ಚಿಕ್ಕಮಗಳೂರುರಾಜ್ಯ ಸರ್ಕಾರದ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಗರ ನಿವಾಸಿಗಳನ್ನು ಸಕ್ರಮಗೊಳಿಸುವ ಪ್ರಯತ್ನದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಜ್ಯ ಸರ್ಕಾರದ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಗರ ನಿವಾಸಿಗಳನ್ನು ಸಕ್ರಮಗೊಳಿಸುವ ಪ್ರಯತ್ನದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆರೋಪಿಸಿದ್ದಾರೆ.
ತಕ್ಷಣ ಸರ್ಕಾರ ಹೊರಡಿಸಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಕುರಿತ ಅಧಿಸೂಚನೆ ತಕ್ಷಣ ಹಿಂಪಡೆಯಬೇಕು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದಿರುವ ಅಕ್ರಮ ವಲಸಿಗರನ್ನು ರಾಜ್ಯದ ನಾಗರಿಕರನ್ನಾಗಿ ಮಾಡಿ ಅವರಿಗೆ ಮತ ಹಾಕುವ ಹಕ್ಕು ಮತ್ತು ಸರ್ಕಾರಿ ಸೌಲಭ್ಯ ನೀಡುವ ದುರುದ್ದೇಶವಿರುವಂತೆ ಕಾಣುತ್ತಿದ್ದು, ಇದರಿಂದ ರಾಜ್ಯದ ನಿವಾಸಿಗಳು ಆತಂಕ ಪಡುವಂತಾಗಿದೆ. ₹50 ಪಡೆದು ಎನುಮರೇಶನ್ ಫಾರಂ ನೀಡಿದವರು ಮುಂದೆ ಹಣ ಪಡೆದು ನಕಲಿ ಪಿಆರ್‌ಸಿ ನೀಡುವುದಿಲ್ಲ ಎಂದು ನಂಬುವುದು ಹೇಗೆ? ಎಂದು ಪ್ರಶ್ನಿಸಿದರು.
ಸರ್ಕಾರದ ಈ ಕ್ರಮ ರಾಷ್ಟ್ರೀಯ ಭದ್ರತೆ, ಸಂವಿಧಾನಾತ್ಮಕ ವ್ಯವಸ್ಥೆ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಿನ್ನೆಲೆಯಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ದಾಖಲೆಯಿಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿರುವ ಅನುಮಾನ ಮೂಡಿದೆ. ಕೆಲವರು ನ್ಯಾಯಾಲಯ ಹಾಗೂ ಲೋಕ ಅದಾಲತ್ ಮೂಲಕ ಜನನ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದು, ಅದರಲ್ಲಿ ಹೆಚ್ಚಿನವರು ಒಂದೇ ಕೋಮಿನವರಾಗಿರುವುದು ಸಂಶಯಕ್ಕೆ ಕಾರಣವಾಗಿವೆ ಎಂದಿದ್ದಾರೆ.
''''''''ಶಾಶ್ವತ ನಿವಾಸಿ'''''''' ಎಂಬ ಹೊಸ ವರ್ಗ ಸೃಷ್ಟಿಸಲು ರಾಜ್ಯ ಸರ್ಕಾರ ಯಾವ ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ಅಧಿಕಾರದ ಆಧಾರದ ಮೇಲೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದನ್ನು ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
ವಿದೇಶಿಯರನ್ನು ಗುರುತಿಸುವುದು, ಪೌರತ್ವ ಮತ್ತು ವಲಸೆ ಸಂಬಂಧಿತ ಪ್ರಮಾಣೀಕರಣದ ಅಧಿಕಾರ ಕೇಂದ್ರ ಸರ್ಕಾರಕ್ಕೇ ಸೇರಿದೆ.ರಾಜ್ಯ ಸರ್ಕಾರ ಇಂತಹ ಅಧಿಕಾರ ಚಲಾಯಿಸಲು ಮುಂದಾಗಿರುವುದು ಸಂವಿಧಾನಾತ್ಮಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಇದರಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವ್ಯಕ್ತಿಗಳು, ಸಮಾಜಘಾತಕ ಶಕ್ತಿಗಳು ಲಾಭ ಪಡೆಯುವ ಸಾಧ್ಯತೆಗಳಿವೆ ಎಂದರು.ಉದ್ಯೋಗ, ಶಿಕ್ಷಣ ಅಥವಾ ವ್ಯಾಪಾರಕ್ಕಾಗಿ ಕರ್ನಾಟಕದಲ್ಲಿ ನೆಲೆಸಿರುವ ಇತರ ರಾಜ್ಯಗಳ ಜನರು ಅಥವಾ ವಿದೇಶಗಳಿಂದ ಬಂದವರು ಪಿಆರ್‌ಸಿ ವ್ಯಾಪ್ತಿಗೆ ಬರುತ್ತಾರೆಯೇ? ಬಂದರೆ ಅವರ ಅರ್ಹತೆಯನ್ನು ಯಾವ ಮಾನದಂಡದ ಮೇಲೆ ನಿರ್ಧರಿಸ ಲಾಗುತ್ತದೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬೇಕು. ಈ ಪ್ರಮಾಣಪತ್ರ ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ಸರ್ಕಾರಿ ಸೌಲಭ್ಯಗಳಿಗೆ ಆಧಾರ ದಾಖಲೆಯಾಗಿ ಬಳಸುವ ಉದ್ದೇಶ ಇದೆಯೇ ಎಂಬ ಅನುಮಾನವೂ ಜನರಲ್ಲಿ ಮೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಟಿ ರವಿ ಫೋಟೋ ಬಳಸಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.