ಕನ್ನಡಪ್ರಭ ವಾರ್ತೆ ಯಾದಗಿರಿ
ಮೂರು ವಿಧದ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸ್ಮರಣ ಶಕ್ತಿ ಪರೀಕ್ಷಿಸುವ ಸ್ಪರ್ಧೆ, ಬಾಹ್ಯಾಕಾಶ, ಇಸ್ರೋ ಮತ್ತು ಸಾಮಾನ್ಯ ವಿಜ್ಞಾನದ ಬಗ್ಗೆ ಬಹು ಆಯ್ಕೆ ಪ್ರಶ್ನೆಗಳುಳ್ಳ ರಸಪ್ರಶ್ನೆ ಸ್ಪರ್ಧೆಗಳು, ಪಿಕ್ ಆ್ಯಂಡ್ ಸ್ಪೀಕ್, ವಿದ್ಯಾರ್ಥಿಯು ಒಂದು ಚೀಟಿಯನ್ನು ಆರಿಸಿಕೊಳ್ಳಬೇಕು. ಅದರಲ್ಲಿ ಬರೆದಿರುವ ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಕನಿಷ್ಠ 2 ನಿಮಿಷ ಮಾತನಾಡಬೇಕು. ಇದು ವಿದ್ಯಾರ್ಥಿಗಳ ಭಾಷಣ ಕಲೆ ಮತ್ತು ವಿಷಯದ ಜ್ಞಾನ ಪರೀಕ್ಷಿಸುವ ಸ್ಪರ್ಧೆಯಾಗಿದೆ.
*ರಾಕೆಟ್ ಕ್ರಾಂತಿ " ಥೀಮ್ ಹೆಸರಲ್ಲಿ ಸಪ್ತಾಹ: ಜಗತ್ತಿನ ಮೊದಲ ಮಾನವ ನಿರ್ಮಿತ ಉಪಗ್ರಹ ''''''''ಸ್ಪುಟ್ನಿಕ್-1'''''''' ಅನ್ನು ರಷ್ಯಾ ಉಡಾವಣೆ ಮಾಡಿದ ದಿನ ಸ್ಮರಣೆ ಹಾಗೂ ಬಾಹ್ಯಾಕಾಶವನ್ನು ಶಾಂತಿಯುತ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂಬ ಐತಿಹಾಸಿಕ ಒಪ್ಪಂದಕ್ಕೆ ವಿಶ್ವಸಂಸ್ಥೆ ಸಹಿ ಹಾಕಿದ ದಿನದ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಅ. 4 ರಿಂದ 10 ರವರೆಗೆ, ಬಾಹ್ಯಾಕಾಶದ ಸಾಧನೆಗಳನ್ನು ಸ್ಮರಿಸಲು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಪ್ರೊ. ಯು. ಆರ್. ರಾವ್ ಉಪಗ್ರಹ ಕೇಂದ್ರ (ISRO-URSC) ವತಿಯಿಂದ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಕೆಟ್ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಕ್ರಾಂತಿ, ಮರುಬಳಕೆ ಮಾಡಬಹುದಾದ ರಾಕೆಟ್‌ಗಳು, ಭವಿಷ್ಯದ ಅಂತರಗ್ರಹಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಈ ವರ್ಷದ "ರಾಕೆಟ್ ಕ್ರಾಂತಿ " ಥೀಮ್ ಹೆಸರನ ಸಪ್ತಾಹದ ಉದ್ದೇಶ.*ಇಸ್ರೋ ಇಂಜಿನೀಯರ್ ಡಾ.ವೆಂಕಟೇಶ ಉಪಸ್ಥಿತಿ: ಬೆಂಗಳೂರಿನ ಯು. ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ಹಿರಿಯ ಇಂಜಿನೀಯರ್ ಹಾಗೂ ಸಾಫ್ಟ್‌ವೇರ್ ಟೆಸ್ಟಿಂಗ್ ಮತ್ತು ಐಎಸ್‌ಒ ಸಪೋರ್ಟ್ ವಿಭಾಗದ ಮುಖ್ಯಸ್ಥರಾಗಿರುವ, ಯಲಸತ್ತಿ ಗ್ರಾಮ ಮೂಲದ ಇಸ್ರೋ ಸಂಸ್ಥೆಯ ಡಾ. ವೆಂಕಟೇಶ್ ಸಹಿತ 15 ಜನ ಇಸ್ರೋ ವಿಜ್ಞಾನಿಗಳ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾಗವಹಿಸುವ ವಿದ್ಯಾರ್ಥಿಗಳು ಇಸ್ರೋ ವಿಜ್ಞಾನಿಗಳನ್ನು ನೇರವಾಗಿ ಭೇಟಿಯಾಗಿ, ರಾಕೆಟ್ ಮಾದರಿಗಳನ್ನು ಹತ್ತಿರದಿಂದ ನೋಡುವ ಅಪರೂಪದ ಅವಕಾಶ ಇದಾಗಿದೆ.