ಒಳಮೀಸಲು ಗಣತಿ: ಅಲೆಮಾರಿಗಳು ವಂಚಿತರಾಗುವ ಸಾಧ್ಯತೆ

KannadaprabhaNewsNetwork |  
Published : May 09, 2025, 12:30 AM IST
ಪೋಟೊ: 08ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ.ಜಾ ಮತ್ತು ಪ.ಪಂಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಈಗ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆಯಲ್ಲಿ ಯಾವುದೇ ನೆಲೆ ಇಲ್ಲದ ಅಲೆಮಾರಿ ಜನಾಂಗಗಳು ಬಿಟ್ಟುಹೋಗುವ ಸಂಭವವಿದೆ ಎಂದು ಕರ್ನಾಟಕ ಪ.ಜಾ ಮತ್ತು ಪ.ಪಂಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗ: ಈಗ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆಯಲ್ಲಿ ಯಾವುದೇ ನೆಲೆ ಇಲ್ಲದ ಅಲೆಮಾರಿ ಜನಾಂಗಗಳು ಬಿಟ್ಟುಹೋಗುವ ಸಂಭವವಿದೆ ಎಂದು ಕರ್ನಾಟಕ ಪ.ಜಾ ಮತ್ತು ಪ.ಪಂಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಆತಂಕ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಲೆಮಾರಿ ಸಮುದಾದವರಲ್ಲಿ ಜಾಗೃತಿ ಮೂಡಿಸಲು ಸಮೀಕ್ಷೆಯನ್ನು ಹೋಬಳಿ ಮಟ್ಟದಲ್ಲಿ ಕನಿಷ್ಠ ೩ ದಿನಗಳ ಕಾಲ ನಡೆಸುವಂತೆ ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಲು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.ಯಾವುದೇ ಸಮುದಾಯಕ್ಕೆ ದತ್ತಾಂಶಗಳು ಇಲ್ಲದೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದುದರಿಂದಲೇ ಮೇ 5 ರಿಂದ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ. ಅವಕಾಶ ವಂಚಿತರಾದ ಸಾಮಾಜಿಕ ಕಳಂಕಿತರಾದವರು ಕಣಿ ಹೇಳುವ, ಧಾರ್ಮಿಕ ಭಿಕ್ಷಾಟನೆ ಮಾಡುತ್ತಿದ್ದವರು ಪ.ಜಾತಿಯ ಅಲೆಮಾರಿಗಳಾಗಿದ್ದಾರೆ ಎಂದರು.2016ರಲ್ಲಿ ದೊಂಬರ, ಸುಡುಗಾಡುಸಿದ್ದ, ಕೊರಚ, ಕೊರಮ, ಹಂದಿ ಜೋಗಿ, ಶಿಳ್ಳೆಕ್ಯಾತ, ಬುಡುಗಜಂಗಮ, ಘಂಟಿಚೋರ, ಮುಕ್ರಿ, ಚನ್ನ ದಾಸರ, ಮಾಲದಾಸರ, ಮಾಂಗ್, ಗಾರುವಾಡಿ, ಗೋಸಂಗಿ, ಸಿಂಧೋಳ್ಳು, ಪಾಲೆ, ಅಜಿಲ, ಆದಿಲ ಸೇರಿದಂತೆ ಇತ್ಯಾದಿ 51 ಸಮುದಾಯಗಳು ಅಲೆಮಾರಿಗಳು, ಮುಕ್ತ ಬುಡಕಟ್ಟು ಅತೀ ಸೂಕ್ಷ್ಮ ಎಂದು ಗುರುತಿಸಿದೆ. 24 ಜಿಲ್ಲೆಗಳ ಪ್ರವಾಸ ಮಾಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ತಿಳಿಸಿದರು.ಶಾಶ್ವತ ನೆಲೆಯಿಲ್ಲದ ಕಾರಣ ಊರೂರು ತಿರುಗಿ ಬೊಂಬೆಯಾಟ, ಮೋಡಿಯಾಟ, ಧಾರ್ಮಿಕ ಭಿಕ್ಷಾಟನೆ, ಬಿದಿರಿನಿಂದ ಬುಟ್ಟಿ, ಮೊರ, ಮಂಕರಿ, ಚಾಪೆ, ರೇಷ್ಮೆತಟ್ಟೆ, ಹಂದಿ ಸಾಕಾಣಿಕೆ, ಪಶುಪಾಲನೆ, ಕೂಲಿ, ಕೂದಲು ಸಂಗ್ರಹಣೆ, ತತ್ವಪದ ಗಾಯನ, ಬೀದಿನಾಟಕ, ಸೀಸನಲ್ ವ್ಯಾಪಾರ, ಬಾಜಭಜಂತ್ರಿ ಬಾರಿಸುವುದು, ಕಣಿ ಹೇಳುವುದು, ಮೀನುಗಾರಿಕೆ, ಸ್ಟೇಷನರಿ ವ್ಯಾಪಾರ, ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಬಹುತೇಕರ ಬಳಿ ವೋಟರ್ ಐಡಿ, ಆಧಾರ್ ಕಾರ್ಡ್ ಇಲ್ಲ, ಹೀಗಾಗಿ ವಿಶೇಷ ತಜ್ಞರ ಆಯೋಗವು ಹೋಬಳಿ ಮಟ್ಟದಲ್ಲಿ ಅಲೆಮಾರಿ ವಿಶೇಷ ಸಮೀಕ್ಷೆ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿಗಮದಿಂದ ಪ್ರತ್ಯೇಕ ಸಮೀಕ್ಷೆ ಮಾಡಲು ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆಯೋಗ ಈ ಬಗ್ಗೆ ಕ್ರಮ ಜರುಗಿಸಿಲ್ಲ. ವಿಖಾಸವಿಲ್ಲದೆ ಬದುಕುತ್ತಿರುವ ಈ ಸಮುದಾಯಕ್ಕೆ ಜಿಲ್ಲಾ ಅನುಷ್ಠಾನ ಸಮಿತಿ ನೀಡಬೇಕು. ಅಧಿಕಾರಿಗಳು ಪ್ರವಾಸದ ಮೂಲಕ ವಿಶೇಷ ಶಿಬಿರ ನಡೆಸಿ ಸ್ಥಳ ಮಹಜರ್ ಮಾಡಿ ವಂಶವೃಕ್ಷ, ಜಾತಿ ಸೆರ್ಟಿಫಿಕೇಟ್ ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಟಿ.ಹಾಲೇಶಪ್ಪ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ