ಬೆಳ್ತಂಗಡಿ : ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಹಸ್ತಾಂತರಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬುಧವಾರ ಆದೇಶಿಸಿದ್ದಾರೆ.
ಸುಜಾತಾ ಭಟ್ ಎಂಬ ವೃದ್ಧೆ, ತಮ್ಮ ಮಗಳು 2003ರಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದ್ದು, ಮಗಳ ನಾಪತ್ತೆ ಸಂಬಂಧ 2025 ಜುಲೈ 15 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು. ಆದರೆ, ಸುಜಾತಾ ಅವರು ದಿನಕ್ಕೊಂದು ಗೊಂದಲದ ಹೇಳಿಕೆ ನೀಡುವ ಮೂಲಕ ಪ್ರಕರಣದಲ್ಲಿ ಸಾಕಷ್ಟು ಗೋಜಲು ಸೃಷ್ಟಿಸಿದ್ದು, ಅನನ್ಯ ಭಟ್ ಕಣ್ಮರೆ ಎಂಬುದೇ ಕಾಲ್ಪನಿಕ ಕತೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸುಜಾತಾ ಅವರಿಗೆ ಮಕ್ಕಳೇ ಇರಲಿಲ್ಲ ಎಂದು ಸುಜಾತ ಭಟ್ ಸಂಬಂಧಿಕರು ಹೇಳಿದ್ದಾರೆ. ಇತ್ತ ತಮ್ಮ ಮಗಳ ಭಾವಚಿತ್ರವೆಂದು ಯುವತಿಯೊಬ್ಬಳ ಫೋಟೋವನ್ನು ಸುಜಾತಾ ಬಿಡುಗಡೆ ಮಾಡಿದ್ದರು. ಆದರೆ ಆ ಭಾವಚಿತ್ರವು 2007ರಲ್ಲಿ ಮೃತಪಟ್ಟಿದ್ದ ವಾಸಂತಿ ಎಂಬಾಕೆಯದ್ದು ಎಂದು ವಾಸಂತಿ ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ಗೊಂದಲಗಳ ಮಧ್ಯೆಯೇ ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಡಿಜಿ ಹಾಗೂ ಐಜಿಪಿ ಅವರ ಆ.19ರ ಆದೇಶದ ಮೇರೆಗೆ ಎಸ್‌ಐಟಿ ತನಿಖೆಗೆ ಹಸ್ತಾಂತರಿಸಲಾಗಿದೆ.
ಎಸ್‌ಐಟಿಗೆ ಸವಾಲು:
ಸುಜಾತಾ ಭಟ್ ಅವರ ದೂರು ಆಧರಿಸಿ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ, ಇದುವರೆಗೆ ಅನನ್ಯ ಇದ್ದಾಳೆಯೇ ಅಥವಾ ಇಲ್ಲವೇ ಎಂಬುದೇ ಖಚಿತವಾಗಿಲ್ಲ. ಈ ಬೆಳವಣಿಗೆ ಮಧ್ಯೆಯೇ ಎಸ್‌ಐಟಿ ತನಿಖೆಗೆ ಆದೇಶಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಧರ್ಮಸ್ಥಳದಲ್ಲಿ ಸಮಾಧಿ ಅಗೆದು ಮೃತದೇಹಗಳಿಗೆ ಹುಡುಕಾಟ ನಡೆಸಿದ್ದ ಎಸ್‌ಐಟಿ, ಈಗ ಯುವತಿ ನಾಪತ್ತೆ ಆರೋಪವು ನೈಜವೇ ಅಥವಾ ಕಾಲ್ಪನಿಕವೇ ಎಂಬುದನ್ನು ರುಜುತುವಪಡಿಸಬೇಕಾದ ಸವಾಲು ಎದುರಾಗಿದೆ.
- 2003ರಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆ ಎಂದು ಸುತಾತಾ ಭಟ್ ದೂರು
- ಆದರೆ ಸುಜಾತಾ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾರಣ ಕೇಸಿನಲ್ಲಿ ಗೊಂದಲ
- ಹೀಗಾಗಿ ಅನ್ಯಾ ಭಟ್ ನಾಪತ್ತೆಯೇ ಕಾಲ್ಪನಿಕ ಎಂಬುದು ಪೊಲೀಸರ ಗುಮಾನಿ
- ಹೀಗಾಗಿ ಈ ಪ್ರಕರಣವನ್ನೂ ತನಿಖೆ ನಡೆಸಲು ವಿಶೇಷ ತನಿಖಾ ತಂಡ ನಿರ್ಣಯ
- ಧರ್ಮಸ್ಥಳದ ನೂರಾರು ಶವ ಹೂತ ಪ್ರಕರಣದ ಜತೆ ಈ ಪ್ರಕರಣವೂ ತನಿಖೆ
--ಆಕೆ ಅನನ್ಯಾ ಅಲ್ಲ, ನನ್ನಸಹೋದರಿ ವಾಸಂತಿ:
ಸೋದರ ವಿಜಯ್