ಸಾರ್ವಜನಿಕರು ನೀರು ಕೇಳುವುದು ತಪ್ಪಾ ?

KannadaprabhaNewsNetwork |  
Published : Jun 17, 2026, 03:15 AM IST
11 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ನಗರದಲ್ಲಿ ನಗರಸಭೆ ಆವರಣದ ಮುಂದೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರ ಮೇಲೆ ಕೇಸ್ ಹಾಕಿದ್ದಾರೆ. ಅಂದಹಾಗೇ ಸಾರ್ವಜನಿಕರು ನೀರಿಗಾಗಿ ಪ್ರತಿಭಟನೆ ಮಾಡುವುದು ತಪ್ಪಾ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್

ನಗರದಲ್ಲಿ ನಗರಸಭೆ ಆವರಣದ ಮುಂದೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರ ಮೇಲೆ ಕೇಸ್ ಹಾಕಿದ್ದಾರೆ. ಅಂದಹಾಗೇ ಸಾರ್ವಜನಿಕರು ನೀರಿಗಾಗಿ ಪ್ರತಿಭಟನೆ ಮಾಡುವುದು ತಪ್ಪಾ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಪ್ರಶ್ನಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳಕಲ್ ನ ಲಕ್ಷ್ಮೀ ನಗರದ ನಿವಾಸಿಗಳು ನೀರಿಗಾಗಿ ನಗರಸಭೆ ಮುತ್ತಿಗೆ ಹಾಕಿದಾಗ ಅವರ ಮೇಲೆ ಕೇಸ್ ದಾಖಲಿಸಿ ಕ್ಷೇತ್ರದಲ್ಲಿ ಮತ್ತೆ ಯಾರು ಪ್ರತಿಭಟಿಸಲು ನಗರಸಭೆಗೆ ಬರೆದ ಹಾಗೆ ನೋಡಿಕೊಳ್ಳಲು ಹಾಗೂ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲು ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಿಡಿಕಾರಿದ್ದಾರೆ.ನಿತ್ಯ ಜನರು ನೀರಿಗಾಗಿ ನಗರಸಭೆಗೆ ಬರುವುದು, ಪ್ರತಿಭಟಿಸುವುದು, ತಮ್ಮ ಹಕ್ಕುಗಳನ್ನು ಕೇಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಅದನ್ನು ಕೇಳಿದವರ ಮೇಲೆ ಎಫ್ಐಆರ್ ಮಾಡುವುದು ಎಷ್ಟು ಸರಿ ಎಂದ ಅವರು, ಈ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅವರು 7 ದಿನದ ಕಾಲಾವಕಾಶ ಕೇಳಿದ್ದಾರೆ. ನೀರಿನ ಸಮಸ್ಯೆ ಸರಿ ಮಾಡುವುದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಕಳೆದ 42 ದಿನಗಳಿಂದ ಇದ್ದಲಗಿ ಹಾಗೂ 10 ಗ್ರಾಮಗಳ ಮುಳುಗಡೆ ಸಂತರಸ್ಥರು ನಮಗೆ ಮೂಲಭೂತ ಸೌಕರ್ಯವಿಲ್ಲ, ನೀರು, ಕರೆಂಟ್ ಇಲ್ಲ. ನಾವು ಇರುವಂತಹ ಶೇಡ್ಡುಗಳನ್ನು ರಿಪೇರಿ ಮಾಡಿ ಕೊಡಿ ಎಂದು 42 ದಿನಗಳಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಒಂದು ಬಾರಿ ಈ ಸ್ಥಳಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಮತ್ತೆ ಅಲ್ಲಿ ತಿರುಗಿಯು ನೋಡಿಲ್ಲ. ಈ ಕ್ಷೇತ್ರದ ಶಾಸಕರು ಸಾರ್ವಜನಿಕರ ಬೇಕುಬೇಡಿಕೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿ ಬತ್ತುತ್ತಿದ್ದರೂ ಕುಡಿಯುವ ನೀರಿಗಿಲ್ಲ ಬರ!
ನಾಮಫಲಕ, ಮೊಹರನಲ್ಲಿ ಶೈಕ್ಷಣಿಕ ತಾಲೂಕು ನಮೂದಿಸಲು ಆದೇಶ