- ತಾಲೂಕು ಕುರುಬ ಸಮಾಜದಿಂದ ಗೌರವ ಸಮರ್ಪಣೆಯಲ್ಲಿ ಭಂಡಾರಿ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ, ಬೀರೂರುಹಿಂದು, ಮುಸ್ಲಿಂ ಕ್ರೈಸ್ತ ಎಂದು ಕಿತ್ತಾಡುವ ಜನರ ಮಧ್ಯೆ ಇತ್ತೀಚಿಗೆ ಜಾತಿ ಬೇಧ ಲೆಕ್ಕಿಸದೇ ನಮ್ಮಂತಹ ಸಮುದಾಯಗಳ ಶಾಸನಗಳನ್ನು ಅಧ್ಯಯನ ಮಾಡಿ ನಮ್ಮ ಕುಲದ ಬಗ್ಗೆ ಅರಿವು ಮೂಡಿಸಿರುವ ಬೀರೂರಿನ ಶಾಸನ ತಜ್ಞ ಡಿ.ಇಸ್ಮಾಯಿಲ್ ಅವರ ಕುರುಬ ಜನಾಂಗದ ಕೊಡುಗೆ ಅಪಾರ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಪಟ್ಟಣದ ರೋಟರಿ ಭವನದಲ್ಲಿ ಶನಿವಾರ ಕುರುಬ ಜನಾಂಗದ ಬಗ್ಗೆ ಪುಸ್ತಕ ರಚಿಸಿರುವ ಬೀರೂರಿನ ಶಾಸನ ತಜ್ಞ ಡಿ.ಇಸ್ಮಾಯಿಲ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಇಸ್ಮಾಹಿಲ್ ಶಾಸನ ಓದುವ ಬಗ್ಗೆ ಹಾಗೂ ಕಡೂರು ತಾಲೂಕಿನಲ್ಲಿ ಸಿಕ್ಕಿರುವ ಶಾಸನಗಳನ್ನು ಓದುವ ಜೊತೆಗೆ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇತ್ತೀಚಿನ ಯುವಕರಿಗೆ ನಮ್ಮ ಸಮುದಾಯದ ಯಾವ ಹೆಣ್ಣು ಮಗಳನ್ನು ತಂದು ಕೊಳ್ಳ ಬಹುದು ಎಂಬ ಅರಿವು ಇಲ್ಲ. ಅಂತಹ ಅನಾಗರಿಕತೆಗಳಿಗೆ ಇವರು ಬರೆದಿರುವ ‘ ಮಧ್ಯಕರ್ನಾಟಕದ ಬೀರ ದೇವರು ಪುಸ್ತಕ” ಸಮಾಜವನ್ನು ಎಚ್ಚರಿಸುವ ಜೊತೆ ಒಗ್ಗೂಡಿಸುವ ಕೆಲಸ ಮಾಡುವುದರಲ್ಲಿ ಸಂದೇಹವಿಲ್ಲ. ಇವರ ಪುಸ್ತಕಗಳನ್ನು ಖರೀದಿಸಿ ಅವುಗಳನ್ನು ಸಮಾಜಕ್ಕೆ ಉಚಿತವಾಗಿ ಹಂಚುವುದ್ದರಿಂದ ನಮ್ಮ ಕುಲ ಇತಿಹಾಸ ಪರಿಚಹಿಸಲು ಅನೂಕುಲ ಎಂದರು.ಆಸಂದಿ ಕುರುಬ ಸಿಂಹಾಸನದ ಅಧ್ಯಕ್ಷ ರೇವಣ್ಣ ಮಾತನಾಡಿ, ಪುಸ್ತಕ ಬರೆದ ಬಗ್ಗೆ ಸಮಾಜಕ್ಕೆ ಮಾಹಿತಿ ಇರಲಿಲ್ಲ. ಕೆಲವು ಮಾಸಿಕ ಪತ್ರಿಕೆಗಳ ವರದಿಗಾರರು ತಿಳಿಸಿದ ಹಿನ್ನಲೆಯಲ್ಲಿ ಸಮಾಜದ ಸಭೆ ನಡೆಸಿ ಅವುಗಳ ಬಗ್ಗೆ ಚರ್ಚಿಸಿದಾಗ ಈ ಪುಸ್ತಕದ ವಿಚಾರ ತಿಳಿದಿದೆ. ಸಮಾಜ ಮತ್ತು ನೌಕರರ ಬಂಧುಗಳ ಸಹಾಯ ಪಡೆದು ಕುರುಬ ಸಮಾಜದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗುವುದು.ಆಸಂದಿ ಸಿಂಹಾಸನ ಪೀಠದ ಗುರುಮಠ ಸ್ಥಾಪನೆಗೆ ₹ 5ಕೋಟಿ ವೆಚ್ಚ ಸಿದ್ಧಪಡಿಸಿದ್ದು, ಸದ್ಯ ಶಾಸಕರ ಅನುದಾನದಡಿ ₹2ಕೋಟಿ ಬಿಡುಗಡೆಯಾಗಿದೆ. ಮುಂದೆ ಪೂರ್ತಿ ಹಣ ಬಿಡುಗಡೆಯಾದರೇ ಕಾಮಗಾರಿ ಪೂರ್ಣವಾಗುವುದು ಎಂದು ಮಾಹಿತಿ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಶಾಸನ ತಜ್ಞ ಡಿ.ಇಸ್ಮಾಯಿಲ್ ಪುಸ್ತಕ ಬರೆಯುವ ಮುನ್ನ ನಮ್ಮ ಸಮಾಜದ ಅನೇಕ ಹಬ್ಬ -ಹುಣ್ಣಿಮೆ, ಸಮಾಜದ ಹಿರಿಯರು-ಬುಡಕಟ್ಟು ಗೌಡರನ್ನು ಭೇಟಿ ಮಾಡಿ ಈ ಪುಸ್ತಕ ಹೊರ ತಂದಿದ್ದಾರೆ. ಬೀರ ದೇವರ ಬಗ್ಗೆ ಅಭಿಮಾನ ಇಟ್ಟು ನಮ್ಮ ಕುಲಕುಲದ ಬಗ್ಗೆ ಅಧ್ಯಯನ ನಡೆಸಿದ ಅವರ ಕಾಳಜಿ ಬಗ್ಗೆ ನಮ್ಮ ಅಪಾರ ಗೌರವವಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸನ ತಜ್ಞ ಡಿ.ಇಸ್ಮಾಹಿಲ್, ನನಗೆ ಇತಿಹಾಸ ತಿಳಿಯಲು ಶಾಸನ ಓದುವುದೇ ಹುಚ್ಚು, ಆದರೆ ಈ ಸಮಾಜ ಕಡೂರು ತಾಲೂಕಿನಲ್ಲೇ ಹೆಚ್ಚಿದ್ದರ ಪರಿಣಾಮ ಇವರ ಹಿನ್ನಲೆ ಬಗ್ಗೆ ಆಳ –ಅರಿಯಲು ಇವರ ಸಮಾಜದ ಮುಂಖಂಡರ ಜೊತೆ ಚರ್ಚಿಸಿ ಅದರ ಸಾಧಕ ಭಾದಕ ಅರಿತು, ಇವರ ಸಮಾಜದ ಇತಿಹಾಸವನ್ನು ಇಂದಿನ ಪೀಳಿಗೆ ಅರಿಯಲಿ ಎಂದು ಪುಸ್ತಕ ಬರೆದೆ ಹೊತರು ಯಾವುದೇ ಸನ್ಮಾನ ಬಯಸಿ ಅಲ್ಲ. ಶಾಸನಗಳು ನಮ್ಮ ಪೂರ್ವಜರು ನಮಗೆ ಮಾಡಿಟಿದ್ದ ಸ್ವತ್ತು .ಅವುಗಳೇ ನಿಜವಾದ ಆಸ್ತಿ. ಅವುಗಳಿಂದ ನಮ್ಮ ಸಂಸ್ಕೃತಿ ಸನಾತನ ತಿಳಿಯುತ್ತದೆ ಎಂದರು.ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ಕಾಂಗ್ರೆಸ್ ನ ಹಿರಿಯ ಹಾಲಪ್ಪ ಸೇರಿದಂತೆ ತಾಲೂಕು ಕುರುಬ ಸಮಾಜದ ಮುಖಂಡರು ಇದ್ದರು.13 ಬೀರೂರು 1ಬೀರೂರು ಪಟ್ಟಣದ ರೋಟರಿ ಭವನದಲ್ಲಿ ಶನಿವಾರ ಶಾಸನ ತಜ್ಞ ಡಿ.ಇಸ್ಮಾಯಿಲ್ ಅವರನ್ನು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸನ್ಮಾನಿಸಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್, ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಪಿ.ನಾಗರಾಜ್ ಇದ್ದರು.