ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಪಿಗ್ಮಿ, ಠೇವಣಿ, ಸಾಲಗಾರರ ವತಿಯಿಂದ ನಾಲ್ಕನೇ ದಿನ ನಿರಂತರ ಪ್ರತಿಭಟನೆ ನಡೆಸಲಾಯಿತು.
ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಬಿಡಿಸಿಸಿ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕರು, ಕಾರ್ಯದರ್ಶಿಯ ಆಸ್ತಿ ಮುಟ್ಟುಗೋಲು ಹಾಕಿ ರೈತರ ಹಣವನ್ನು ಹಿಂದಿರುಗಿಸಬೇಕು. ರೈತರು ಹೊಸಕೋಟೆ ಸಹಕಾರ ಸಂಘದ ಹತ್ತಿರ ನಿರಂತರ ಧರಣಿ ಮಾಡುತ್ತಿರುವುದು ಯಾರ ಕಣ್ಣಿಗೆ ಕಾಣುತ್ತಿಲ್ಲ, ಕಿವಿಗೆ ಕೇಳುತ್ತಿಲ್ಲ ಎಂದು ಹೇಳಿದರು.
ಇಲ್ಲಿಗೆ ಈ ಧರಣಿ ನಿಲ್ಲಿಸಿ ದಿನಾಂಕ ನಿಗದಿ ಪಡಿಸಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಧರಣಿ ಮಾಡೋಣ. ಧರಣಿಯಲ್ಲಿ ನಾನು ಕೂಡ ಭಾಗಿಯಾಗಿ ಖರ್ಚು ವೆಚ್ಚ ನೀಡುತ್ತೇನೆ ಎಂದು ಭರವಸೆ ನೀಡಿದರು.ಜಿಲ್ಲಾ ಸಿಪಿಐ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಹೊಸಕೋಟೆ ಸಹಕಾರ ಸಂಘದಲ್ಲಿ ಹಗಲು ದರೋಡೆ ನಡೆದಿದೆ. ರೈತರು ದುಡಿದ ಹಣವನ್ನು ಆಪತ್ಕಾಲಕ್ಕೆಂದು ನಿಧಿಯಾಗಿಟ್ಟಿರುವ ನಾಲ್ಕು ಕೋಟಿ ರು. ದೋಚಿದ್ದಾನೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಬಳಿಗಾನೂರು ಕೊಟ್ರೇಶ್ ಮಾತನಾಡಿ, ರೈತರು ಶ್ರಮಪಟ್ಟು ದುಡಿದ ಭವಿಷ್ಯದ ನಿಧಿಯ ಹಣವು ದುರ್ಬಳಕೆಯಾಗಿದೆ. ಆಡಳಿತದ ವ್ಯವಸ್ಥೆ ಹದಗೆಟ್ಟಿದೆ. ರೈತರ ನಾಲ್ಕು ಕೋಟಿ ದರೋಡೆಯಾಗಿದೆ. ಆ ದರೋಡೆಕೋರನನ್ನು ಬಂಧಿಸಿ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಹಣವನ್ನು ವಸೂಲಿ ಮಾಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಮುಖಂಡರಾದ ಹೊಸಕೋಟೆ ಜಾತಪ್ಪ, ಪಂಚಪ್ಪ, ಸಿದ್ದಲಿಂಗನ ಗೌಡ, ಬೊಮ್ಮಲಿಂಗಪ್ಪ, ಕಬ್ಬಳ್ಳಿ ಕೊಟ್ರೇಶ್, ನಾಗರಾಜ್, ಮಾದಿಹಳ್ಳಿ ನಾಗಣ್ಣ, ಕೊಟ್ರೇಶಪ್ಪ, ತುಂಬಿಗೆರೆ ಶಿವಣ್ಣ, ವನಜಾಕ್ಷಿ, ಕೆರೆಗುಡಿಹಳ್ಳಿ ಬಸವರಾಜ್, ಕೆಂಚಪ್ಪ, ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.