ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲಗೆ ಆಹ್ವಾನ, ಸನ್ಮಾನ

KannadaprabhaNewsNetwork |  
Published : Jun 16, 2026, 02:30 AM IST
ಶೇಖರಗೌಡ ಮಾಲಿಪಾಟೀಲ ಅವರನ್ನು ಗುಮಗೇರಾ ಗ್ರಾಮದ ನಿವಾಸದಲ್ಲಿ ಸನ್ಮಾನಿಸಿ, ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆಯುವ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶೇಖರಗೌಡ ಮಾಲಿಪಾಟೀಲ ಅವರನ್ನು ಸನ್ಮಾನಿಸಿ, ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು.

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆಯುವ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಅವರನ್ನು ಸ್ವಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳು, ಹಿರೇಮನ್ನಾಪುರ ಗ್ರಾಮಸ್ಥರು ಸನ್ಮಾನಿಸಿ, ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್‌ ಮಾತನಾಡಿ, ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಅವರು ಸಹಕಾರಿ ಕ್ಷೇತ್ರದ ಧುರೀಣರಾಗಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರಂತಹ ಅನುಭವಿ ವ್ಯಕ್ತಿತ್ವದ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿದೆ ಎಂದರು.

ಸಾಹಿತ್ಯ ಸಮ್ಮೇಳನವು ಕೇವಲ ಸಾಹಿತ್ಯದ ಕಾರ್ಯಕ್ರಮವಾಗಿರದೆ, ಜಿಲ್ಲೆಯ ಸಂಸ್ಕೃತಿ, ಪರಂಪರೆ, ಜನಪದ ಕಲೆ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಜನರಿಗೆ ತಲುಪಿಸುವ ಮಹತ್ವದ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಾಹಿತ್ಯಾಸಕ್ತರು, ಕಲಾವಿದರು ಹಾಗೂ ಸಾರ್ವಜನಿಕರು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿದ ಸಮ್ಮೇಳನದ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ತಮಗೆ ನೀಡಿರುವ ಗೌರವವನ್ನು ಜಿಲ್ಲೆಯ ಸಮಸ್ತ ಸಾಹಿತ್ಯಾಭಿಮಾನಿಗಳಿಗೆ ಅರ್ಪಿಸುತ್ತೇನೆ. ಕನ್ನಡ ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ಸಮ್ಮೇಳನವನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ರವೀಂದ್ರ ಬಾಕಳೆ, ಎಸ್‌.ಜಿ. ಕಡೇಮನಿ, ವೀರಬಸಯ್ಯ ಕಾಡಗಿಮಠ, ದೊಡ್ಡಯ್ಯ ಗದ್ದಡಕಿ, ಶಿವಾನಂದ ಹಿರೇಮಠ, ಪರಸಪ್ಪ ಅಳ್ಳಳ್ಳಿ, ಶೇಖರಗೌಡ ಪೊಲೀಸ್‌ಪಾಟೀಲ, ರಮೇಶ ಕುಲಕರ್ಣಿ, ಮೆಹೆಬೂಬ ಹುಸೇನ ಕನಕಗಿರಿ, ರಾಮಣ್ಣ ತಳವಾರ, ತೋಟಪ್ಪ ಕಾಮನೂರು, ಅಮರೇಗೌಡ ಜಾಲಿಹಾಳ, ಹನುಮಂತಪ್ಪ ಈಟಿ, ಶರಣಪ್ಪ ಲೈನದ, ಆರ್‌.ಕೆ. ಸುಬೇದಾರ, ನಿಂಗಪ್ಪ ಸಜ್ಜನ, ಮಹೇಶ ಹಡಪದ, ಲಲಿತಮ್ಮ ಹಿರೇಮಠ, ನಬಿಸಾಬ ಕುಷ್ಟಗಿ, ಮೋಹನಲಾಲ್‌ ಜೈನ್‌, ಹನುಮೇಶ ಗುಮಗೇರಿ, ಮೈಲಾರಪ್ಪ ಗೋನಾಳ, ಗವಿಸಿದ್ದಯ್ಯ ಹುಡೇಜಾಲಿ, ಶ್ರೀನಿವಾಸ ಜಹಗೀರದಾರ, ಅಬ್ದುಲ್‌ ಕರೀಮ ವಂಟೇಳಿ, ಸೋಮಶೇಖರ ವೈಜಾಪೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ