ಹುಲಿ ಸಾವಿನ ಕೇಸಲ್ಲಿ ಕಾಣದ ಶಕ್ತಿ ಕೈವಾಡ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Oct 09, 2026, 01:30 AM IST
8ಕೆಜಿಎಲ್ 12ಕೊಳ್ಳೇಗಾಲದಲ್ಲಿ ಅಯೋಜಿಸಲಾಗಿದ್ದ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅರಣ್ಯ ಮಿತ್ರ ಪ್ರಶಸ್ತಿ ವಿಜೇತರ ಅಧಿಕಾರಿಗಳಿಗೆಗೌರವಿಸಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ, ಚಾ.ನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ, ಉಪ ಅರಣ್ಯಸಂರಕ್ಷಣಾಧಿಕಾರಿ ಶ್ರೀಪತಿ, ಚಂದ್ರು, ಶುಭಂ ಸಿಂಗ್ ಇನ್ನಿತರಿದ್ದರು. | Kannada Prabha

ಸಾರಾಂಶ

ಹುಲಿ ಸಾವಿನ ಎರಡು ಪ್ರಕರಣಗಳಲ್ಲಿ ಸತ್ಯಾಂಶ ತಿಳಿಯಲಿಲ್ಲ, ಈ ಪ್ರಕರಣಗಳಲ್ಲೂ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಭಾವನೆ ನನ್ನದಾಗಿದೆ. ಕಾಡು ಕಾಯುವ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ನೀಡಲಿಲ್ಲ ಎಂಬುದನ್ನೆ ಒಂದು ಪ್ರಕರಣದಲ್ಲಿ ಉಲ್ಲೇಖಿಸಲಾಯಿತು. ನಂತರ ಮತ್ತೊಂದು ಹುಲಿಯನ್ನು 3 ತುಂಡಾಗಿ ಕತ್ತರಿಸಿದ ಪ್ರಕರಣದಲ್ಲೂ ನನಗೆ ಸಾಕಷ್ಟು ಅನುಮಾನವಿದ್ದು ಈ ಎರಡು ಪ್ರಕರಣಗಳಲ್ಲಿ ಸಮರ್ಪಕ ತನಿಖೆ ವಿಚಾರದಲ್ಲಿ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಇದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹುಲಿ ಸಾವಿನ ಎರಡು ಪ್ರಕರಣಗಳಲ್ಲಿ ಸತ್ಯಾಂಶ ತಿಳಿಯಲಿಲ್ಲ, ಈ ಪ್ರಕರಣಗಳಲ್ಲೂ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಭಾವನೆ ನನ್ನದಾಗಿದೆ. ಕಾಡು ಕಾಯುವ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ನೀಡಲಿಲ್ಲ ಎಂಬುದನ್ನೆ ಒಂದು ಪ್ರಕರಣದಲ್ಲಿ ಉಲ್ಲೇಖಿಸಲಾಯಿತು. ನಂತರ ಮತ್ತೊಂದು ಹುಲಿಯನ್ನು 3 ತುಂಡಾಗಿ ಕತ್ತರಿಸಿದ ಪ್ರಕರಣದಲ್ಲೂ ನನಗೆ ಸಾಕಷ್ಟು ಅನುಮಾನವಿದ್ದು ಈ ಎರಡು ಪ್ರಕರಣಗಳಲ್ಲಿ ಸಮರ್ಪಕ ತನಿಖೆ ವಿಚಾರದಲ್ಲಿ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಇದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಅರಣ್ಯ ಇಲಾಖೆ ಅಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಪೊಲೀಸರ ಥರ ಅರಣ್ಯ ಸಿಬ್ಬಂದಿ ಅಲ್ಲ, ಅವರು ಜೀವವನ್ನೆ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಸಾಹಸಿಗಳಿದ್ದಂತೆ, ಅರಣ್ಯ ಸಂರಕ್ಷಿಸುವಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಮಹತ್ತರವಾದುದು ಎಂದರು.

ನಮ್ಮ ತಂದೆ ಬಿ.ರಾಚಯ್ಯ ಅರಣ್ಯ ಸಚಿವರಾಗಿದ್ದ ವೇಳೆ ಎಸ್ಸಿ, ಎಸ್ಟಿ ಹಾಗೂ ಇತರೆ ಜನಾಂಗಕ್ಕೆ ನಮ್ಮ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯವನ್ನಾಗಿ ಪರಿವರ್ತಿಸಿ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಅರಣ್ಯ ಇಲಾಖೆ ಆ ಜಾಗಕ್ಕೆ ಅರಣ್ಯ ಇಲಾಖೆ ಜಾಗ ಎಂದು ಬೇಲಿ ಹಾಕಿಕೊಂಡಿದ್ದು ಈ ಸಂಬಂಧ ಸರ್ಕಾರ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಗಂಬೀರವಾಗಿ ಪರಿಗಣಿಸಬೇಕು, ನಮ್ಮ ತಂದೆ ಬಡ ಜನಕ್ಕೆ ನೀಡಿದ್ದ ಭೂಮಿ ಅವರ ಮಗನಾಗಿ ವಾಪಸ್ ಕೊಡಿಸುವುದು ನನ್ನ ಧ್ಯೇಯವಾಗಿದ್ದು ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಈ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹುಲಿ ಸೆರೆಹಿಡಿಯಯವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಪ್ರಶಂಸನಾಪತ್ರ ವಿತರಿಸಿ ಅಭಿನಂದಿಸಲಾಯಿತು.

ಅರಣ್ಯಮಿತ್ರ ಪ್ರಶಸ್ತಿಗೆ ಭಾಜನರಾದ ಹಲವು ಅಧಿಕಾರಿ ಅಧಿಕಾರಿಗಳಿಗೆ ಪುರಸ್ಕಾರ ನೀಡಲಾಯಿತು. ಉಚಿತ ಕಣ್ಣಿನ ತಪಾಸಣೆಗೆ ಒಳಗಾದ ಸಾರ್ವಜನಿಕರಿಗೆ ಉಚಿತ ಕನ್ನಡಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಉಚಿತ ಆಹಾರಧಾನ್ಯ ವಿತರಿಸಲಾಯಿತು.

ಬಳಿಕ ಐದು ಹುಲಿಗಳ ಸೆರೆ ಕುರಿತು ಸಾಕ್ಷ್ಯಚಿತ್ರಗಳನ್ನು ನೆರೆದಿದ್ದ ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ಚಾ.ನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ, ಉಪ ಅರಣ್ಯಸಂರಕ್ಷಣಾಧಿಕಾರಿ ಶ್ರೀಪತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ, ಮಲೈಮಹದೇಶ್ವರ ವನ್ಯಜೀವಿ ವಿಭಾಗ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಶ್ರೀಕಾಂತ್ ಹೊಸೂರು, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವಾರ್, ಕಾವೇರಿ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ.ಚಾ.ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಪವನ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಶ್, ಸಂದೀಪ್, ಮಹಾಲಕ್ಷ್ಮಿ ಇತರರು ಹಾಜರಿದ್ದರು

ತಹಸೀಲ್ದಾರ್ ಬಸವರಾಜು ಉತ್ತಮ ಅಧಿಕಾರಿ

ತಹಸೀಲ್ದಾರ್ ಬಸವರಾಜು ಅವರಿಗೆ ಸರ್ಕಾರ ಬಡ್ತಿ ನೀಡಿದ್ದು ಅವರ ಉಪವಿಭಾಗಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದಾರೆ.

ಅವರೊಬ್ಬ ಉತ್ತಮ ಅಧಿಕಾರಿ. ಸಿ ಎಂ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸುವಲ್ಲಿ ಉತ್ತಮ ರೀತಿ ಕೆಲಸ ಮಾಡಿದ್ದಾರೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಾ.ನಗರದಲ್ಲೂ ಅವರ ದಕ್ಷತೆಯಿಂದ ಕೆಲಸ ಮಾಡಿದ್ದರೂ ಅಲ್ಲಿ ಅವರ ಕೆಲಸ ನೋಡಿ ನಾನೇ ಕೊಳ್ಳೇಗಾಲಕ್ಕೆ ಕರೆಸಿಕೊಂಡೆ, ಅವರಂತೆ ಅರಣ್ಯ ಇಲಾಖಾಧಿಕಾರಿಗಳು ಉತ್ತಮ ರೀತಿ ಕೆಲಸ ಮಾಡಿ, ಅಧಿಕಾರಿಗಳು ಹಾಗೂ ನೌಕರರು ದಕ್ಷತೆಯಿಂದ ಕೆಲಸ ಮಾಡಿ ಹಿರಿಯ ಅಧಿಕಾರಿಗಳುಹಾಗೂ ನಿಮ್ಮ ತಂದೆ, ತಾಯಿಗಳ ಹೆಸರಿಗೆ ಘನತೆ ತರುವಲ್ಲಿ ಶ್ರಮಿಸಿ ಎಂದರು.

ಎಸಿಎಫ್ ಮರಿಸ್ವಾಮಿ ಉತ್ತಮ ಅಧಿಕಾರಿಯಾಗಿದ್ದು ಶೂಟೌಟ್ ಪ್ರಕರಣವನ್ನು ಸಮರ್ಥವಾಗಿ ನಿಬಾಯಿಸಿ ದಕ್ಷತೆ ಮೆರೆದಿದ್ದಾರೆ, ಅವರ ಹೇಳಿಕೆ, ಕಾರ್ಯವೈಖರಿ ಗಮನಿಸಿದ್ದೇನೆ ಎಂದು ಶ್ಲಾಘಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ
ಚನ್ನಗಿರಿಯಲ್ಲಿ ಫ್ರೀ ಫೈರ್‌ ಗೇಮ್‌ಗೆ ಅಪ್ರಾಪ್ತ ಬಲಿ!