ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ ಫೌಂಡೇಶನ್ ಅಥವಾ ಸದ್ಗುರು ಸನ್ನಿಧಿಯು ಕರ್ನಾಟಕದ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸರ್ಕಾರದಿಂದ (ಹಿಂದಿನ ಅಥವಾ ಪ್ರಸ್ತುತ) ಯಾವುದೇ ಭೂಮಿ ಅಥವಾ ಹಣವನ್ನು ಪಡೆದಿಲ್ಲ. ಎಲ್ಲಾ ಭೂಮಿಯನ್ನು ಗ್ರಾಮಸ್ಥರಿಂದ (ಭೂಮಾಲೀಕರಿಂದ) ನೇರವಾಗಿ ಹಣ ಪಾವತಿಸಿ ಖರೀದಿಸಲಾಗಿದೆ ಎಂದರು.
ಇಲ್ಲಿ ಈಗ ನಿರ್ಮಾಣ ವಾಗುತ್ತಿರುವ ಲಿಂಗಭೈರವಿ ದೇಗುಲ ಕಟ್ಟಡದ ಎದುರಿನಲ್ಲಿ ನವಗ್ರಹ ದೇವಾಲಯ ಮತ್ತು ಪಕ್ಕದಲ್ಲಿ ಪುರುಷರಿಗಾಗಿ ಸೂರ್ಯ ಪುಷ್ಕರಣಿ, ಮಹಿಳೆಯರಿಗಾಗಿ ಚಂದ್ರ ಪುಷ್ಕರಣಿ ಶೀಘ್ರದಲ್ಲೆ ನಿರ್ಮಾಣವಾಗಿ ಲೋಕಾರ್ಪಣೆ ಗೊಳ್ಳಲಿದೆ. ಫೌಂಡೇಶನ್ ಕೇವಲ ಧಾರ್ಮಿಕ ಕ್ಷೇತ್ರವನ್ನು ಅಷ್ಟೇ ಅಲ್ಲದೆ ಸಮಾಜ ಸೇವಾ ಕಾರ್ಯಕ್ರಮ, ಪರಿಸರ ಅಭಿವೃದ್ಧಿ ಯೋಗ, ಶಿಕ್ಷಣ, ಕ್ರೀಡೆ ಮುಂತಾದ ವಿಭಾಗಗಳಲ್ಲಿ ತೊಡಗಿಕೊಂಡಿದೆ ಎಂದರು.ಮುಂದಿನ ದಿನಗಳಲ್ಲಿ ಈಶ ಸಂಸ್ಥೆಯ ವತಿಯಿಂದ ಪ್ರಾಚೀನ ಗುರುಕುಲ ಪದ್ಧತಿಯನ್ನು ಮರುಕಲ್ಪಿಸುವ ರೀತಿಯಲ್ಲಿ ವಿದ್ಯಾ ಸಂಸ್ಥೆ ಆರಂಭಿಸುವುದು ಒಳಗೊಂಡಂತೆ 10 ಹಲವು ಸುಧಾರಣಾ ಕ್ರಮಗಳನ್ನು ಈ ಭಾಗದ ಜನತೆಗೆ ಪರಿಚಯಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಈಶಾ ಸಂಸ್ಥೆಯ ಕಾರ್ಯಕರ್ತರುಗಳಾದ ,ಪ್ರಣತಿ,ಅಪರ್ಣ,ಸ್ವಾಮಿ ಪ್ರಭೋಧ, ನಿರ್ಮಲ, ಕೃಷ್ಣವೇಣಿ, ವಿನಯ್, ಪ್ರಣವ್, ಲತಾ, ಹರ್ಷ,ರವಿತೇಜ, ಶರತ್.ಮತ್ತಿತರರು ಇದ್ದರು.