ಕನ್ನಡಪ್ರಭ ವಾರ್ತೆ ಗುಬ್ಬಿ
ಪಾಂಡುರಂಗ ದೇವಸ್ಥಾನದ ಸಮೀಪದ ನಿವೇಶನವು ಅಕ್ರಮವಾಗಿ ಉಳ್ಳವರ ಪಾಲಾಗಿದೆ ಈ ಸ್ವತ್ತನ್ನು ಗ್ರಾಮ ಪಂಚಾಯತಿ ಆಡಳಿತ ಈ ನಿವೇಶನದ ಖಾತೆಯನ್ನು ವಜಾಗೊಳಿಸಬೇಕು. ದಲಿತರಿಗೆ ಮೀಸಲಿರಿಸಿರುವ ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದ ನಿವೇಶನಗಳನ್ನು ಎಲ್ಲಾ ಸಮುದಾಯಗಳಿಗೆ ಜಾತ್ಯತೀತವಾಗಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಚೇಳೂರು ಶಿವನಂದಪ್ಪ ಮಾತನಾಡಿ ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಗ್ರಾಮ ಪಂಚಾಯಿತಿ ಪಿಡಿಒ ಪ್ರಭಾವಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆಗಳು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ನಡೆಯುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಿ ದಲಿತರಿಗೆ, ಬಡವರಿಗೆ ಶೋಷಿತರಿಗೆ ನ್ಯಾಯ ಒದಗಿಸಬೇಕು ಹಾಗೂ ನಿವೇಶನಗಳ ಈ ಸ್ವತ್ತು ಖಾತೆ ಮಾಡಿಕೊಡಲು ಅಕ್ರಮ ಭ್ರಷ್ಟಾಚಾರ ಎಸುಗುತ್ತಿರುವುದು ಬೆಳಕಿಗೆ ಬಂದಿದ್ದು ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ಭ್ರಷ್ಟಾಚಾರದ ವಿರುದ್ಧ ತಾಲೂಕಿನಲ್ಲಿ ಬೃಹತ್ ಪಟ್ಟದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಪ್ರತಿಭಟನಾಕಾರರನ್ನು ಮನವೊಲಿಸಿ, ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಮನವೊಲಿಸಿ ಮಾತನಾಡಿದ ಅವರು ಹರಿದೇವನಹಳ್ಳಿಯಲ್ಲಿ ನಡೆದಿರುವ ನಿವೇಶನಗಳ ಹಂಚಿಕೆಗಳಲ್ಲಿನ ಅಕ್ರಮದ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜುಲೇಖಾಬಿ, ಮಹಮದ್ ಯೂಸುಫ್, ಉಪಾಧ್ಯಕ್ಷೆ ಸುಮಿತ್ರ ಶಿವಯ್ಯ, ನರಸಿಯಪ್ಪ, ರುದ್ರ ಪ್ರಕಾಶ್, ಶಾಂತರಾಜು, ಗಿರೀಶ್, ಗೋವಿಂದರಾಜು, ಶ್ರೀನಿವಾಸ್, ನಾರನಹಳ್ಳಿ ಶಿವು, ನಾರಾಯಣಪ್ಪ, ಶಿವಲಿಂಗಯ್ಯ, ಶಿವಸ್ವಾಮಿ, ಬಾರೆಮನೆ ಗೋಪಿ, ಚಿದನಂದ್, ಶೇಷಪ್ಪ, ಸುರೇಶ್, ಮಹದೇವಯ್ಯ, ಸೇರಿದಂತೆ ನೂರಾರು ಪ್ರತಿಭಟನಾಕಾರರು ಹಾಜರಿದ್ದರು.