ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಆಸಾರ್ ಶರೀಫ ಮಸೀದಿಯಲ್ಲಿ ಸಾಮೂಹಿಕ ಪ್ರಾಥ೯ನೆ ಸಲ್ಲಿಸಿ ಮಾತನಾಡಿದ ಅವರು, ಕೆಡಕುಗಳಿಂದ ದೂರವಿದ್ದು, ಕೆಡಕು ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು. ಸಮಾಜ ಘಾತಕ ಕೃತ್ಯಗಳಲ್ಲಿ ತೊಡಗಿಕೊಂಡರೇ ಅವನು ಇಸ್ಲಾಮಿಯನು ಅಲ್ಲ, ಮಾನವನೂ ಅಲ್ಲ. ಅವನೊಬ್ಬ ಮಾನವ ಕುಲಕ್ಕೆ ಕಳಂಕ. ಒಂದು ತಿಂಗಳು ಉಪವಾಸ ಮಾಡಿದ ನಂತರ ಇಡೀ ವಷ೯ದ ಉದ್ದಕ್ಕೂ ಸತ್ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಮುಖಂಡರಾದ ಜಾವೀದ್ ಕಿಲ್ಲೆದಾರ, ಮಹಮ್ಮದಗೌಡ ಮುಜಾವರ, ಜಮೀರ್ ಬಾಗಲಕೋಟೆ, ಮೌಲಾನಾ ಖಾದಿಂ, ಸೈಯ್ಯದಾ ಮುಸ್ತಪಾ ಖಾದ್ರಿ, ಸೈಯ್ಯದ್ ಶಹಾ ಅಲೇರ ಸಕಾಫ ಸಾದಾತ, ಸೈಯ್ಯದ್ ಅಲಿಕುರ್ ರೆಹಮಾನ ಸಾದಾತ ಸಕಾಫ, ಸೈಯ್ಯದ್ ನಜಿರುದ್ದೀನ ಸಕಾಫ ಸಾದಾತ, ಸೈಯ್ಯದ್ ಮುತು೯ಜಾ ಖಾದ್ರಿ, ಸಕಾಫ ಸಾದಾತ, ಶಫಿ ವಾಲಿಕಾರ. ಮುಂತಾದವರು ಉಪಸ್ಥಿತರಿದ್ದರು.ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ಮಾನವನಾಗಿ ಮಾರ್ಪಾಡುತ್ತಾನೆ. ಹಸಿವು ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ. ರಂಜಾನ್ ಅಂದರೆ ಸಂತೋಷ, ಸೌಹಾರ್ದ, ತಪಸ್ಸು, ಸಹನೆ ಹಾಗೂ ಜವಾಬ್ದಾರಿಯು ಹೌದು. ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರನ್ನಾಗಿ ಮಾಡುವ ದೇವರು ಅತ್ಯಂತ ಶಕ್ತಿಶಾಲಿ.
-ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ್.