ಕನ್ನಡಪ್ರಭ ವಾರ್ತೆ ಬೆಳಗಾವಿ
ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಆಸ್ತಿ ತೆರಿಗೆ ವಿಷಯ ಪ್ರಸ್ತಾಪಿಸಿದ ಅವರು, ಆಸ್ತಿ ತೆರಿಗೆ ಹೆಚ್ಚಳ ಎನ್ನುವುದು ಬೆಳಗಾವಿಯಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ₹1 ಲಕ್ಷ ಇದ್ದವರಿಗೆ ₹20 ಲಕ್ಷ, ₹2 ಲಕ್ಷ ಇದ್ದರೆ ₹40 ಲಕ್ಷ ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ತೆರಿಗೆ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಐಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಎಲ್ಲ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು. ತೆರಿಗೆ ಹೆಚ್ಚಳ ಸಮಸ್ಯೆ ಇಡೀ ಬೆಳಗಾವಿ ನಾಗರಿಕರ ಸಮಸ್ಯೆಯಾಗಿದೆ. ಇದು ಸೂಕ್ಷ್ಮ ವಿಚಾರವೂ ಆಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಾಕಿತು ಮಾಡಿದರು.ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಕಾರಣ ಹೇಳಿ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗುತ್ತಿದೆ. ಕೂಡಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡದಿದ್ದರೇ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಜನರೆ ಕಟ್ಟಿ ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದರು.
----------ಮೇಯರ್‌ಗೆ ಪಾಲಿಕೆ ಸದಸ್ಯರ ಅಭಿನಂದನೆಆಸ್ತಿ ತೆರಿಗೆ ಪಾವತಿಗೆ ಶೇ.5 ರಷ್ಟು ರಿಯಾಯತಿ ದಿನಾಂಕವನ್ನು ಜುಲೈ 30ರವೆಗೆ ವಿಸ್ತರಣೆ ಮಾಡುವಲ್ಲಿ ಶ್ರಮಿಸಿದ ಮೇಯರ್‌ಗೆ ಪಾಲಿಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಹನುಮಂತ ಕೊಂಗಾಲಿ ಮಾತನಾಡಿ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಪ್ಟವೇರ್ ಸ್ಥಗಿತಗೊಂಡಿದ್ದರಿಂದ ಶೇ.5ರ ರಿಯಾಯತಿಯಿಂದ ನಾಗರಿಕರು ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಅವಧಿ ವಿಸ್ತರಿಸುವಂತೆ ನಮ್ಮ ಮನವಿಗೆ ಸ್ಪಂದಿಸಿ, ಸರ್ಕಾರ ಜು.30 ರವರೆಗೆ ಅವಧಿ ವಿಸ್ತರಿಸಿದೆ. ಇದರಿಂದಾಗಿ ನಾಗರಿಕರು ತುಂಬಾ ಅನುಕೂಲವಾಗಿದೆ. ಮೇಯರ್ ಅವರನ್ನು ಅಭಿನಂದಿಸಿದರು.