ಕೆರೆಗಳ ರಕ್ಷಿಸುವಲ್ಲಿ ನೀರಾವರಿ ಇಲಾಖೆ ನಿಷ್ಕ್ರಿಯ

KannadaprabhaNewsNetwork |  
Published : Nov 03, 2025, 01:15 AM IST
೨ಕೆಎಲ್‌ಆರ್-೮ಮುಳಬಾಗಿಲು ತಾಲೂಕು ನಂಗಲಿ ದೊಡ್ಡಕೆರೆಯ ಕೋಡಿ ಹರಿಯುತ್ತಿದ್ದು, ಟ್ಯಾಂಕ್ ಬಂಡ್ ಹತ್ತಿರವಿರುವ ವಾಲ್ ತುಂಬ ಶಿಥಿಲಗೊಂಡಿರುವ ಚಿತ್ರ. | Kannada Prabha

ಸಾರಾಂಶ

ಕೆರೆಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಬೇಕಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದೂವರೆಗೆ ದೊಡ್ಡ ಕೆರೆಗಳತ್ತ ತಲೆಹಾಕದಿದ್ದರೆ ಕೆರೆಗಳ ಆಗುಹೋಗುಗಳ ಬಗ್ಗೆ ಅಲ್ಲಿ ಸಾರ್ವಜನಿಕರಿಗೆ ತೊಂದರೆಗಳಾದರೂ ನೋಡುವವರ್ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆರಾಯನ ಕೃಪೆಯಿಂದ ಕೆರೆಗಳು ತುಂಬಿದ್ದು, ಈ ಕೆರೆಗಳಲ್ಲಿ ಬಹುತೇಕ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಅಲ್ಲದೆ ಕೆಸಿ ವ್ಯಾಲಿ ಯೋಜನೆಯಡಿಯಲ್ಲೂ ಸೇರಿದೆ.

ಸಣ್ಣ ನೀರಾವರಿ ಇಲಾಖೆ ಕೇವಲ ಕಚೇರಿ ಮತ್ತು ಸಭೆ, ಸಮಾರಂಭಗಳಿಗೆ ಸೀಮಿತವಾಗಿದ್ದು, ಕೆರೆಗಳ ಅಭಿವೃದ್ಧಿಯತ್ತ ಗಮನಹರಿಸುತ್ತಿಲ್ಲ. ಇದು ಜಿಲ್ಲೆಯ ದುರದೃಷ್ಟ ಸಂಗತಿ. ಕೆರೆಗಳ ಮೇಲ್ವಿಚಾರಣೆ, ಅಭಿವೃದ್ಧಿ, ಸಂರಕ್ಷಣೆಗಾಗಿಯೇ ನಿಯಮಿತವಾಗಿರುವ ಇಲಾಖೆ, ಎನ್‌ಆರ್‌ಇಜಿಎ ಯೋಜನೆ ಅಡಿಯಲ್ಲಿ ಕೆರೆಗಳ ಕಾಮಗಾರಿ ಮಾಡಲು ಎನ್‌ಓಸಿ ಅವಶ್ಯಕತೆಯಿದೆ.

ಕೋಡಿ ಹರಿದ ಕೆರೆಗಳು

ಮುಳಬಾಗಿಲು ತಾಲೂಕಿನ ನಂಗಲಿ ದೊಡ್ಡಕೆರೆ, ಬ್ಯಾಟನೂರು ಮಾಣಿಕ್ಯ ಕೆರೆ ತುಂಬಿ ಕೋಡಿ ಸಹ ಹರಿದು ಇನ್ನೇನು ಕೋಡಿ ನಿಲ್ಲುವ ಹಂತದಲ್ಲಿದೆ ಆದರೇ ಕೆರೆಗಳು ಕೋಡಿ ಹರಿಯುತ್ತಿರುವ ಮಾಹಿತಿ ಸಣ್ಣ ನೀರಾವರಿ ಮತ್ತು ಕೆಸಿ ವ್ಯಾಲಿ ಯೋಜನೆ ಸಿಬ್ಬಂದಿಯ ಗಮನಕ್ಕೆ ಬಂದಿದೆಯೇ ಎಂದು ಸಾರ್ವಜನಿಕರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.ಕೆರೆಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಬೇಕಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದೂವರೆಗೆ ದೊಡ್ಡ ಕೆರೆಗಳತ್ತ ತಲೆಹಾಕದಿದ್ದರೆ ಕೆರೆಗಳ ಆಗುಹೋಗುಗಳ ಬಗ್ಗೆ ಅಲ್ಲಿ ಸಾರ್ವಜನಿಕರಿಗೆ ತೊಂದರೆಗಳಾದರೂ ನೋಡುವವರ್ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ನೀರಾವರಿ ಇಲಾಖೆ ಬೇಜವಾಬ್ದಾರಿ

ಎಚ್ಚರಿಕೆ ಫಲಕಗಳು ಅಳವಡಿಸದೆ ಪ್ರಾಣಕ್ಕೆ ಕಂಟಕವಾಗಿರುವ ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿ ಇತ್ತೀಚಿಗೆ ನಂಗಲಿ ದೊಡ್ಡಕೆರೆಯಲ್ಲಿ ವಿದ್ಯಾರ್ಥಿಯೊಬ್ಬ ಈಜುವ ಸಮಯದಲ್ಲಿ ಆಯತಪ್ಪಿ ಪ್ರಾಣ ಕಳೆದುಕೊಂಡಿದ್ದಾರೆ, ಕನಿಷ್ಠ ಸೌಜನ್ಯಕ್ಕಾದರೂ ಇದರ ಮಾಹಿತಿ ಪಡೆದಿದ್ದಾರೆಯೇ ಕೆರೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿರುವುದಿಲ್ಲವೇ ಎಂಬುದು ಸಾರ್ವಜನಿಕರು ಸಣ್ಣ ನೀರಾವರಿ ಇಲಾಖಾಧಿಕಾರಿಗಳ ಪ್ರಶ್ನೆಯಾಗಿದೆ.ಸುಮಾರು ೩೯೫ ಎಕರೆಯುಳ್ಳ ನಂಗಲಿ ದೊಡ್ಡಕೆರೆಯ ಬಳಿ ಎಚ್ಚರಿಕೆ ಫಲಕಗಳು ಹಾಗೂ ದೊಡ್ಡಕೆರೆಯ ಮಾಹಿತಿಯನ್ನೂ ಅಳವಡಿಸಿಲ್ಲ. ಕೆರೆಯ ಮಾಹಿತಿ ಮತ್ತು ಆಳದ ಮಾಹಿತಿ ಫಲಕಗಳಲ್ಲಿ ಅಳವಡಿಸಿದ್ದರೆ ಡೇಂಜರ್ ಜೋನ್ ಗುರುತಿಸಿದರೆ ಪ್ರಾಣಗಳನ್ನು ಉಳಿಸಬಹುದಿತ್ತಲ್ವೇ. ನಾಮಕಾವಾಸ್ಥೆ ಎರಡ್ಮೂರು ವರ್ಷಗಳ ಹಿಂದೆ ಕೆರೆ ಟ್ಯಾಂಕ್ ಬಂಡ್ ಮೇಲೆ ಜಂಗಲ್ ತೆರವುಗೊಳ್ಳಿಸಿ ಬಿಲ್ ಮಾಡಿಕೊಂಡು ಹೋದವರು ಮತ್ತೆ ಆ ಕಟ್ಟೆಯ ಮೇಲ್ವಿಚಾರಣೆ ಮಾಡುವ ಕನಿಷ್ಟ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ.

ದೊಡ್ಡಕೆರೆ ವಾಲ್‌ ಶಿಥಿಲ

ನಂಗಲಿ ದೊಡ್ಡಕೆರೆಯ ಕೋಡಿ ಹರಿಯುತ್ತಿದ್ದು, ಟ್ಯಾಂಕ್ ಬಂಡ್ ಹತ್ತಿರವಿರುವ ವಾಲ್ ಶಿಥಿಲಗೊಂಡಿದ್ದರೂ ಅದರ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗುತ್ತಿಲ್ಲ. ಸಾರ್ವಜನಿಕರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಕರೆ ಮಾಡಿ, ಸಂದೇಶ ಕಳುಹಿಸಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಮುಳಬಾಗಿಲು ಕ್ಷೇತ್ರದ ಶಾಸಕರು ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಗಮನಹರಿಸಿ ಕಾಣೆಯಾಗಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣ ಪತ್ತೆ ಮಾಡಿ, ಕೋಡಿ ಹರಿಯುತ್ತಿರುವ ಕೆರೆಗಳ ಪರಿಸ್ಥಿತಿ ಪರಿಶೀಲಿಸುವಂತೆ ಸಾಮಾಜಿ ಕಾರ್ಯಕರ್ತ ನಂಗಲಿ ಕಿಶೋರ್ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ