ಕನ್ನಡಪ್ರಭ ವಾರ್ತೆ ಕೋಟ
ಶಿಬಿರವನ್ನು ಸ್ಥಳೀಯ ಮಣೂರು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡೆನ್ನಿಸ್ ಬಾಂಜಿ, ಆಯೋಜಕರಾದ ರಮೇಶ ಎಚ್. ಕುಂದರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಶೆಟ್ಟಿ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸತ್ಯನಾರಾಯಣ, ಪ್ರಾಥಮಿಕ ವಿಭಾಗದ ಮುಖ್ಯೋಪಾದ್ಯಾಯ ಮಂಜುನಾಥ ಹೊಳ್ಳ ಮತ್ತು ಗೀತಾನಂದ ಫೌಂಡೇಶನ್ ಸಂಯೋಜಕ ರವಿಕಿರಣ್ ಅವರು ಶಿಬಿರಾರ್ಥಿಗಳೊಂದಿಗೆ ಲಗೋರಿ ಆಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೀತಾನಂದ ಟ್ರಸ್ಟ್ ನಿರ್ದೇಶಕಿ ವ್ಯೆಷ್ಣವಿ ರಕ್ಷಿತ್ ಕುಂದರ್ ಮತ್ತು ಜನತಾ ಸಿಬ್ಬಂದಿ ಅಶ್ವಿನಿ, ಸಚಿನ್ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು. ಶಿಬಿರದಲ್ಲಿ ಸ್ಥಳೀಯ ಶಾಲಾ ಮಕ್ಕಳಿಗೆ ದೈಹಿಕ ಬೌದ್ಧಿಕ ಬೆಳವಣಿಗೆ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.