ಪಿಡಿಒ ವಿರುದ್ಧದ ದೂರಿನ ತನಿಖೆ: ಅಧಿಕಾರಿಗಳ ನಡೆಗೆ ಆಕ್ರೋಶ

KannadaprabhaNewsNetwork |  
Published : Oct 13, 2026, 02:45 AM IST
ಚಿತ್ರ 12ಬಿಡಿಆರ್65ಎ | Kannada Prabha

ಸಾರಾಂಶ

ಲೋಕಾಯುಕ್ತ ಸಂಸ್ಥೆಯ ದ.ಕ ಜಿಲ್ಲಾ ಅಧಿಕಾರಿಗಳು ಕಳೆದ ಸೆ.೯ ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿಗೆ ಕಡತ ಪರಿಶೀಲನೆಗೆಂದು ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಪಂಚಾಯತ್ ಪಿಡಿಒ ವಿರುದ್ದ ಲಿಖಿತ ದೂರು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರದಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ದೂರುದಾರರಿಂದ ದಾಖಲೆಗಳ ಸ್ವೀಕಾರ ಮತ್ತು ಹೇಳಿಕೆ ಸ್ವೀಕಾರ ಕಾರ್ಯ ನಡೆಯಿತು.

ಉಪ್ಪಿನಂಗಡಿ : ಲೋಕಾಯುಕ್ತ ಸಂಸ್ಥೆಯ ದ.ಕ ಜಿಲ್ಲಾ ಅಧಿಕಾರಿಗಳು ಕಳೆದ ಸೆ.೯ ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿಗೆ ಕಡತ ಪರಿಶೀಲನೆಗೆಂದು ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಪಂಚಾಯತ್ ಪಿಡಿಒ ವಿರುದ್ದ ಲಿಖಿತ ದೂರು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರದಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ದೂರುದಾರರಿಂದ ದಾಖಲೆಗಳ ಸ್ವೀಕಾರ ಮತ್ತು ಹೇಳಿಕೆ ಸ್ವೀಕಾರ ಕಾರ್ಯ ನಡೆಯಿತು.

ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಹಾಗೂ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ನೇತೃತ್ವದ ಲೋಕಾಯುಕ್ತ ತಂಡ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗೆಂದು ಆಗಮಿಸಿದ ವೇಳೆ ಸುದ್ದಿ ತಿಳಿದು ಧಾವಿಸಿ ಬಂದ ಗ್ರಾಮಸ್ಥರು ಪಂಚಾಯತ್ ಪಿಡಿಒ ವಿರುದ್ದ ದೂರಿನ ಸರಮಾಲೆ ಮುಂದಿಟ್ಟರು. ಈ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಆರೋಪಿತ ಪಿಡಿಒ ಅವರನ್ನು ಕರ್ತವ್ಯ ಲೋಪ ಹಾಗೂ ಅಧಿಕಾರವನ್ನು ದುರುಪಯೋಗಿಸಿ ನಾಗರಿಕರನ್ನು ಬೆದರಿಸಿದ ಆರೋಪದಡಿ ಅಮಾನತುಗೊಳಿಸಲಾಗಿತ್ತು. ನಾಗರಿಕರು ನೀಡಿದ ದೂರಿನ ತನಿಖಾ ಪ್ರಕ್ರಿಯೆ ನಡೆಸಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಈ ಬಗೆ ತನಿಖಾ ತಂಡವನ್ನು ರಚಿಸಿ ದೂರುದಾರರಿಗೆ ನೋಟೀಸ್ ಜಾರಿ ಮಾಡಿ ಸೋಮವಾರದಂದು ದಾಖಲೆಗಳ ಪರಿಶೀಲನೆಯೊಂದಿಗೆ ವಿಚಾರಣಾ ಪ್ರಕ್ರಿಯೆ ನಡೆಸಿದರು.

ಐದು ಮಂದಿ ಅಧಿಕಾರಿಗಳ ತಂಡ ನಾವು ಕೇಳಿದಕಷ್ಟೇ ಉತ್ತರಿಸಬೇಕು , ಹೆಚ್ಚಿನದನ್ನು ಏನನ್ನೂ ಹೇಳಬಾರದೆಂದು ತಾಕೀತು ಮಾಡಿದರು ಎಂದು ದೂರು ವ್ಯಕ್ತವಾಗಿದೆ. ನೀವು ಯಾರನ್ನು ರಕ್ಷಿಸುವ ಸಲುವಾಗಿ ಬಂದಿದ್ದಿರಿ? ಮತ್ತು ಪ್ರಶ್ನೆ ಕೇಳುತ್ತಿದ್ದೀರಿ ? ಎಂದು ಆಕ್ರೋಶ ವ್ಯಕ್ತಪಡಿಸಿ ದೂರುದಾರ ಉದ್ಯಮಿಯೋರ್ವರು ಸ್ಥಳದಿಂದ ನಿರ್ಗಮಿಸಿದ ಘಟನೆ ನಡೆಯಿತು.

ಬಳಿಕ ಮೆತ್ತಗಾದ ಅಧಿಕಾರಿ ಬಳಗ ದೂರುದಾರರನ್ನು ಪ್ರಶ್ನಿಸಿದರಾದರೂ, ದೂರುದಾರರ ಅನಿಸಿಕೆಗಳನ್ನು ದಾಖಲಿಸಲು ಮುಂದಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ಅವ್ಯವಸ್ಥೆ: ಸಿಬ್ಬಂದಿಗೆ ತರಾಟೆ
ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ