ಮೂಡುಬಿದಿರೆಯಲ್ಲಿ ಸಮಾನ ಮನಸ್ಕರ ಜನಾಗ್ರಹ ಸಮಾವೇಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಸಮಾಜದಲ್ಲಿ ಸ್ವಂತ ಬದುಕನ್ನು ಜನರ ಏಳಿಗೆಗಾಗಿ ಮೀಸಲಿಟ್ಟರುವ ಧರ್ಮಸ್ಥಳದ ಹೆಗ್ಗಡೆಯವರು ಎಲ್ಲರಿಗೂ ಮಾದರಿಯಾಗುವರು. ಗ್ರಾಮದಲ್ಲಾಗುವ ತಪ್ಪುಗಳಿಗೆ ಧರ್ಮಾಧಿಕಾರಿ ಅವರನ್ನು ಹೊಣೆಗಾರರನ್ನಾಗಿಸುವುದು ಸರಿಯೇ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಮೂಡುಬಿದಿರೆ ವತಿಯಿಂದ ಇಲ್ಲಿನ ಸ್ಕೌಡ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಶನಿವಾರ ನಡೆದ ಸಮಾನ ಮನಸ್ಕರ ಜನಾಗ್ರಹ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.ಧರ್ಮಸ್ಥಳದಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲು ಸಲಹೆ ನೀಡಿ. ಷಡ್ಯಂತ್ರ ನಡೆಸಿ ಅಪಪ್ರಚಾರ ಮಾಡಬೇಡಿ ಎಂದು ಇಂದು ಧರ್ಮಸ್ಥಳಕ್ಕೆ ಬಂದ ಅಪಾಯ ಮುಂದಿನ ದಿನಗಳಲ್ಲಿ ಗ್ರಾಮದ ಧಾರ್ಮಿಕ ಕೇಂದ್ರ, ಬೀಡುಗಳಿಗೂ ಬರಬಹುದು ಎಂದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕರಾವಳಿಯ ದೇವಸ್ಥಾನಗಳು ಎಲ್ಲ ಧರ್ಮಗಳಿಗೂ ಆಶ್ರಯ ನೀಡಿವೆ. ಧರ್ಮಸ್ಥಳ ಅದಕ್ಕೆ ಹೊರತಾಗಿಲ್ಲ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದೆ ಎಂದರು.
ಇಂತಹ ಕ್ಷೇತ್ರಕ್ಕೆ ಕಳಂಕ ತರುವ ಷಡ್ಯಂತ್ರವನ್ನು ಕೆಲವರು ರೂಪಿಸಿದ್ದು ಇದು ಅಕ್ಷಮ್ಯ ಅಪರಾಧವಾಗಿದೆ. ಈ ಕ್ಷೇತ್ರವನ್ನು ಸರ್ಕಾರಿಕರಣಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಎಚ್ಚರಿಸಿದರು.ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿದರು. ಲೇಖಕ, ಖ್ಯಾತ ವಾಗ್ನಿ ಮುನಿರಾಜ ರೆಂಜಾಳ ದಿಕ್ಕೂಚಿ ಭಾಷಣ ಮಾಡಿದರು.ಸಂಘಟಕ ಡಾ.ಎಂ. ಮೋಹನ ಆಳ್ವ ಪ್ರಾಸ್ತಾ ವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳ ಪಟ್ಟಿಮಾಡಿ ಕ್ಷೇತ್ರದ ಮತ್ತು ಧರ್ಮಾಧಿಕಾರಿ ವಿರುದ್ಧ ಷಡ್ಯಂತ್ರವನ್ನು ಖಂಡಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಕೊರಗಪ್ಪ, ಬಿಜೆಪಿ ಮುಖಂಡರಾದ ಸುದರ್ಶನ್ ಎಂ., ಕೆ.ಪಿ ಜಗದೀಶ್ ಅಧಿಕಾರಿ, ಕೃಷ್ಣರಾಜ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಬಸದಿಗಳ ಮೊಕ್ತೇಸರ ಪಟ್ಟಶೆಟ್ಟಿ ಸುಧೇಶ್ ಕುಮಾರ್, ಆದರ್ಶ್ ಅರಮನೆ, ಪ್ರಮುಖರಾದ ಕೃಷ್ಣರಾಜ ಹೆಗ್ಡೆ, ಶ್ವೇತಾ ಜೈನ್, ಶಶಿಧರ್ ನಾಯಕ್, ಅಂಡಾರು ಗುಣಪಾಲ ಹೆಗ್ಡೆ, ಧನಕೀರ್ತಿ ಬಲಿಪ, ವಾಸುದೇವ ನಾಯಕ್, ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಬೆಳುವಾಯಿ ಸೀತಾರಾಮ ಆಚಾರ್ಯ, ಧರಣೇಂದ್ರ ಕುಮಾರ್, ಅಮರ್‌ಕೋಟೆ, ಸುಭಾಶ್ಚಂದ್ರ ಚೌಟ ಸಹಿತ ತಾಲೂಕಿನ ಸಂಘ ಸಂಸ್ಥೆಗಳ, ಧಾರ್ಮಿಕ ಕೇಂದ್ರಗಳ ಮುಖಂಡರು ಉಪಸ್ಥಿತರಿದ್ದರು.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ದ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರವನ್ನು ಇಲ್ಲಿ ನಡೆದ ಬೃಹತ್ ಧರ್ಮಜಾಗೃತಿ ಸಭೆಯಲ್ಲಿ ಖಂಡಿಸ ಲಾಯಿತು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಸತ್ಯಾಸತ್ಯತೆ ಕೂಡಲೇ ಹೊರಬರಬೇಕೆಂದು ಆಗ್ರಹಿಸಿ ರುವ ಸಮಾವೇಶವು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯ ಅಂಗೀಕರಿಸಿತು.