ಇಷ್ಟಲಿಂಗವು ಅನಿಷ್ಟ ಪರಿಹಾರಕ: ಬೆಳಗುಂಪಾ ಶ್ರೀಗಳು

KannadaprabhaNewsNetwork |  
Published : Apr 05, 2025, 12:48 AM IST
4ಡಿಡಬ್ಲೂಡಿ6ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ದೀಕ್ಷಾ ಕಾರ್ಯಕ್ರಮದಲ್ಲಿ ಜಂಗಮ ವಟುಗಳಿಗೆ ದೀಕ್ಷೆ ನೀಡಲಾಯಿತು. | Kannada Prabha

ಸಾರಾಂಶ

ನಿತ್ಯವೂ ನಡೆಸುವ ಇಷ್ಟಲಿಂಗ ಪೂಜೆ ಮತ್ತು ಅನುಸಂಧಾನದ ಮೂಲಕ ಸಾಕ್ಷಾತ್ಕಾರದ ಬೆಳಕನ್ನು ಕಾಣಲು ಸಾಧ್ಯ

ಧಾರವಾಡ: ದೀಕ್ಷೆ ನೀಡಿದ ಗುರು ಕರುಣಿಸಿದ ಇಷ್ಟಲಿಂಗವು ಅನಿಷ್ಟ ಪರಿಹಾರಕ. ಸದಾಕಾಲವೂ ಅದನ್ನು ದೇಹದ ಮೇಲೆಯೇ ಧಾರಣೆ ಮಾಡಿರಬೇಕೆಂದು ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಪರ್ವತೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ದೀಕ್ಷಾದಲ್ಲಿ 33 ಜಂಗಮ ವಟುಗಳಿಗೆ ಇಷ್ಟಲಿಂಗ ಕರುಣಿಸಿ ಮಂತ್ರೋಪದೇಶ ಮಾಡಿದ ಅವರು, ನಿತ್ಯವೂ ನಡೆಸುವ ಇಷ್ಟಲಿಂಗ ಪೂಜೆ ಮತ್ತು ಅನುಸಂಧಾನದ ಮೂಲಕ ಸಾಕ್ಷಾತ್ಕಾರದ ಬೆಳಕನ್ನು ಕಾಣಲು ಸಾಧ್ಯ ಎಂದರು.

ಶ್ರೀಮಠದ ಹಿರಿಯ ಹಾಗೂ ಕಿರಿಯ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಸತ್ತಿಗೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ದೀಕ್ಷೆ ಪಡೆದ ವಟುಗಳನ್ನು ಆಶೀರ್ವದಿಸಿದರು. ಗುರುಮೂರ್ತಿ ಯರಗಂಬಳಿಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ರಾಣಿಬೆನ್ನೂರಿನ ಕುಮಾರಶಾಸ್ತ್ರಿ ಹಿರೇಮಠ, ಪ್ರಶಾಂತ ರಾಜಗುರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌