-ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಶ್ಲಾಘನೆ । ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ರಜತ ಮಹೋತ್ಸವ
ಕನ್ನಡಪ್ರಭ ಪ್ರಭ ವಾರ್ತೆ ಕಲಬುರಗಿ
`ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರರ ಕೊಡುಗೆ ಅಮೂಲ್ಯ, ಇಂಜಿನಿಯರರು ಉತ್ತಮ ಕೆಲಸ ಮಾಡುತ್ತಿರುವುದರಿಂದಲೇ ನವಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುವಂತಾಗಿದೆ'''''''' ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.ನಗರದ ಎಂ.ಆರ್.ಎಂ.ಸಿ ಸ್ಯಾಕ್ ಸಭಾಂಗಣದಲ್ಲಿ ನಡೆದ `ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್''''''''ನ ರಜತ ಮಹೋತ್ಸವ ಮತ್ತು ಇಂಜಿನಿಯರರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿದ್ದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ದೇಶದಲ್ಲಿ ರೈಲ್ವೆ, ಹೆದ್ದಾರಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಇಂಜಿನಿಯರರ ಕೊಡುಗೆ ಅಪ್ರತಿಮವಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಸುಭಾಷ ಶಿಕ್ಷಣಕರ್, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರರ ಪರಿಷತ್ತಿನ ಅಧ್ಯಕ್ಷ ಶ್ರೀಕಾಂತ ಚನ್ನಾಳ, ಸದಸ್ಯ ಮುರಳೀಧರ ಜಿ. ಕರಲಗಿಕರ್, ಕೆಪಿಸಿಇಎ ರಾಜ್ಯ ಕಾರ್ಯದರ್ಶಿ ಸಿದ್ರಾಮ ಎಸ್. ನಿರೋಣಿ ಮಾತನಾಡಿದರು.
ಹಿರಿಯ ಸಿವಿಲ್ ಇಂಜಿನಿಯರರಾದ ವಿಜಯಕುಮಾರ ಮೇಳಕುಂದಿ, ಜಗನ್ನಾಥ ಜೋಶಿ, ವಿಜಯೀಂದ್ರ ಕಲ್ಲೂರ, ಸಮೀರ ದೇಶಪಾಂಡೆ, ನರಸಿಂಹಲು ಪತ್ತಿ, ದಶರಥ ಅಕ್ಕಾ, ಲಿಂಗರಾಜ ವಾಲಿ, ಅಮರ ಹಿರೋಜಿಕರ್, ವಿನಯ ಪಾಟೀಲ್, ಶ್ರೀಶೈಲ ದೇವಣಿ, ಶರದ ಚೌಕಾ, ನಿಖಿಲರೆಡ್ಡಿ ಶೇರಿಕಾರ್, ಅನಿಲ ಮಂಗಲಗಿ, ಅನಿಲ ನಾಗನಹಳ್ಳಿ, ನಿಜಗುಣಿ ದೇವಣಗಾಂವ, ಅಬ್ದುಲ್ಲಾ ಬೇಲಿಫ್, ಆಬೀದ್ ಹುಸೇನ್ ಪಟೇಲ್, ಇಫ್ತೇಕಾರ್ ಹುಸೇನ್, ಸುಮಿತ್ ಬಳಬಟ್ಟಿ, ರವಿಕಾಂತ ಬಾಸೂತಕರ್, ಬಂಡೇಶರೆಡ್ಡಿ, ವಿಶ್ವನಾಥ ಗುಬ್ಬೇವಾಡ, ಜಯಕುಮಾರ ಮಾಡಗಿ, ರಮೇಶ ಮಹಾದಾಪ್, ಶ್ರೀನಿವಾಸ ಬೋರಾಳಕರ್ ಸೇರಿದಂತೆ ಹಲವಾರು ಸಿವಿಲ್ ಇಂಜಿನಿಯರರು, ರಾಜುರಿ ಸ್ಟೀಲ್ ಮಾರುಕಟ್ಟೆ ಅಧಿಕಾರಿ ಸಂದೀಪ್ ಮತ್ತಿತರರು ಪಾಲ್ಗೊಂಡಿದ್ದರು.
ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ವಿಜಯ ದಶರಥ ಸಂಗನ್, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ರಫಿಯುದ್ದಿನ್ ಅವರನ್ನು ಸನ್ಮಾನಿಸಲಾಯಿತು.
ಕಲಬುರಗಿ ನಗರದಲ್ಲಿ ಸಿವಿಲ್ ಇಂಜಿನಿಯರರ ಸಂಘದವರು ಕಟ್ಟಡ ನಿರ್ಮಿಸಿಕೊಳ್ಳುವುದು ಅವಶ್ಯ. ಈ ಭವನ ನಿರ್ಮಾಣಕ್ಕೆ ನನ್ನ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ಕೊಡುತ್ತೇನೆ. ರಾಜ್ಯ ಸರ್ಕಾರದಿಂದಲೂ ನೆರವು ಕೊಡಿಸುತ್ತೇನೆ.
----
......ಬಾಕ್ಸ್....ರಾಜ್ಯದಲ್ಲಿ ಸಿವಿಲ್ ಇಂಜಿನಿಯರರ ವೃತ್ತಿಗೆ ಘನತೆ, ಗೌರವ ಕಲ್ಪಿಸಲು ಹಾಗೂ ನಕಲಿ ಇಂಜಿನಿಯರ್‌ರ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ `ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರರ ಪರಿಷತ್‌ನ್ನು ಸ್ಥಾಪಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಶಾಸನಬದ್ಧವಾಗಿ ಪರಿಷತ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದಾಗಿ ಸಿವಿಲ್ ಇಂಜಿನಿಯರರಿಗೆ ಕಾಯ್ದೆ ಮೂಲಕ ರಕ್ಷಣೆ ಸಿಕ್ಕಂತಾಗಿದೆ.
- ಶ್ರೀಕಾಂತ ಎಸ್. ಚನ್ನಾಳ್, ಅಧ್ಯಕ್ಷ, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರರ ಪರಿಷತ್.