ಖಾಸಗಿ ಬಸ್ಸುಗಳ ಅಕ್ರಮ ಸಂಚಾರಕ್ಕೆ ಬ್ರೇಕ್‌ ಇಲ್ಲವೇ?

KannadaprabhaNewsNetwork |  
Published : Jun 25, 2025, 01:18 AM IST
೨೪ಕೆಎಲ್‌ಆರ್-೧೧ಖಾಸಗಿ ಬಸ್‌ನ ಬಳಿಯಿರುವ ಜನಜಂಗುಳಿಯ ಚಿತ್ರ. | Kannada Prabha

ಸಾರಾಂಶ

ನೆರೆ ರಾಜ್ಯದ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ನೋಂದಣಿಯಾದ ಖಾಸಗಿ ಬಸ್ಸುಗಳು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮೂಲಕ ಸಂಚರಿಸುವಂತ ಪರ್ಮೀಟ್ ಪಡೆದು ರಾಜಾರೋಷವಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿವೆ. ಆದರೂ ಇಂತಹ ಬಸ್ಸುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಖಾಸಗಿ ಬಸ್ಸುಗಳು ಹಣದಾಸೆಗಾಗಿ ನಿಯಮಗಳನ್ನು ಉಲ್ಲಂಘಿಸಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಸಂಬಂಧವಾಗಿ ಇತ್ತೀಚೆಗೆ ಜಿಲ್ಲಾಧಿಕಾರಿ ಸಂಚಾರ ನಿಯಮಗಳಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಂಚರಿಸುವ ವಾಹನಗಳನ್ನು ಕೂಡಲೇ ವಶಕ್ಕೆ ಪಡೆದು ಪರ್ಮೀಟ್ ರದ್ದುಗೊಳಿಸಿ ದಂಡ ವಿಧಿಸಲು ಆದೇಶ ಹೊರಡಿಸಿ ವಾರ ಕಳೆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.ಪರ್ಮಿಟ್‌ನಲ್ಲಿ ನಿಗದಿಪಡಿಸಿದ ಮಾರ್ಗಗಳನ್ನು ಬಿಟ್ಟು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಮೂಲಕ ಸರ್ಕಾರಿ ಇಲಾಖೆಯ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದರೂ ಆರ್‌ಟಿಒ ಅಧಿಕಾರಿಗಳು ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ.ಪಕ್ಕದ ರಾಜ್ಯಗಳ ಬಸ್‌ ಸಂಚಾರ

ನೆರೆ ರಾಜ್ಯದ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ನೋಂದಣಿಯಾದ ಖಾಸಗಿ ಬಸ್ಸುಗಳು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮೂಲಕ ಸಂಚರಿಸುವಂತ ಪರ್ಮೀಟ್ ಪಡೆದು ರಾಜಾರೋಷವಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿವೆ. ಅಕ್ರಮ ಸಂಚಾರದ ಖಾಸಗಿ ಬಸ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳ ತಮಗೂ ಇದಕ್ಕೂ ಸಂಬಂಧವಿಲ್ಲದವೇ ಇಲ್ಲ ಎನ್ನುವಂತೆ ವರ್ತಿಸುಸುತ್ತಿರುವುದರ ಹಿಂದೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ.

ಕೆಎಸ್ಸಾರ್ಟಿಸಿ ಬಸ್‌ಗಳಿಗೆ ನಷ್ಟ

ಖಾಸಗಿ ಬಸ್‌ಗಳು ಅಕ್ರಮವಾದ ಮಾರ್ಗಗಳಲ್ಲಿ ಸಂಚರಿಸುತ್ತಿರುವುದು ಹೊಸದೇನೂ ಅಲ್ಲ, ತಿಂಗಳ ಮಾಮೂಲಿ ನೀಡುವ ಮೂಲಕ ಹಲವಾರು ವರ್ಷದಿಂದ ಮುಂದುವರೆಸಿಕೊಂಡು ಬಂದಿರುವ ಬಹಿರಂಗ ದಂಧೆಯಾಗಿದೆ. ತೆರಿಗೆ ಸಲ್ಲಿಕೆಯಲ್ಲಿ ಸರ್ಕಾರಕ್ಕೆ ನಾಮ ಹಾಕುವ ಜೊತೆಗೆ ಪರ್ಮೀಟ್ ಪಡೆದಿರುವ ಇತರೆ ಖಾಸಗಿ ಬಸ್‌ಗಳಿಗೆ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಆದಾಯ ನಷ್ಟಕ್ಕೆ ಕಾರಣರಾಗುತ್ತಿವೆ.

ಪರ್ಮೀಟ್ ಪಡೆದಿರುವ ಮಾರ್ಗದಲ್ಲಿ ಸಂಚರಿಸುವುದನ್ನು ಬಿಟ್ಟು ಹೆದ್ದಾರಿಯಲ್ಲಿ ಸಂಚರಿಸುವಂತ ಖಾಸಗಿ ಬಸ್‌ಗಳ ಓಡಾಟದ ಮೇಲೆ ಸಾರಿಗೆ ಇಲಾಖೆಯು ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿ ಖಾಸಗಿ ಬಸ್‌ಗಳಿಗೆ ಜಿ.ಪಿ.ಎಸ್. ಅಳವಡಿಸುವ ಮೂಲಕ ದಂಡಾಸ್ತ್ರ ಪ್ರಯೋಗಿಸಿ ನಿಯಂತ್ರಿಸಲು ಮುಂದಾದರೆ ಮಾತ್ರ ಖಾಸಗಿ ಬಸ್‌ಗಳ ಅಕ್ರಮ ಸಂಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಸಾರಿಗೆ ಇಲಾಖೆಯು ಇದನ್ನು ಪರ್ಮೀಟ್ ಕೊಡುವ ಸಂದರ್ಭದಲ್ಲಿ ಜಿಪಿಎಸ್‌ ಸಾಧನ ಅಳವಡಿಸುವ ಅಗತ್ಯವಿದೆ. ಪರ್ಮಿಟ್ ರಹಿತ ಬಸ್‌ ಸಂಚಾರ

ನಗರದ ಹಳೆ ಬಸ್ ನಿಲ್ದಾಣವು ಬಹುತೇಕ ಖಾಸಗಿ ಬಸ್‌ಗಳ ನಿಲುಗಡೆ ತಾಣವಾಗಿದೆ. ಈ ಭಾಗದಿಂದ ಸಾರ್ವಜನಿಕರು ವಿವಿಧಡೆ ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಆದರೆ ಪರ್ಮಿಟ್ ಪಡೆದಿರುವ ಖಾಸಗಿ ಬಸ್‌ಗಳ ನಿಗದಿಪಡಿಸಿದ ಅವಧಿಗಿಂತ ಮೊದಲು ಬರುವ ಪರ್ಮಿಟ್ ರಹಿತ ಅಕ್ರಮ ಸಂಚಾರ ಬಸ್‌ಗಳು ಸಾರಿಗೆ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ತಮ್ಮ ಬಸ್‌ನಲ್ಲಿ ತುಂಬಿಕೊಂಡು ಹೋಗುತ್ತಿರುವುದು. ಇದರಿಂದ ಪರ್ಮೀಟ್ ಹೊಂದಿರುವಂತ ನಿಗಧಿತ ಅವಧಿಗೆ ಬರಲಿರುವ ಇತರೆ ಖಾಸಗಿ ಬಸ್‌ಗೆ ಪ್ರಯಾಣಿಕರಿಲ್ಲದೆ ನಷ್ಟಕ್ಕೆ ತುತ್ತಾಗುತ್ತಿದೆ ಎಂಬ ಆರೋಪಗಳಿದೆ.ವಿಎಲ್‌ಟಿಡಿ ಅಳವಡಿಸಿ

ಖಾಸಗಿ ಬಸ್‌ಗಳ ಅಕ್ರಮ ಸಂಚಾರಗಳಿಗೆ ಕಡಿವಾಣ ಹಾಕಲು ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಬಸ್‌ಗಳಿಗೆ "ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿಡಿ) ಹಾಗೂ ಎಮರ್ಜೆನ್ಸಿ ಪ್ಯಾನಿಕ ಬಟನ್ " ಅಳವಡಿಸುವಂತೆ ರಾಜ್ಯ ಸರ್ಕಾರವು ಕಳೆದ ೨೦೨೩ರ ನವೆಂಬರ್‌ನಲ್ಲಿ ಆದೇಶಿಸಿದೆ, ಆದರೆ ಈ ಆದೇಶವು ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಇನ್ನು ಅನುಷ್ಠಾನಕ್ಕೆ ತಂದಿಲ್ಲ. .

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ