟನೆಯ ಸದಸ್ಯರು ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಹಿತ ಕಾಯುವ ಕೆಲಸವಾಗಿಲ್ಲ. ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ. ಕರ್ನಾಟಕದಿಂದ ಪ್ರತಿನಿಧಿಸಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ತಾಯಪ್ಪ ಮಾತನಾಡಿ, ಕೃಷಿ ವಲಯದ ಪ್ರಗತಿಗೆ ಸ್ವಾಮಿನಾಥನ್ ವರದಿ ಜಾರಿಯ ಕುರಿತು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಉದ್ಯೋಗ ಸೃಷ್ಟಿಯ ಕುರಿತು ನಿರ್ದಿಷ್ಟವಾಗಿ ಹೇಳಿಲ್ಲ. ನಾಲ್ಕು ಕೋಟಿ ಉದ್ಯೋಗ ಸೃಷ್ಟಿಗೆ ಕ್ರಮವಾಗಹಿಸಲಾಗುವುದು ಎಂದಷ್ಟೇ ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಯ ಕುರಿತು ಹೇಳಿದ್ದರು. ಅದರಂತೆಯೇ ಈ ಭರವಸೆ ಕೂಡ ಹುಸಿಯಾಗಲಿದೆ. ಬಡವರಿಗೆ ಸೂರು ಕಲ್ಪಿಸುವ ವಿಚಾರದಲ್ಲಿ ಸಹ ಕೇಂದ್ರದ ಬಜೆಟ್ ತೀವ್ರ ನಿರಾಸೆ ಮೂಡಿಸಿದೆ ಎಂದು ದೂರಿದರು.
ಐಎನ್‌ಟಿಯುಸಿ ಮುಖಂಡರಾದ ತೇಹರ್ ಹುಸೇನ್, ಸರ್ದಾರ್, ಕೆ.ಗಾದಿಲಿಂಗಪ್ಪ, ಕಾಂಗ್ರೆಸ್ ಸದಸ್ಯರಾದ ಬುಡಾ ಮುಜೀಬ್, ಶೇಕ್ಷಾವಲಿ, ರಾಮು, ಕಣೇಕಲ್ ಮಲ್ಲಿ, ರಾಮು, ಗುಗ್ಗರಹಟ್ಟಿ ಶಕೀಲ್, ಹೊನ್ನಳ್ಳಿ ಕಿರಣ್ ಕುಮಾರ್, ದಾದಾಪೀರ್, ದಶರಥ, ರಮೇಶ್, ರಾಮುಡು, ಜಯರಾಮ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕೇಂದ್ರದ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ಐಎನ್‌ಟಿಯುಸಿ ಸಂಘಟನೆಯ ಸದಸ್ಯರು ಬಳ್ಳಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.