ರಾಮನಗರ: ಬಯಲು ಸೀಮೆಯಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಶಾಶ್ವತ ನೀರಾವರಿಯ ಕೂಗು ಜೋರಾಗಿ, ನಂತರ ತಣ್ಣಗಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಪೈಪೋಟಿಗೆ ಬಿದ್ದವರಂತೆ ಶಾಶ್ವತ ನೀರಾವರಿ ಯೋಜನೆ ವಿಷಯಗಳನ್ನೇ ಪ್ರಮುಖ ಚುನಾವಣಾ ದಾಳವನ್ನಾಗಿ ಬಳಸಿಕೊಳ್ಳುತ್ತವೆ. ಇದೀಗ ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿಯೂ ನೀರಾವರಿ ಅಸ್ತ್ರ ಪ್ರಯೋಗವಾಗುತ್ತಿದೆ.
ಶಾಶ್ವತ ನೀರಾವರಿ ಯೋಜನೆ ಚರ್ಚೆಗಳು ಆರಂಭಗೊಂಡ ದಿನದಿಂದ ಈವರೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆದ ಚುನಾವಣೆಗಳಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದೇ ಶಾಶ್ವತ ನೀರಾವರಿ ಯೋಜನೆ. ಈ ಹಿಂದೆ ನಡೆದ ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುತೇಕ ಅಭ್ಯರ್ಥಿಗಳ ಭಾಷಣ ಶಾಶ್ವತ ನೀರಾವರಿ ಯೋಜನೆ ಎಂಬ ವಿಷಯದಿಂದಲೇ ಆರಂಭವಾಗುತ್ತಿತ್ತು. ಗೆದ್ದರೆ ನೀರು-ಸೋತರೆ ಹೋರಾಟ ಎಂಬ ಭರವಸೆ ಮಾತುಗಳನ್ನೇ ಕ್ಷೇತ್ರದ ಜನರು ನಂಬಿ ಮತಗಳನ್ನು ಚಲಾಯಿಸುತ್ತಿದ್ದರು. ಈ ಬಾರಿ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತೇವೆಂದು ಹೇಳಿ ಅಭ್ಯರ್ಥಿಗಳು ಆಶೀರ್ವಾದ ಬೇಡುತ್ತಿದ್ದಾರೆ.
ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ಅಸಲಿಗೆ ಎಚ್.ಡಿ.ದೇವೇಗೌಡರದ್ದೇ ಅಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಇನ್ನೊಂದೆಡೆ ಕಣ್ವ ಏತ ನೀರಾವರಿ ಯೋಜನೆಯನ್ನು ಯೋಗೇಶ್ವರ್ ಸಾಕಾರಗೊಳಿಸಿದ್ದೆ ಅಲ್ಲ. ಅದರ ಕಾರಣಕರ್ತರೇ ಬೇರೆ ಎನ್ನುವಂತೆ ಜೆಡಿಎಸ್-ಬಿಜೆಪಿ ಪಾಳೆಯ ಉಯಿಲೆಬ್ಬಿಸುತ್ತಿದೆ. ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರದ ಜತೆಗೆ ಇಡೀ ರಾಮನಗರ ಜಿಲ್ಲೆಗೆ ಕಾವೇರಿ ನೀರು ಹರಿಸುವ ಸತ್ತೇಗಾಲ ನೀರಾವರಿ ಯೋಜನೆ ಹಿಂದೆ ಕೈ ನಾಯಕರ ಪಾತ್ರವಿಲ್ಲ ಎಂದು ದಳ-ಕಮಲ ನಾಯಕರು ಟೀಕೆಯಲ್ಲಿ ತೊಡಗಿದ್ದಾರೆ.ಬೊಂಬೆನಾಡಿಗೆ ಇಗ್ಗಲೂರು ಬ್ಯಾರೇಜ್ ಕೊಡುಗೆ ಜನತಾ ಪರಿವಾರದ್ದು, ಅರ್ಥಾತ್ ಎಚ್.ಡಿ.ದೇವೇಗೌಡರ ಒತ್ತಾಸೆಯ ಫಲ ಎನ್ನುವುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಅದೇ ರೀತಿ ಕಣ್ವ ಏತ ನೀರಾವರಿ ಯೋಜನೆ ಹಿಂದೆ ಮಾಜಿ ಸಚಿವ ಯೋಗೇಶ್ವರ್ ಪರಿಶ್ರಮವಿದೆ. ಇದೆಲ್ಲದರ ನಡುವೆ ಇಡೀ ರಾಮನಗರ ಜಿಲ್ಲೆಗೆ ಜೀವಸೆಲೆ ಆಗಲಿರುವ ಮಹತ್ವಾಕಾಂಕ್ಷಿ ಸತ್ತೇಗಾಲ ನೀರಾವರಿ ಯೋಜನೆ ಜಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಪಾತ್ರ ಮಹತ್ವದ್ದಾಗಿದೆ.
ಬಾಕ್ಸ್.................
ಚನ್ನಪಟ್ಟಣ ಕ್ಷೇತ್ರಕ್ಕೆ ನೀರಾವರಿ ತಂದವನು ನಾನು, 2018ರ ಚುನಾವಣೆಯಲ್ಲಿ ಏಕೆ ಸೋಲಿಸಿದ್ದೀರಿ ಎಂದು ಕೇಳಲು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಬಳಿ ಉತ್ತರ ಪಡೆಯಲು ಯೋಗೇಶ್ವರ್ ಸ್ವಾಭಿಮಾನಿ ಸಂಕಲ್ಪ ನಡಿಗೆ ನಡೆಸಿದರು. ಇದರ ಪರಿಣಾಮ ಆ ಚುನಾವಣೆಯಲ್ಲಿಯೂ ಜನರು ಯೋಗೇಶ್ವರ್ ಕೈ ಹಿಡಿಯಲಿಲ್ಲ. ಬಿಜೆಪಿಯಲ್ಲಿ ಇರುವವರೆಗೆ ಯೋಗೇಶ್ವರ್ ಅವರನ್ನು ಆ ಪಕ್ಷದ ನಾಯಕರೇ ಆಧುನಿಕ ಭಗೀರಥ ಎಂದು ಬಣ್ಣಿಸುತ್ತಿದ್ದರು. ಆದರೀಗ ಯೋಗೇಶ್ವರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುತ್ತಿದ್ದಂತೆ ಕಮಲ ನಾಯಕರು ಅವರ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಯೋಗೇಶ್ವರ್ ಅಲ್ಲ, ನಾನು ಭಗೀರಥ:
ಇದಕ್ಕೆ ಚುನಾವಣೆ ಪ್ರಚಾರದಲ್ಲಿಯೇ ಪ್ರತ್ಯುತ್ತರ ನೀಡಿರುವ ಯೋಗೇಶ್ವರ್, ಬಿಜೆಪಿ ನಾಯಕರಿಗೆ ಚನ್ನಪಟ್ಟಣ ಕ್ಷೇತ್ರದ ನಾಡಿ ಮಿಡಿತವೇ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅನ್ನುವುದೇ ಗೊತ್ತಿಲ್ಲ. 150 ಕೆರೆ ತುಂಬಿಸಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಕೋಟ್ ....................
-ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ
ಕೋಟ್ ................ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕರು ಇಲ್ಲ. ಆದರೂ ಬೇರೆ ಪಕ್ಷಗಳ ಸರ್ಕಾರಗಳಿಗಿಂತಲೂ ಬಿಜೆಪಿ ಸರ್ಕಾರ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದೆ. ಜಲಜೀವನ್ ಮಿಷನ್, ಸತ್ತೇಗಾಲ ಯೋಜನೆ, ನೆಟ್ಕಲ್ ನೀರಾವರಿ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೆಲ್ಲವನ್ನು ಅರಿತಿರುವ ಚನ್ನಪಟ್ಟಣ ಕ್ಷೇತ್ರದ ಮತದಾರರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.
-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಿಜೆಪಿ ನಾಯಕ29ಕೆಆರ್ ಎಂಎನ್ 3,4,5.ಜೆಪಿಜಿ
3.ಇಗ್ಗಲೂರು ಬ್ಯಾರೇಜ್4.ಕಣ್ವ ಡ್ಯಾಂ
5.ಸತ್ತೇಗಾಲ ನೀರಾವರಿ ಯೋಜನೆ