ಇಸ್ರೇಲ್- ಇರಾನ್ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಶನಿವಾರ ಪ್ರಯಾಣಿಕರು ತೀವ್ರ ಬವಣೆಪಟ್ಟರು.
ಮಂಗಳೂರು: ಇಸ್ರೇಲ್- ಇರಾನ್ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಶನಿವಾರ ಪ್ರಯಾಣಿಕರು ತೀವ್ರ ಬವಣೆಪಟ್ಟರು.
ಮಧ್ಯಪ್ರಾಚ್ಯದ ಕಡೆಗೆ ಹೋಗುವ ವಿಮಾನಗಳಿಗೆ ಮಂಗಳೂರಿನಿಂದ ನೇರ ಮಾರ್ಗ ಇಲ್ಲದ ಕಾರಣ ಗಲ್ಫ್ ರಾಷ್ಟ್ರಗಳಿಗೆ ತೆರಳಿ ನಂತರ ಸಂಚಾರ ಮುಂದುವರಿಸಬೇಕಿತ್ತು. ಹೀಗಾಗಿ ಮಂಗಳೂರು ಏರ್‌ಪೋರ್ಟ್‌ನಿಂದ ಗಲ್ಫ್ ರಾಷ್ಟ್ರಗಳತ್ತ ಹೊರಟ ಕೆಲವು ವಿಮಾನಗಳನ್ನು ಬೇರೆ ಏರ್‌ಪೋರ್ಟ್‌ಗಳಲ್ಲಿ ಇಳಿಸಲಾಗಿದ್ದರೆ, ಇನ್ನೂ ಕೆಲವು ವಿಮಾನಗಳು ಮಂಗಳೂರಿಗೆ ಮರಳಿವೆ. ಅದೇ ರೀತಿ ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಕೆಲವು ವಿಮಾನಗಳ ಸಂಚಾರವನ್ನೂ ರದ್ದು ಮಾಡಲಾಗಿದೆ.IX 831 (ಮಂಗಳೂರು- ದುಬೈ) ವಿಮಾನ ಟೇಕಾಫ್ ಆದ ಕೆಲ ಹೊತ್ತಿನ ಬಳಿಕ ಮಂಗಳೂರು ಏರ್‌ಪೋರ್ಟ್‌ಗೆ ವಾಪಸಾಗಿದೆ. ಇದರಲ್ಲಿ 174 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು.IX 821 (ಮಂಗಳೂರು- ದೋಹಾ) ವಿಮಾನವನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಇಳಿಸಲಾಯಿತು. 6E 1467 (ಮಂಗಳೂರು- ದುಬೈ) ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.IX 822 (ದೋಹಾ- ಮಂಗಳೂರು, ಆಗಮನ ಸಮಯ- 20.45) ವಿಮಾನ ಸಂಚಾರ ರದ್ದು ಮಾಡಲಾಗಿದೆ. IX 832 (ದುಬೈ- ಮಂಗಳೂರು, ಆಗಮನ ಸಮಯ- 22.10) ವಿಮಾನ ಸಂಚಾರವೂ ರದ್ದಾಗಿದೆ.ಸಂಚಾರ ರದ್ದಾದ ವಿಮಾನಗಳು: ಮಂಗಳೂರು ಏರ್‌ಪೋರ್ಟ್‌ನಿಂದ 13:20ಕ್ಕೆ ಹೊರಡಲಿದ್ದ IX 831 ಮಂಗಳೂರು- ದುಬೈ ವಿಮಾನ, 23.10ಕ್ಕೆ ಹೊರಡಲಿದ್ದ IX 847 ಮಂಗಳೂರು- ದಮ್ಮಾಮ್ ವಿಮಾನ, 20.15ಕ್ಕೆ ಹೊರಡಲಿದ್ದ IX 813 ಮಂಗಳೂರು- ದುಬೈ ವಿಮಾನ, 22.05ಕ್ಕೆ ಹೊರಡಲಿದ್ದ IX 851 ಮಂಗಳೂರು- ಕುವೈತ್ ವಿಮಾನ, 23.20ಕ್ಕೆ ಹೊರಡಲಿದ್ದ IX 815 ಮಂಗಳೂರು- ಅಬುಧಾಬಿ ವಿಮಾನ, 19.15ಕ್ಕೆ ಹೊರಡಲಿದ್ದ 6E 1467 ಮಂಗಳೂರು- ದುಬೈ ವಿಮಾನ ಸಂಚಾರ ರದ್ದು ಮಾಡಲಾಗಿದೆ.
ವಿಮಾನ ರದ್ದಾದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.