ಕಾಫಿನಾಡಿನಲ್ಲಿಯೂ ಎಸ್ಐಆರ್‌ ಅಕ್ರಮ?

KannadaprabhaNewsNetwork |  
Published : Jul 07, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ನಗರದ ಉಪ್ಪಳ್ಳಿ ವಾರ್ಡ್‌ನಲ್ಲಿ ಸಾವಿರಾರು ಎನುಮೆರೇಶನ್‌ ಫಾರಂ ಕಂತೆಯನ್ನು ಸರ್ಕಾರಿ ಅಧಿಕಾರಿಗಳು, ಕಾಂಗ್ರೆಸ್‌ ಮುಖಂಡರೊಬ್ಬರ ಕೈಗೆ ಹಸ್ತಾಂತರಿಸುವ ಫೋಟೋ ವೈರಲ್‌ ಆಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದ ಉಪ್ಪಳ್ಳಿ ವಾರ್ಡ್‌ನಲ್ಲಿ ಸಾವಿರಾರು ಎನುಮೆರೇಶನ್‌ ಫಾರಂ ಕಂತೆಯನ್ನು ಸರ್ಕಾರಿ ಅಧಿಕಾರಿಗಳು, ಕಾಂಗ್ರೆಸ್‌ ಮುಖಂಡರೊಬ್ಬರ ಕೈಗೆ ಹಸ್ತಾಂತರಿಸುವ ಫೋಟೋ ವೈರಲ್‌ ಆಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಭಾನುವಾರ ಎಸ್‌ಐಆರ್‌ ಸೂಪರ್‌ ವೈಸರ್‌ ಆಗಿರುವ ನಗರ ಸಭೆಯ ಹೆಲ್ತ್‌ ಇನ್ಸ್‌ಪೆಕ್ಟರ್‌ ನಾಗಪ್ಪ ಎಂಬುವವರು ಎನುಮೆ ರೇಶನ್‌ ಫಾರಂ ದೊಡ್ಡ ಕಂತೆಯನ್ನು ಕಾಂಗ್ರೆಸ್‌ನ ಬೂತ್‌ ಏಜೆಂಟ್‌-2 ರಜಾಕ್‌ ಅವರಿಗೆ ನೀಡಲಾಗಿದೆ.

ಇದೇ ರೀತಿ ಕಡೂರು ತಾಲೂಕಿನ ನಿಡಗಟ್ಟ ಗ್ರಾಪಂ ವ್ಯಾಪ್ತಿಯ ಬೂತ್ ಸಂಖ್ಯೆ 67,68 ಹಾಗೂ 69ರಲ್ಲಿ ಮತಗಟ್ಟೆ ಅಧಿಕಾರಿ ಗಳು ಒಂದು ಎನ್ಯುಮರೇಷನ್ ಫಾರಂ ಅನ್ನು ಭರ್ತಿ ಮಾಡಿ, ತಾವು ತೆಗೆದುಕೊಂಡಿದ್ದು, ಇನ್ನೊಂದು ಫಾರಂಗೆ ಸಹಿ ಮಾಡದೆ ಕೇವಲ ಖಾಲಿ ಫಾರಂಗಳನ್ನು ಮನೆ-ಮನೆಗೆ ವಿತರಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ.

ಈ ಬಗ್ಗೆ ಕಡೂರು ತಾಲೂಕು ಚುನಾವಣಾಧಿಕಾರಿ ಹಾಗೂ ಶಿರಸ್ತೆದಾರರಿಗೆ ದೂರವಾಣಿ ಕರೆ ಮಾಡಿದ್ದರೂ ಅವರು ಸ್ಪಂದಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಇದರೊಂದಿಗೆ ಮಸೀದಿ, ದೇವಸ್ಥಾನ, ಪಕ್ಷದ ಮುಖಂಡರ ನಿವಾಸ ಸೇರಿದಂತೆ ಮೊದಲಾದ ಕಡೆ ಒಂದೇ ಕಡೆ ಕುಳಿತು ಎನುಮೆರೇಶನ್‌ ಫಾರಂಗಳನ್ನು ಸಾಮೂಹಿಕವಾಗಿ ವಿತರಣೆ ಹಾಗೂ ಭರ್ತಿ ಕಾರ್ಯ ನಡೆಸಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿವೆ.

-- ಬಾಕ್ಸ್‌--

ಜಿಲ್ಲಾ ಆಡಳಿತದ ಮೌನ: ಬಿಜೆಪಿ ಆರೋಪ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯಲ್ಲಿ ಅಕ್ರಮ ಮತ್ತು ವೋಟ್ ಚೋರಿ ನಡೆಸುತ್ತಿರುವುದು ಗೊತ್ತಿದ್ದರೂ ಸಹ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಆರೋಪಿಸಿದ್ದಾರೆ.

ದೇವಸ್ಥಾನ, ಮಸೀದಿ, ಚರ್ಚು ಅಥವಾ ಖಾಸಗಿ ಗೃಹಗಳಲ್ಲಿ ಮತದಾರರ ತೀವ್ರ ಪರಿಷ್ಕರಣಾ ಕಾರ್ಯ ನಡೆಸುವಂತಿಲ್ಲ ಎಂಬ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮವನ್ನು ಜಿಲ್ಲೆಯಲ್ಲಿ ಗಾಳಿಗೆ ತೂರಿ ಮಸೀದಿಗಳಲ್ಲಿ, ಖಾಸಗಿ ಮನೆಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ ಮತ ಎಣಿಕೆ ನಮೂನೆ ಭರ್ತಿ ನಡೆಸಲಾಗುತ್ತಿದೆ.

ಜಿಲ್ಲಾ ಕೇಂದ್ರ ಸ್ಥಾನ ಚಿಕ್ಕಮಗಳೂರು ನಗರದ ಕಲ್ಯಾಣ ನಗರ, ಟಿಪ್ಪುನಗರ, ಉಪ್ಪಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಾಸವಾಗಿರುವ ಬಾಂಗ್ಲಾ ವಲಸಿಗರನ್ನು ಸೇರಿಸುವ ಯತ್ನಗಳು ಆಡಳಿತ ಪಕ್ಷದ ಕುಮ್ಮಕ್ಕಿನಿಂದ ನಡೆಯುತ್ತಿವೆ ಎಂದು ದೂರಿದ್ದಾರೆ.

--ಬಾಕ್ಸ್‌---ದೂರು ನೀಡಿದರೂ ಪ್ರಯೋಜನವಾಗಿಲ್ಲ

ಎಸ್‌ಐಆರ್‌ನಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಬಿಜೆಪಿಯಿಂದ ಈಗಾಗಲೇ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡ ಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತರೂಢ ಕಾಂಗ್ರೆಸ್‌ ಅಧಿಕಾರ ಬಲದಿಂದ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಅಕ್ರಮ ನಡೆಸುತ್ತಿದೆ. ಹೀಗಾಗಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.-- ಕೋಟ್‌

ಸಾಮೂಹಿಕವಾಗಿ ಎನುಮೆರೇಶನ್‌ ಫಾರಂ ವಿತರಣೆ ಮಾಡಿಲ್ಲ. ಎಸ್‌ಐಆರ್‌ಗೆ ಎಲ್ಲ ಪಕ್ಷದಿಂದ ಪ್ರತಿನಿಧಿಗಳನ್ನು (ಬಿಎಲ್‌ಎ-2) ನೇಮಕ ಮಾಡಿಕೊಳ್ಳಲಾಗಿದೆ. ಅವರ ಸಹಕಾರದಿಂದ ಎಸ್‌ಐಆರ್‌ ನಡೆಸಲು ನಿರ್ದೇಶನವಿದೆ. ಹೀಗಾಗಿ, ಬಿಎಲ್‌ಎ-2 ಬೂತ್‌ ಅಧಿಕಾರಿಗೆ ಸಹಾಯ ಮಾಡಿದ್ದಾರೆ ಎಷ್ಟೇ.

- ಬಸವರಾಜ್‌, ಆಯುಕ್ತರು, ನಗರ ಸಭೆ, ಚಿಕ್ಕಮಗಳೂರು

-- ಬಾಕ್ಸ್‌ --

7.12 ಲಕ್ಷ ಫಾರಂ ವಿತರಣೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಎನುಮೆರೇಶನ್‌ ಫಾರಂ ವಿತರಣೆ ಮಾಡಲಾಗಿದೆ. ಭಾನುವಾರಕ್ಕೆ 6.04 ಲಕ್ಷ ವಿತರಣೆ ಮಾಡಲಾಗಿತ್ತು. 24 ಗಂಟೆಯಲ್ಲಿ ಸೋಮವಾರಕ್ಕೆ 7,12,109 ಎನುಮೆ ರೇಶನ್‌ ಫಾರಂ ವಿತರಣೆ ಪೂರ್ಣಗೊಂಡಿದೆ. ಇನ್ನೂ 95,470 ಭರ್ತಿ ಮಾಡಿದ ಫಾರಂಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧೀಕಾರಿ ಭನ್ವರ್‌ ಸಿಂಗ್‌ ಮೀನಾ ಮಾಹಿತಿ ನೀಡಿದ್ದಾರೆ.

-- ಬಾಕ್ಸ್‌ --

ವಿಧಾನಸಭಾ ಕ್ಷೇತ್ರ ಎನುಮೆರೇಶನ್‌ ಫಾರಂ ವಿತರಣೆ ವಿವರ

ವಿಧಾನಸಭಾ ಕ್ಷೇತ್ರಫಾರಂ ವಿತರಣೆಫಾರಂ ಭರ್ತಿ

ಶೃಂಗೇರಿ1,24,63615,167

ಮೂಡಿಗೆರೆ1,15,58312,910

ಚಿಕ್ಕಮಗಳೂರು1,41,61218,778

ತರೀಕೆರೆ1,63,10925,632

ಕಡೂರು1,67,16923,253

ಒಟ್ಟು7,12,10995,470ಫೋಟೋ

ಚಿಕ್ಕಮಗಳೂರಿನ ಉಪ್ಪಳ್ಳಿ ವಾರ್ಡ್‌ ಬೂತ್‌ ಏಜೆಂಟ್‌ ಮನೆಯಲ್ಲಿ ಅಧಿಕಾರಿಗಳು ಎನುಮೆರೇಶನ್‌ ಫಾರಂ ಕಂತೆಯನ್ನು ಬೂತ್‌ ಏಜೆಂಟ್‌ ರಜಾಕ್‌ ಅವರಿಗೆ ನೀಡುತ್ತಿರುವುದು.(ಪುಟ್ಟ ಸ್ವಾಮಿ ಫೋಟೋ ಇದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ