ಕನ್ನಡಪ್ರಭ ವಾರ್ತೆ ಹುಕ್ಕೇರಿ ಬೆಂಗಳೂರಿನ ಸ್ವಗೃಹದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ ಹಿರೇಮಠದ ದಸರಾ ಉತ್ಸವಕ್ಕೆ ಆಹ್ವಾನ ನೀಡಿದರು. ಅ.15 ರಿಂದ 24ರವರೆಗೆ ದಸರಾ ಉತ್ಸವ ಜರುಗಲಿದೆ. ಉತ್ಸವ ಸಮಿತಿ ಈ ವರ್ಷದ ರೇಣುಕ ಶ್ರೀ ಪ್ರಶಸ್ತಿಗೆ ಡಾ.ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದೆ. ರಾಜ್ಯ, ಹೊರರಾಜ್ಯ ಮತ್ತು ಹೊರದೇಶದ ಶ್ರೀಮಠದ ಭಕ್ತರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ತಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಶ್ರೀಗಳು ಆಹ್ವಾನಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ಮೈಸೂರು ಮಾದರಿಯಲ್ಲಿ ನಡೆಯುವ ಹುಕ್ಕೇರಿ ದಸರಾ ಉತ್ಸವಕ್ಕೆ ಆಹ್ವಾನಿಸಿದ್ದು ನನ್ನ ಭಾಗ್ಯ. ತಪ್ಪದೇ ಬರುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕ ಅಶೋಕ ಪಟ್ಟಣ, ಶಶಿಕಲಾ ಜೊಲ್ಲೆ, ಆನಂದ ಗಡ್ಡದೇವರಮಠ, ಶೀತಲ ಬ್ಯಾಳಿ, ಸುರೇಶ ಜಿನರಾಳಿ, ಚನ್ನಪ್ಪಾ ಗಜಬರ ಮತ್ತಿತರರು ಉಪಸ್ಥಿತರಿದ್ದರು.