ಐಟಿ, ಬಿಟಿ ಕಂಪನಿಗಳಿಂದ ಕನ್ನಡ ಭಾಷೆಯ ಅರ್ಜಿ ತಿರಸ್ಕಾರಕ್ಕೆ ಕಿಡಿ

KannadaprabhaNewsNetwork |  
Published : Oct 26, 2026, 01:45 AM IST
ಕ್ಯಾಪ್ಷನ25ಕೆಡಿವಿಜಿ42 ನಾಗೇಂದ್ರ ಬಂಡೀಕರ್ | Kannada Prabha

ಸಾರಾಂಶ

IT, BT companies spark rejection of Kannada language application

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕದ ನೆಲದಲ್ಲಿ ಸ್ಥಾಪಿಸಿರುವ ಐಟಿ, ಬಿ.ಟಿ., ಕಂಪನಿಗಳು ಕನ್ನಡ ನೆಲದಲ್ಲಿ ಆಶ್ರಯ ಪಡೆದಿದ್ದು, ನೆಲ, ಜಲ, ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸುವುದಲ್ಲದೇ ಕನ್ನಡ ಭಾಷೆಯನ್ನು ಕಲಿಯುವುದರ ಮೂಲಕ ನಾಡ ಗೌರವ ಸಲ್ಲಿಸಬೇಕೆಂದು ಹಿರಿಯ ಕನ್ನಡಪರ ಹೋರಾಟಗಾರ, ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಕಂಪನಿಗಳಿಗೆ ಒತ್ತಾಯಿಸಿದ್ದಾರೆ.ಖಾಸಗಿ ಕಂಪನಿಯೊಂದಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿ ತನ್ನ ಮಾತೃಭಾಷೆ ಕನ್ನಡ ಎಂದು ನಮೂದಿಸಿದ್ದರಿಂದಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ದಿನಾಂಕ 25ರ ಪತ್ರಿಕೆಯಲ್ಲಿ ಬಂದಿರುವ ಸುದ್ದಿ ನಿಜಕ್ಕೂ ಆಘಾತಕಾರಿ ವಿಚಾರ.

ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ರಾಜ್ಯ ಸರ್ಕಾರದ ಸೌಲಭ್ಯ ಪಡೆದು ಕನ್ನಡಿಗರನ್ನು ಕಡೆಗಣಿಸುವ ಇಂತಹ ಕಂಪನಿಗಳ ಪರವಾನಗಿಯನ್ನು ರಾಜ್ಯ ಸರ್ಕಾರ ಯಾವುದೇ ಮುಲಾಜಿಲ್ಲದೇ ರದ್ದುಗೊಳಿಸಬೇಕು, ಸರ್ಕಾರ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಬೇಕು ಮತ್ತು ದುರ್ವರ್ತನೆ ತೋರುವ ಕಂಪನಿಗಳಲ್ಲಿ ಕೆಲಸ ಮಾಡುವ ಕನ್ನಡಿಗ ನೌಕರರ ಅಥವಾ ಕಾರ್ಮಿಕರಿಗೆ ಉದ್ಯೋಗ ಭರವಸೆ ನೀಡುವುದರ ಜೊತೆಗೆ ಅಂತಹ ನೌಕರ ವರ್ಗದವರ ಬೆಂಬಲಕ್ಕೆ ನಿಲ್ಲಬೇಕು ಎಂದು ನಾಗೇಂದ್ರ ಬಂಡೀಕರ್, ಉಪಾಧ್ಯಕ್ಷ ಬಿ.ಎಸ್. ಪ್ರವೀಣ್ ಪಲ್ಲೇದ್ ಒತ್ತಾಯಿಸಿದ್ದಾರೆ.

.........

ಪೋಟೊ: 25ಕೆಡಿವಿಜಿ42 ನಾಗೇಂದ್ರ ಬಂಡೀಕರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕಾಶಿ ಜತೆ ದಾವಣಗೆರೆ ಈಗ ಸಾಹಿತ್ಯ ನಗರಿ!
ಮೀಸಲಾತಿ ಅವಕಾಶ ವಂಚಿತರಿಗೆ ಮುನ್ನಡೆಯ ದಾರಿ: ಸಿಎಂ ಡಿ.ಕೆ.ಶಿವಕುಮಾರ್