ದುರ್ಬಲ ಕಟ್ಟಡಕ್ಕೆ ಒಸಿ ವಿತರಣೆಯಲ್ಲಿ ಅಕ್ರಮ

KannadaprabhaNewsNetwork |  
Published : Jul 25, 2026, 03:45 AM ISTUpdated : Jul 25, 2026, 04:31 AM IST
Apartment

ಸಾರಾಂಶ

ನಿರ್ಮಾಣ ಲೋಪದ ಕಾರಣಕ್ಕೆ ನೆಲಸಮಕ್ಕೆ ಸಿದ್ಧತೆ ನಡೆಸಿರುವ ಹರಳೂರಿನಲ್ಲಿ ಎಸ್‌ಎನ್‌ಎನ್‌ ರಾಜ್ ಕಾರ್ಪ್ ಡೆವಲಪರ್‌ಗೆ ಸೇರಿದ ಅಪಾರ್ಟ್ ಮೆಂಟ್ ಗಳಿಗೆ ಜಿಬಿಎಯು ವಾಸ ಯೋಗ್ಯ ಪ್ರಮಾಣಪತ್ರ  ವಿತರಿಸಿರುವುದು ಇದೀಗ ಒಸಿ ನೀಡುವ ಮಾನದಂತ ಹಾಗೂ ಅದರ ವಿಶ್ವಾಸಾರ್ಹತೆ ಬಗ್ಗೆಯೇ ಪ್ರಶ್ನೆ ಉದ್ಬವವಾಗುವಂತೆ ಮಾಡಿದೆ.

 ಬೆಂಗಳೂರು :  ನಿರ್ಮಾಣ ಲೋಪದ ಕಾರಣಕ್ಕೆ ನೆಲಸಮಕ್ಕೆ ಸಿದ್ಧತೆ ನಡೆಸಿರುವ ಹರಳೂರಿನಲ್ಲಿ ಎಸ್‌ಎನ್‌ಎನ್‌ ರಾಜ್ ಕಾರ್ಪ್ ಡೆವಲಪರ್‌ಗೆ ಸೇರಿದ ಅಪಾರ್ಟ್ ಮೆಂಟ್ ಗಳಿಗೆ ಜಿಬಿಎಯು ವಾಸ ಯೋಗ್ಯ ಪ್ರಮಾಣಪತ್ರ (ಒಸಿ) ವಿತರಿಸಿರುವುದು ಇದೀಗ ಒಸಿ ನೀಡುವ ಮಾನದಂತ ಹಾಗೂ ಅದರ ವಿಶ್ವಾಸಾರ್ಹತೆ ಬಗ್ಗೆಯೇ ಪ್ರಶ್ಮೆ ಉದ್ಬವವಾಗುವಂತೆ ಮಾಡಿದೆ.

ಸದರಿ ಅಪಾರ್ಟ್‌ಮೆಂಟ್‌ಗೆ ಇದೇ ಏಪ್ರಿಲ್‌ನಲ್ಲಿ ಪಾಲಿಕೆಯಿಂದ ಒಸಿ ನೀಡಲಾಗಿದೆ. ಆದರೆ, ಅದಾದ ಕೆಲವು ದಿನಗಳಲ್ಲೇ ನಿರ್ಮಾಣ ಲೋಪದಿಂದ ಸದರಿ ಕಟ್ಟಡ ವಾಲತೊಡಗಿದ ಕಾರಣ ನೆಲಸಮ ಮಾಡುವ ನಿರ್ಧಾರವನ್ನು ಡೆವಲಪರ್ ತೆಗೆದುಕೊಂಡಿದ್ದಾರೆ.

ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಗರ ಯೋಜನೆ ತಜ್ಞ ಅಶ್ವಿನ್ ಮಹೇಶ್, ‘ಕಟ್ಟಡಕ್ಕೆ ಅಪಾಯವಿದೆ ಎಂದು ಡೆವಲಪರ್ ಸ್ವತಃ ಹೇಳುತ್ತಿದ್ದಾರೆ . ಆದರೂ, ಜಿಬಿಎನಿಂದ ಒಸಿ ವಿತರಿಸಲಾಗಿದೆ. ಹೀಗಾಗಿ, ಒಸಿ ವಿತರಣೆ ಪ್ರಕ್ರಿಯೆಯನ್ನು ಪರಿಶೀಲನೆಗೆ ಒಳಪಡಿಸಲು ಇದು ಸರಿಯಾದ ಸಮಯ. ಏಕೆಂದರೆ, ಒಸಿ ವಿತರಿಸುವ ಅಧಿಕಾರಿಗಳು ತಾಂತ್ರಿಕವಾಗಿ ಸಮರ್ಥವಾಗಿದ್ದಾರೆಯೇ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಲಕ್ಷಾಂತರ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ನೆಲೆಸಿದ್ದು, ಜನರ ಸುರಕ್ಷತೆ ದೃಷ್ಟಿಯಿಂದ ಈ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.

15 ವರ್ಷ ಹಳೇ ಕಟ್ಟಡಗಳು ಪರಿಶೀಲನೆಯಾಗಲಿ:  

ಕೆರೆಗಳ ಸಮೀಪದಲ್ಲಿ ಅಥವಾ ಜರಗು ಮಣ್ಣು ಇರುವ ಪ್ರದೇಶಗಳಲ್ಲಿ 2015ರ ನಂತರ ನಿರ್ಮಿಸಿರುವ ಎಲ್ಲಾ ಅಪಾರ್ಟ್‌ಮೆಂಟ್‌ಗಳ ನೆಲ, ಮಣ್ಣಿನ ಪರೀಕ್ಷೆ ಆಗಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. 

ದುಬೈನಿಂದ ತಜ್ಞರನ್ನು ಕರೆಸಿ ಕಟ್ಟಡ ಡೆಮಾಲಿಷನ್

ವಾಲಿಕೊಂಡಿರುವ ಅಪಾರ್ಟ್‌ಮೆಂಟ್ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ. ಈ ಪ್ರಕ್ರಿಯೆಯನ್ನು ನಡೆಸಲು ದುಬೈ ಸೇರಿದಂತೆ ಹೊರ ದೇಶಗಳಿಂದ ತಜ್ಞರನ್ನು ಡೆವಲಪರ್ ಕರೆಸುತ್ತಿದ್ದಾರೆ ಎಂದು ಜಿಬಿಎ ಮೂಲಗಳು ತಿಳಿಸಿವೆ. ಎರಡು ಅಪಾರ್ಟ್‌ಮೆಂಟ್ ಕಟ್ಟಡಗಳ ನಡುವಿನ ಎಕ್ಸ್‌ಪೆನ್ಷನ್‌ ಜಾಯಿಂಟ್‌ನಲ್ಲಿ ಕ್ರ್ಯಾಕ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ, ಮುಂಜಾಗೃತ ಕ್ರಮವಾಗಿ ಬಿಲ್ಡರ್ ಸ್ವಯಂಪ್ರೇರಿತವಾಗಿ ಕೆಡವಲು ಮುಂದಾಗಿದ್ದಾರೆ. ಆದರೆ, ಕಟ್ಟಡವನ್ನು ಗುಣಮಟ್ಟದೊಂದಿಗೆ ನಿರ್ಮಿಸಿರುವ ಕಾರಣ ಸದ್ಯಕ್ಕೆ ಬೀಳುವ ಯಾವುದೇ ಭೀತಿಯಿಲ್ಲ. ಕಟ್ಟಡ ವಾಲಿಕೊಂಡಿಲ್ಲ ಎಂದು ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದರು. 

ಹಂತ ಹಂತವಾಗಿ ನೆಲಸಮ

ಕಟ್ಟಡವನ್ನು ಸ್ಫೋಟಕ ಬಳಸಿ ಏಕಕಾಲಕ್ಕೆ ಕೆಡವುವ ಬದಲು ಮೇಲಿನಿಂದ ಹಂತ ಹಂತವಾಗಿ ಕೆಡವಲು ಬಿಲ್ಡರ್ ಯೋಜಿಸಿದ್ದಾರೆ. ಕಟ್ಟಡ ಹೊಸದಾಗಿರುವ ಜೊತೆಗೆ ಅಕ್ಕ ಪಕ್ಕದಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡಗಳು ಇರುವ ಕಾರಣ ಹಂತ ಹಂತವಾಗಿ ಕೆಡವಲು ಬಿಲ್ಡರ್ ಯೋಜಿಸಿದ್ದಾರೆಂದು ತಿಳಿದು ಬಂದಿದೆ. 

ಕಟ್ಟಡ ಸಾಮಗ್ರಿ ಸಾಗಣೆ

ಕಟ್ಟಡ ಕೆಡವುತ್ತಿರುವ ಕಾರಣ ಬಾತ್‌ರೂಮ್ ಫಿಟ್ಟಿಂಗ್ಸ್, ಗಾಜುಗಳು, ಕಿಟಕಿ, ಬಾಗಿಲು, ಕಬ್ಬಿಣದ ಗ್ರಿಲ್, ಲಿಫ್ಟ್ ಸೇರಿದಂತೆ ಮರುಬಳಕೆ ಮಾಡಬಹುದಾದ ಎಲ್ಲಾ ಕಟ್ಟಡ ಸಾಮಗ್ರಿ ವಸ್ತುಗಳನ್ನು ಡೆವಲಪರ್ ಶುಕ್ರವಾರ ತೆರವುಗೊಳಿಸುತ್ತಿರುವುದು ಕಂಡು ಬಂತು. 

ಆರಂಭಿಕ ಬೆಲೆ ₹1 ಕೋಟಿಗೂ ಹೆಚ್ಚು 

ಹಾಲಿ ಕೆಡವುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ನ ಆರಂಭಿಕ ಬೆಲೆ ₹1 ಕೋಟಿಗೂ ಹೆಚ್ಚು ಇದೆ. ಎರಡು ಮತ್ತು 3 ಬೆಡ್‌ ರೂಮ್, ಹಾಲ್ ಹೊಂದಿರುವ ಫ್ಲ್ಯಾಟ್‌ ದರ ಗರಿಷ್ಠ ನಾಲ್ಕು ಕೋಟಿ ರು.ವರೆಗೂ ನಿಗದಿಪಡಿಸಲಾಗಿದೆ. ಈಗಾಗಲೇ ಅನೇಕ ಫ್ಲ್ಯಾಟ್‌ಗಳು ಮುಂಗಡ ಪಾವತಿಯೊಂದಿಗೆ ಬುಕ್ಕಿಂಗ್ ಆಗಿದ್ದವು ಎಂದು ಜಿಬಿಎ ಮೂಲಗಳು ತಿಳಿಸಿವೆ. 

ಕೆರೆ ಸಮೀಪದಲ್ಲೇ ನಿರ್ಮಾಣ!

ಕೆಡವಬೇಕಿರುವ ಅಪಾರ್ಟ್‌ಮೆಂಟ್ ‘ಹೊಸ ಕೆರೆ’ ಸಮೀಪದಲ್ಲೇ ನಿರ್ಮಾಣವಾಗಿದೆ. ಅಪಾರ್ಟ್‌ಮೆಂಟ್‌ ಇರುವ ಕಟ್ಟಡವೂ ಈ ಹಿಂದೆ ವೆಟ್‌ಲ್ಯಾಂಡ್ ಆಗಿರಬಹುದು ಅಥವಾ ಸಣ್ಣ ನೀರಿನ ಹಳ್ಳ ಆಗಿದ್ದಿರಬಹುದು. ಗೂಗಲ್ ಅರ್ಥ್‌ ಹಿಸ್ಟಾರಿಕಲ್ ಚಿತ್ರಗಳ ವಿಭಾಗದಲ್ಲಿ 2011ರಲ್ಲಿನ ಚಿತ್ರವನ್ನು ಗಮನಿಸಿದರೆ ವೆಟ್‌ಲ್ಯಾಂಡ್ ಕಾಣಿಸುತ್ತದೆ. ಈ ಕುರಿತಾದ ಹಲವು ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನ.17ರಿಂದ ಬೆಂಗಳೂರು ಟೆಕ್‌ ಸಮ್ಮಿಟ್‌
ಸೈಬರ್‌ ಕ್ರೈಂ, ಡ್ರಗ್ಸ್‌ ಜಾಲ ಮಟ್ಟ ಹಾಕಿ : ಸಲೀಂ