ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಯುದ್ಧಗ್ರಸ್ಥ ಇಸ್ರೇಲ್- ಗಾಜಾ ಪಟ್ಟಿಗೆ ಖುದ್ದು ಭೇಟಿ ನೀಡಿ ವರದಿ ಮಾಡುವ ಪತ್ರಕರ್ತರ ಎದೆಗಾರಿಕೆ ಯಾವ ತೆರನಾಗಿದೆ ಎನ್ನುವುದನ್ನು ಗಾಜಾಪಟ್ಟಿಗೆ ಆಗಮಿಸಿ ವರದಿಗಾರಿಕೆ ಮಾಡುತ್ತಿರುವ ಅಜಿತ್ ಹನುಮಕ್ಕನವರ್ ಅವರ ಕಾರ್ಯವೈಖರಿಯನ್ನು ಕಂಡು ತಿಳಿಯಿತು ಎಂದು ಪ್ರಸಕ್ತ ಇಸ್ರೇಲಿನಲ್ಲಿರುವ ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ಅಕ್ಷಯ್ ಪತ್ರಿಕೆಗೆ ತಿಳಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಇಸ್ರೇಲಿನಲ್ಲಿರುವ ನಮ್ಮ ಪ್ರದೇಶಕ್ಕೆ ಭೇಟಿ ನೀಡಿದ ಅಜಿತ್ ಅವರನ್ನು ಸಂಪರ್ಕಿಸಲು ಹಾಗೂ ಅವರೊಂದಿಗೆ ಭೋಜನ ಸವಿಯುವ ಯೋಗಾಭಾಗ್ಯ ನಮಗೊದಗಿತ್ತು. ಕರ್ನಾಟಕದಿಂದ ಇಸ್ರೇಲಿಗೆ ಬಂದು ಅಲ್ಲಿಂದ ಗಾಜಾಪಟ್ಟಿಗೆ ತೆರಳಿ ಮಿಸೈಲ್ ದಾಳಿಯ ನಡುವೆಯೂ ವರದಿಗಾರಿಕೆ ಮಾಡುತ್ತಿದ್ದ ಅವರನ್ನು ನಾವು ಟಿವಿಯಲ್ಲಿ ನೋಡುತ್ತಿದ್ದೇವು. ಅದೊಂದು ದಿನ ನನ್ನ ಭಾವ ವಿಶ್ವನಾಥ್ ಅವರನ್ನು ಸಂಪರ್ಕಿಸಿದ ಅವರು ನಾವಿರುವ ಪ್ರದೇಶಕ್ಕೂ ಭೇಟಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದರು. ಸಂಭ್ರಮದಿಂದ ನಮ್ಮ ಇಡೀ ತಂಡ ಅವರನ್ನು ಸ್ವಾಗತಿಸಲು ಆಸಕ್ತರಾದೆವು. ಹಾಗೂ ಆ ದಿನದ ರಾತ್ರಿಯ ಊಟವನ್ನು ಅವರೊಂದಿಗೆ ಸವಿಯುವ ಅವಕಾಶವೂ ಪ್ರಾಪ್ತವಾಯಿತು. ಇಸ್ರೇಲ್ ಮೇಲಿನ ದಿಢೀರ್ ದಾಳಿ , ಸಂಭವಿಸಿದ ಸಾವು ನೋವು ಬಳಿಕ ಇಸ್ರೇಲಿನ ಪ್ರತೀಕಾರದ ನಡೆ ಇವುಗಳ ಬಗ್ಗೆ ವಿಚಾರ ವಿಮರ್ಶೆಗಳು ನಡೆಯಿತು. ಅವರೊಂದಿಗೆ ಇದ್ದ ಕ್ಯಾಮರಾಮೆನ್ ಅವರ ಕೈಗೆ ಗಾಯಗಳಾಗಿ ಬ್ಯಾಂಡೇಜ್ ಹಾಕಲಾಗಿತ್ತು. ಗಾಯ ಹೇಗಾಯಿತು ಎಂದು ಪ್ರಶ್ನಿಸಿದಾಗ ನಮ್ಮೆಲ್ಲರನ್ನೂ ನೋಡಿ ಮುಗುಳ್ನಕ್ಕರು. ಇಸ್ರೇಲ್ ಸಾಧಿಸಿದ ಸಾಧನೆಯ ಬಗ್ಗೆ ಆಗಾಧ ಮಾಹಿತಿಯನ್ನು ಸಂಗ್ರಹಿಸಿರುವ ಅವರಿಗೆ ಇಸ್ರೇಲ್ ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಅಧ್ಯಯನ ಮಾಡುವ ಆಸಕ್ತಿಯು ಅವರಲ್ಲಿ ಇರುವುದು ಮಾತುಕತೆಯ ವೇಳೆ ಕಂಡು ಬಂತು. ------------ ಪೋಟೋ ಪೈಲ್ ನೇಮ್ : ಯುಪಿಪಿ_ಅಕ್ಟೋ೨೪_೧ ಅಜಿತ್ ಹನುಮಕ್ಕನವರ್ ಜೊತೆ ಅಕ್ಷಯ್ , ವಿಶ್ವನಾಥ್ ಮತ್ತವರ ಬಳಗ ================================================