ಅಯೋಧ್ಯೆ ಶ್ರೀರಾಮ ಮಂದಿರ ಕಾರ್ಯಕ್ರಮಕ್ಕೆ ನಿರ್ಭಯಾನಂದ ಶ್ರೀಗೆ ಆಮಂತ್ರಣ

KannadaprabhaNewsNetwork | Updated : Jan 16 2024, 03:07 PM IST

ಸಾರಾಂಶ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.೨೨ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಗರದ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಪಾಲ್ಗೊಳ್ಳಲು ರಾಮಮಂದಿರ ಟ್ರಸ್ಟ್‌ದಿಂದ ಅಧಿಕೃತ ಆಮಂತ್ರಣವನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ತು ನೀಡಿ ಆಮಂತ್ರಿಸಿತು.

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.೨೨ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಗರದ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಪಾಲ್ಗೊಳ್ಳಲು ರಾಮಮಂದಿರ ಟ್ರಸ್ಟ್‌ದಿಂದ ಅಧಿಕೃತ ಆಮಂತ್ರಣವನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ತು ನೀಡಿ ಆಮಂತ್ರಿಸಿತು.

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಎಲ್ಲ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳಿಂದ ಪಾಲ್ಗೊಳ್ಳಲು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೂಜ್ಯರಿಗೆ ಅಧಿಕೃತ ಆಮಂತ್ರಣವಿದ್ದು, ಗದಗ ಜಿಲ್ಲೆಯಿಂದ ಗದುಗಿನ ಶಿವಾನಂದ ಮಠದ ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅವರಿಗೆ ವಿಶೇಷ ಆಮಂತ್ರಣವಿದೆ.

ಈ ಸಂದರ್ಭದಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹಬೀಬ, ವೀರಣ್ಣ ಹೇಮಾದ್ರಿ, ಮಾರುತಿ ಪವಾರ, ಪ್ರಲ್ಲಾದ ಇನಾಮದಾರ, ಸ್ವರೂಪ ಹುಬ್ಬಳ್ಳಿ ಮುಂತಾದವರಿದ್ದರು.

ಮಂತ್ರಾಕ್ಷತೆ ವಿತರಣೆ: ಗದಗ ತಾಲೂಕಿನ ನರಸಾಪುರ ಗ್ರಾಮದ ಖಾದಿ ನಗರದಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯನ್ನು ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮನೆ-ಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ವಿತರಿಸಿದರು.

ಮಂತ್ರಾಕ್ಷತೆಯ ಜೊತೆಗೆ ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯ ಹಾಗೂ ನಿವೇದನೆ ಪತ್ರ ಜೊತೆಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಫೋಟೋವನ್ನು ವಿತರಿಸಲಾಯಿತು.

ಜ.೨೨ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಸಾರ್ವಜನಿಕರು ಆಯಾ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಹಾಗೂ ಆರತಿಯನ್ನು ಮಾಡುವುದು. 

ಶ್ರೀರಾಮ ಜಯರಾಮ ಜಯರಾಮ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ ೧೦೮ ಬಾರಿ ಜಪ ಮಾಡುವ ಕುರಿತು ಮಾಹಿತಿ ನೀಡಲಾಯಿತು.

ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್. ಹಿರೇಮಠ, ಕಾರ್ಯದರ್ಶಿ ಸಿ.ವಿ. ಪವಾಡಶೆಟ್ಟರ, ಎಸ್.ವಿ. ಗುರ್ಲಹೊಸೂರ, ಜಯರಾಮ ನೆಗಳೂರ, ಬಸವರಾಜ ಕಿತ್ತೂರ, ಶಂಕ್ರಯ್ಯ ಹಿರೇಮಠ ಸೇರಿ ಅನೇಕರು ಇದ್ದರು.

Share this article